ಕಾಶ್ಮೀರ್‌ ಫೈಲ್ಸ್‌ನಂತೆ ಲಖಿಂಪುರ್‌ ಫೈಲ್ಸ್‌ನ್ನು ಯಾಕೆ ಮಾಡ್ಬಾರ್ದು: ಅಖಿಲೇಶ್ ಯಾದವ್ ಪ್ರಶ್ನೆ

Public TV
1 Min Read

ಲಕ್ನೋ: ಕಾಶ್ಮೀರದ ಕುರಿತಾದ ಸಿನೆಮಾ ದಿ ಕಾಶ್ಮೀರ್‌ ಫೈಲ್ಸ್‌ನ್ನು ಮಾಡಬಹುದಾದರೆ, ಲಖಿಂಪುರ್‌ ಫೈಲ್ಸ್‌ನ್ನು ಮಾಡಬಾರದು ಎಂದು ಸಮಾಜವಾದಿ ಪಕ್ಷದ(ಎಸ್‍ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಡೆದ ಹಿಂಸಾಚಾರದ ಕುರಿತು ಸಿನಿಮಾ ಮಾಡಬಹುದಾದರೇ, ಲಖಿಂಪುರದಲ್ಲಿ ಪ್ರತಿಭಟನಾನಿರತ ರೈತರ ಗುಂಪಿನ ಮೇಲೆ ಜೀಪ್ ಹರಿಸಿದ ಘಟನೆ ಮೇಲೆ ಲಖಿಂಪುರ ಫೈಲ್ಸ್‌ಗಳನ್ನು ಏಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಕಳೆದ ವರ್ಷ ಅಕ್ಟೋಬರ್ 3ರಂದು, ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ರೈತರ ಮೇಲೆ ಕೇಂದ್ರ ಸಚಿವರೊಬ್ಬರ ಪುತ್ರನ ಜೀಪ್ ಹರಿಸಿದ್ದರು. ಇದರಿಂದಾಗಿ ಲಖಿಂಪುರದಲ್ಲಿ ಹಿಂಸಾಚಾರ ಅಧಿಕವಾಗಿತ್ತು. ಈ ಘಟನೆಯಲ್ಲಿ ನಾಲ್ವರು ರೈತರು ಹಾಗೂ ಪತ್ರಕರ್ತರೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ – ಆದಿತ್ಯ ರಾವ್‍ಗೆ 20 ವರ್ಷ ಜೈಲು ಶಿಕ್ಷೆ

ರಾಜ್ಯದಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚುನಾವಣೆಯ ಕುರಿತು ಪ್ರತಿಕ್ರಿಯಿಸಿದ ಅವರು, ಮತದಾರರ ಬೆಂಬಲದಿಂದ ಸಮಾಜವಾದಿ ಪಕ್ಷದ ಶೇಕಡಾವಾರು ಮತಗಳು ಮತ್ತು ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.

ನಮಗೆ ನೈತಿಕ ಜಯ ಸಿಕ್ಕಿದೆ. ಭವಿಷ್ಯದಲ್ಲಿ ಬಿಜೆಪಿಯ ಸ್ಥಾನಗಳು ಕಡಿಮೆ ಆಗಲಿದೆ. ಬಿಜೆಪಿಯ ಜಯದ ಹಾದಿಯಲ್ಲಿ ಇನ್ನೂ ಮೂಲಭೂತ ಸಮಸ್ಯೆಗಳಿವೆ. ಯುವಜನರಲ್ಲಿ ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ಹೆಚ್ಚುತ್ತಿದೆ. ಅದನ್ನು ರಾಜ್ಯದಲ್ಲಿ ಆಡಳಿತ ಪಕ್ಷವು ಇನ್ನೂ ಪರಿಹರಿಸಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ

ಉತ್ತರಪ್ರದೇಶ ಚುನಾವಣೆಯಲ್ಲಿ 403 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 255 ಸ್ಥಾನಗಳನ್ನು ಗೆದ್ದಿದ್ದರೆ, ಎಸ್‍ಪಿ ಪಕ್ಷ 111 ಸ್ಥಾನಗಳನ್ನು ಪಡೆದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *