ಅಂಬಾನಿ ಪುತ್ರನ ನಿಶ್ಚಿತಾರ್ಥಕ್ಕೆ ದಿನಾಂಕ ಫಿಕ್ಸ್

Public TV
2 Min Read

ಮುಂಬೈ: ಭಾರತದ ಖ್ಯಾತ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರ ಪುತ್ರ ಆಕಾಶ್ ಅಂಬಾನಿಯವರ ನಿಶ್ಚಿತಾರ್ಥ ಜೂನ್ 30 ರಂದು ನಿಗದಿಯಾಗಿದೆ.

ಭಾರತದ ರೋಸಿ ಬ್ಲೂ ಡೈಮಂಡ್ ಕಂಪನಿಯ ಮುಖ್ಯಸ್ಥರಾದ ರಸೆಲ್ ಮೆಹ್ತಾ ಮಗಳು ಶ್ಲೋಕಾರ ಜೊತೆ ನಿಶ್ಚಿತಾರ್ಥ ನಡೆಯಲಿದ್ದು, ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅಂಟಿಲಾದಲ್ಲಿರುವ ಅಂಬಾನಿಯವರ ನಿವಾಸದಲ್ಲಿ ಅದ್ಧೂರಿಯಾಗಿ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ನಿಶ್ಚಿತಾರ್ಥ ಹಿನ್ನೆಲೆಯಲ್ಲಿ ಈ ನವ ಜೋಡಿಯು ಫೋಟೋ ಶೂಟ್ ನಡೆಸಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಮಾರ್ಚ್ 24ರಂದು ಮುಕೇಶ್ ಅಂಬಾನಿ ಹಾಗೂ ಅಜ್ಜಿ ಕೋಕಿಲಬೇನ್ ಸಮ್ಮುಖದಲ್ಲಿ ಗೋವಾದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಆಕಾಶ್‍ರವರು ಶ್ಲೋಕಾ ಮೆಹ್ತಾಗೆ ಪ್ರೇಮ ನಿವೇದನೆ ಮಾಡಿದ್ದರು.

ಮುಕೇಶ್ ಅಂಬಾನಿ ಮತ್ತು ರಸ್ಸೆಲ್ ಮೆಹ್ತಾ ಇಬ್ಬರು ಹಳೆಯ ಸ್ನೇಹಿತರಾಗಿದ್ದು, ಈ ಮದುವೆಯಿಂದ ಮುಂಬೈ ಖ್ಯಾತ ಕುಟುಂಬಗಳು ಒಂದಾಗಿವೆ. ಮುಕೇಶ್ ಮತ್ತು ನೀತಾ ಅಂಬಾನಿಯ ಮೂವರು ಮಕ್ಕಳಲ್ಲಿ ಆಕಾಶ್ ಮೊದಲನೇ ಮಗನಾಗಿದ್ದಾನೆ. ತಂಗಿ ಇಶಾ ಮತ್ತು ತಮ್ಮ ಅನಂತ್ ಆಗಿದ್ದಾರೆ. ಸದ್ಯ ಇವರು ಜಿಯೋದ ಪ್ರಮುಖ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


ಅಕಾಶ್ ಹಾಗೂ ಶ್ಲೋಕಾ ಇಬ್ಬರು ಬಾಲ್ಯದಿಂದಲೂ ಸ್ನೇಹ ಹೊಂದಿದ್ದು, ಮುಂಬೈನ ಧೀರೂಬಾಯಿ ಅಂಬಾನಿ ಅಂತರಾಷ್ಟ್ರೀಯ ಶಾಲೆಯಲ್ಲಿ ಓದಿದ್ದರು. ಶ್ಲೋಕಾ ಮೆಹ್ತಾ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ ನಲ್ಲಿ ಪದವಿ ಪಡೆದಿದ್ದು, ಕುಟುಂಬದ ಉದ್ಯಮಗಳನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಅಕಾಶ್ ರಿಲಯನ್ಸ್ ಉದ್ಯಮ ಸಂಸ್ಥೆಗಳ ಬೋರ್ಡ್ ಆಫ್ ಡೈರೆಕ್ಟರ್ ಆಗಿ ನೇಮಕವಾಗಿದ್ದಾರೆ. ಇದನ್ನು ಓದಿ: ವಜ್ರ ಉದ್ಯಮಿಯ ಮಗಳನ್ನು ವರಿಸಲಿದ್ದಾರೆ ಮುಕೇಶ್ ಅಂಬಾನಿ ಪುತ್ರ – ಫೋಟೋಗಳಲ್ಲಿ ನೋಡಿ

ರಸೆಲ್ ಮೆಹ್ತಾ ಅವರಿಗೆ ಮೊನಾ, ಶ್ಲೋಕ ಮೆಹ್ತಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಶ್ಲೋಕ ಮೆಹ್ತಾ ಈಗಾಗಲೇ ಉದ್ಯಮಿಯಾಗಿದ್ದು, ರೊಸಿ ಬ್ಲೂ ಡೈಮಾಂಡ್ ಹೆಸರಿನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ರೊಸಿ ಬ್ಲೂ ಡೈಮಾಂಡ್ ಸಂಸ್ಥೆ ಪ್ರಪಂಚದ ಪ್ರಮುಖ ವಜ್ರದ ಕಂಪೆನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. 2014ರಿಂದ ರೋಸಿ ಬ್ಲೂ ಫೌಂಡೇಶನ್‍ನ ನಿರ್ದೇಶಕಿಯಾಗಿ ಶ್ಲೋಕ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಓದಿ: ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ

https://www.instagram.com/p/Bjm-gGMlsOV/?utm_source=ig_embed

Share This Article
Leave a Comment

Leave a Reply

Your email address will not be published. Required fields are marked *