ವಿದ್ಯುತ್‌ ನೀಡದಿದ್ದಕ್ಕೆ ಅಖಿಲೇಶ್‌ ಯಾದವ್‌ ಮೊದಲು ಕ್ಷಮೆಯಾಚಿಸಲಿ: ಯೋಗಿ ಆದಿತ್ಯನಾಥ್

Public TV
1 Min Read

ಲಕ್ನೋ: ಒಂದು ಕಾಲದಲ್ಲಿ ರಕ್ಷಣೆಗಾಗಿ ಬಳಸಲಾಗುತ್ತಿದ್ದ ರಾಂಪುರಿ ಚಾಕುಗಳನ್ನು ನಂತರದ ದಿನಗಳಲ್ಲಿ ಬಡವರು ಮತ್ತು ದಲಿತರ ಭೂಮಿಯನ್ನು ಆಕ್ರಮಿಸಿಕೊಳ್ಳಲು ಬಳಸುವ ಸಾಧನಗಳಾಗಿ ಪರಿವರ್ತಿಸಲಾಗಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಮಾಜವಾದಿ ಪಕ್ಷದ ಆಡಳಿತದ ಅವಧಿಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ರಾಂಪುರದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ಒಂದು ಕಾಲದಲ್ಲಿ ರಕ್ಷಣೆಗಾಗಿ ಬಳಸಲಾಗುತ್ತಿದ್ದ ರಾಂಪುರಿ ಚಾಕುಗಳನ್ನು ಸಮಾಜವಾದಿ ಪಕ್ಷದ ಆಡಳಿತದ ಅವಧಿಯಲ್ಲಿ ದಲಿತರ ಭೂಮಿ ಮತ್ತು ಬಡವರ ಆಸ್ತಿಯನ್ನು ವಶಪಡಿಸಿಕೊಳ್ಳಲು ಬಳಸುವ ಸಾಧನಗಳಾಗಿ ಪರಿವರ್ತಿಸಲಾಗಿತ್ತು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಕೊರೊನಾ ತಡೆಗಟ್ಟುವಲ್ಲಿ ಕೇಜ್ರಿವಾಲ್ ಸರ್ಕಾರ ವಿಫಲ: ಚರಣ್‌ಜಿತ್ ಸಿಂಗ್

ಚುನಾವಣೆ ಹಿನ್ನೆಲೆ ಶನಿವಾರ ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ 300 ಯೂನಿಟ್‍ಗಳಷ್ಟು ಉಚಿತ ವಿದ್ಯುತ್ ಪೂರೈಸುವುದಾಗಿ ಭರವಸೆ ನೀಡಿರುವುದಾಗಿ ಕೇಳಿದೆ. ಆದರೆ ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದ ಮೂಲೆ, ಮೂಲೆಗೂ ವಿದ್ಯುತ್ ತಲುಪುವಂತೆ ನೋಡಿಕೊಳ್ಳಲಾಗಲಿಲ್ಲ. ಈಗ ಯಾವ ಆಧಾರದ ಮೇಲೆ ಉಚಿತ ವಿದ್ಯುತ್ ಕೊಡುತ್ತಾರೆ? ಈ ವಿಚಾರವಾಗಿ ಅಖಿಲೇಶ್ ಯಾದವ್ ಅವರು ಸಾರ್ವಜನಿಕವಾಗಿ ಎಲ್ಲರ ಬಳಿ ಕ್ಷಮೆ ಯಾಚಿಸಬೇಕು ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: Whatsapp – ಒಂದೇ ತಿಂಗಳಲ್ಲಿ ಭಾರತೀಯರ 17 ಲಕ್ಷ ಖಾತೆಗಳು ಬ್ಯಾನ್‌

ಅಖಿಲೇಶ್ ಯಾದವ್ ಅವರು, ನಮ್ಮ ಸರ್ಕಾರ ಇದ್ದಿದ್ದರೆ ನಾವು ಸಹ ಭವ್ಯವಾದ ರಾಮಮಂದಿರವನ್ನು ನಿರ್ಮಿಸುತ್ತಿದ್ದೇವು ಎಂದು ಹೇಳುತ್ತಾರೆ. ಆದರೆ ಸ್ಮಾಶಾನಗಳನ್ನು ನಿರ್ಮಿಸುವುದಕ್ಕೇ ಅವರಿಗೆ ಸಮಯ ಉಳಿದಿರಲಿಲ್ಲ. ಸಮಯ ಇದ್ದಿದ್ದರೆ ರಾಮಮಂದಿರ ನಿರ್ಮಾಣದ ಬಗ್ಗೆ ಯೋಚಿಸುತ್ತಿದ್ದರು. ಜೊತೆಗೆ ಅಖಿಲೇಶ್ ಯಾದವ್ ಅವರ ಅಧಿಕಾರಾವಧಿಯಲ್ಲಿ ರಾಮಭಕ್ತರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *