ತಲಾ ಅಜಿತ್ ಎದೆಯ ಮೇಲೆ ಟ್ಯಾಟೂ; ಏನ್ ಅರ್ಥ ಗೊತ್ತಾ?

Public TV
1 Min Read

ತಾನಾಯ್ತು ತನ್ನ ಸಿನಿಮಾ ಹಾಗೂ ಕುಟುಂಬ ಜೊತೆಗೆ ಕಾರ್‌ ರೇಸ್. ಇದಿಷ್ಟೇ ತಮಿಳು ನಟ ಅಜಿತ್ (Ajith Kumar) ಜೀವನ. ಹೆಚ್ಚಾಗಿ ಹೊರ ಜಗತ್ತಿನಲ್ಲಿ ಕಾಣಿಸ್ಕೊಳ್ಳುವುದೇ ಅಪರೂಪ. ಪ್ರಚಾರ, ಮಾಧ್ಯಮ, ಸೋಶಿಯಲ್ ಮೀಡಿಯಾ ಎಂಗೇಜಿಂಗ್, ಇದೆಲ್ಲದರಿಂದ ದೂರ ಇರ್ತಾರೆ ಅಜಿತ್. ಇದೀಗ ಅಜಿತ್ ಬಗೆಗಿನ ಹೊಸ ವಿಷಯವೊಂದು ಬಯಲಾಗಿದೆ. ಅಜಿತ್ ಎದೆಯ ಮೇಲೆ ದೊಡ್ಡದೊಂದು ಅರ್ಥಗರ್ಭಿತ ಟ್ಯಾಟೂ ಇದೆ. ಅದು ಫ್ಯಾನ್ಸಿ ಬದಲು ಆಧ್ಯಾತ್ಮಿಕತೆಯನ್ನು ಬಿಂಬಿಸುತ್ತೆ.

ಇತ್ತೀಚೆಗಷ್ಟೇ ಅಜಿತ್ ಕೇರಳದ ಪಲಕ್ಕಾಡ್ ದೇವಸ್ಥಾನವೊಂದಕ್ಕೆ ಭೇಟಿ ಕೊಟ್ಟು ಅಲ್ಲಿ ಪೂಜೆ ಸಲ್ಲಿಸಿದ್ದರು. ಪತ್ನಿ ಶಾಲಿನಿ ಅಜಿತ್ ಕುಮಾರ್ ಪೋಸ್ಟ್ ಮಾಡಿರುವ ಫೋಟೋಗಳಿಂದ ಅಜಿತ್ ಆಧ್ಮಾತ್ಮಿಕ ಪ್ರವಾಸದ ಜೊತೆ ಟ್ಯಾಟೂ ಕೂಡ ದರ್ಶನವಾಗಿದೆ. ಇದನ್ನೂ ಓದಿ: ಸಲ್ಮಾನ್‌ ಖಾನ್‌ ಈಗ ಉಗ್ರ: ಪಾಕ್‌ ಘೋಷಣೆ

ಅಜಿತ್‌ ಎದೆಯ ಮೇಲೆ ಶಕ್ತಿ ಸ್ವರೂಪಿಣಿ ದೇವಿಯ ದೊಡ್ಡ ಟ್ಯಾಟೂ ಇದೆ. ಅದು ಪಲಕ್ಕಾಡ್‌ನ ಪೆರುವೆಂಬ ಎಂಬ ಸ್ಥಳದಲ್ಲಿರುವ ಊಟುಕೂಲಂಗಾರ ಭಗವತಿ ಶಕ್ತಿ ದೇವತೆಯ ಟ್ಯಾಟೂ ಎನ್ನುವುದೇ ವಿಶೇಷ. ಈ ದೇವಿಯೇ ಅಜಿತ್ ಕುಟುಂಬದ ಕುಲದೇವತೆ ಎನ್ನಲಾಗುತ್ತಿದೆ. ಹೀಗಾಗಿ, ಬಹಳ ವರ್ಷಗಳ ಹಿಂದೆ ಅಜಿತ್ ಹಾಕಿಸಿಕೊಂಡಿರುವ ಟ್ಯಾಟೂ ಇದೀಗ ರಿವೀಲ್ ಆಗಿದೆ. ಹೀಗೆ ಅಜಿತ್ ಬಗೆಗೆ ಇನ್ನೆಷ್ಟು ಮುಚ್ಚಿಟ್ಟ ಸತ್ಯಗಳಿವೆಯೋ ಎನ್ನುತ್ತಾ ಫ್ಯಾನ್ಸ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Share This Article