ಸಂಸತ್‌ ಭವನ ಪಕ್ಕದ ಮಸೀದಿಯಲ್ಲಿ ಎಸ್ಪಿ ಸಂಸದರೊಟ್ಟಿಗೆ ಅಖಿಲೇಶ್‌ ಯಾದವ್‌ ಸಭೆ – ಕೆರಳಿದ ಬಿಜೆಪಿ

Public TV
1 Min Read

– ಬಿಜೆಪಿ ವಿಭಜನೆ ಮಾಡೋದನ್ನೇ ನೋಡ್ತಿದೆ ಅಂತ ಎಸ್ಪಿ ಮುಖ್ಯಸ್ಥ ತಿರುಗೇಟು
– ಅಖಿಲೇಶ್‌ ಕ್ಷಮೆಯಾಚಿಸುವಂತೆ ವಕ್ಫ್‌ ಮಂಡಳಿ ಪಟ್ಟು

ನವದೆಹಲಿ: ಮುಂಗಾರು ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲೇ ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್‌ ಯಾದವ್‌ (Akhilesh Yadav) ಸಂಸತ್‌ ಭವನದ ಪಕ್ಕದ ಮಸೀದಿಯಲ್ಲಿ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಎಸ್ಪಿ ಸಂಸದರೊಟ್ಟಿಗೆ ಅಖಿಲೇಶ್‌ ಯಾದವ್‌ ಸಭೆ ನಡೆಸಿರುವುದನ್ನು ಬಿಜೆಪಿ (BJP) ತೀವ್ರವಾಗಿ ಖಂಡಿಸಿದೆ. ಮಸೀದಿಯನ್ನು ನಿಮ್ಮ ಸಮಾಜವಾದಿ ಪಕ್ಷದ ಕಚೇರಿಯಾಗಿ ಬದಲಾವಣೆ ಮಾಡ್ಕೊಂಡಿದ್ದೀರಾ? ಅಂತ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಶ್ನಿಸಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ವೀರರಾಣಿ ಅಬ್ಬಕ್ಕ ಹೆಸರಿನ ಮೆರಿಟೈಮ್ ವಿವಿ ಸ್ಥಾಪನೆಗೆ ಕ್ಯಾ.ಚೌಟ ಮನವಿ

ಇದಕ್ಕೆ ಇರುಗೇಟು ನೀಡಿರುವ ಅಖಿಲೇಶ್‌ ಯಾದವ್‌, ಮದೀಸಿಗೆ ನನ್ನ ಭೇಟಿಯ ಬಗ್ಗೆ ಬಿಜೆಪಿ ವಿವಾದ ಸೃಷಿಸುತ್ತಿದೆ. ನಮಗೆ ಎಲ್ಲಾ ಧರ್ಮಗಳಲ್ಲಿಯೂ ನಂಬಿಕೆ ಇದೆ. ನಾವು ಒಗ್ಗಟ್ಟಾಗುತ್ತೇವೆ ಅನ್ನೋ ನಂಬಿಕೆ ನಮಗಿದೆ. ಆದ್ರೆ ಬಿಜೆಪಿ ವಿಭಜನೆಯಾಗಿಯೇ ಉಳಿಯಬೇಕೆಂದು ಬಯಸುತ್ತದೆ ಅಂತ ತಿರುಗೇಟು ನೀಡಿದ್ದಾರೆ.

ಮುಂದುವರಿದು.. ಯಾವುದೇ ಧರ್ಮದಲ್ಲಿ ನಂಬಿಕೆಯಿದ್ದರೆ, ಅದು ಎಲ್ಲರನ್ನೂ ಒಗ್ಗೂಗೂಡಿಸುತ್ತದೆ. ಆದ್ರೆ ಬಿಜೆಪಿ ಜನರ ನಡುವಿನ ಅಂತರವನ್ನೇ ನೋಡಲು ಬಯಸುತ್ತೆ. ಬಿಜೆಪಿಯ ತಂತ್ರಗಳ ಬಗ್ಗೆ ಈಗ ಜನಕ್ಕೆ ಅರ್ಥವಾಗಿದೆ. ʻಧರ್ಮʼ ಅನ್ನೋದನ್ನೇ ಬಿಜೆಪಿ ಅಸ್ತ್ರವಾಗಿ ಮಾಡಿಕೊಂಡಿದೆ ಎಂದು ತಿವಿದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶು ಕಳ್ಳತನ ತಡೆಯಲು ಹೊಸ ಕ್ರಮ – ಏನಿದು ಕೋಡ್‌ ಪಿಂಕ್‌?

ಇನ್ನೂ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ಮಾತನಾಡಿ, ನಾವು ಈಗ ದೇವಸ್ಥಾನ ಮತ್ತು ಮಸೀದಿಗೆ ಹೋಗಲು ಬಿಜೆಪಿಯಿಂದ ಲೈಸೆನ್ಸ್‌ ಪಡೆಯಬೇಕೇ? ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ 18 ದಿನ – ಭೂಮಿಯಲ್ಲಿ ಮತ್ತೆ ನಡೆಯುವುದನ್ನ ಕಲಿಯುತ್ತಿದ್ದಾರೆ ಶುಭಾಂಶು ಶುಕ್ಲಾ

ಮತ್ತೊಂದೆಡೆ ಅಖಿಲೇಶ್‌ ಯಾದವ್‌ ಮಸೀದಿಗೆ ಭೇಟಿ ನೀಡಿದ ವಿಚಾರಕ್ಕೆ ಉತ್ತರಾಖಂಡ್ ವಕ್ಫ್ ಮಂಡಳಿ ಕೂಡ ಅಸಮಾಧಾನ ಹೊರಹಾಕಿದೆ. ಮಸೀದಿಯೊಳಗೆ ನಡೆದ ರಾಜಕೀಯ ಸಭೆಯು ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡಿದೆ. ಅಖಿಲೇಶ್‌ ಕ್ಷಮೆಯಾಚಿಸಬೇಕೆಂದು ವಕ್ಫ್‌ ಮಂಡಳಿಯ ಅಧ್ಯಕ್ಷ ಶಾದಾಬ್ ಶಮ್ಸ್ ಒತ್ತಾಯಿಸಿದ್ದಾರೆ.

Share This Article