ಅಜಿತ್‌ ಕುಮಾರ್‌ ಫ್ಯಾನ್ಸ್‌ಗೆ ಸಿಹಿಸುದ್ದಿ- ‌’ಗುಡ್‌ ಬ್ಯಾಡ್‌ ಅಗ್ಲಿ’ ಚಿತ್ರದ ಬಗ್ಗೆ ಅಪ್‌ಡೇಟ್

Public TV
2 Min Read

ಮಿಳು ನಟ ಅಜಿತ್ ಕುಮಾರ್ (Ajith Kumar)‌ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಸಿನಿಮಾದ ಬಗ್ಗೆ ಅಪ್‌ಡೇಟ್‌ವೊಂದು ಸಿಕ್ಕಿದೆ. ಅಜಿತ್‌ ನಟಿಸಿರುವ ಹೊಸ ಸಿನಿಮಾದ ಕೆಲಸ ಶುರುವಾಗಿದೆ. ಸದ್ದಿಲ್ಲದೇ ಮೊದಲ ಹಂತದ ಶೂಟಿಂಗ್ ಕೂಡ ಮುಗಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾ, ಶ್ರೀಲೀಲಾ ಅಬ್ಬರದ ನಡುವೆ ಕಾಣೆಯಾದ ಕೃತಿ ಶೆಟ್ಟಿ

ಇತ್ತೀಚೆಗೆ ಅಜಿತ್ ಕುಮಾರ್ ಹೊಸ ಸಿನಿಮಾದ ಬಗ್ಗೆ ಮಾಹಿತಿ ಬಿಟ್ಟು ಕೊಟ್ಟಿತ್ತು ಚಿತ್ರತಂಡ. ಆದರೆ ಶೂಟಿಂಗ್ ಶುರುವಾಗೋದು ಯಾವಾಗ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈಗ ಚಿತ್ರತಂಡ ಸೈಲೆಂಟ್ ಆಗಿಯೇ ಫಸ್ಟ್ ಶೆಡ್ಯೂಲ್ ಮುಗಿಸಿದೆ. ಅಜಿತ್ ಕುಮಾರ್ ಇಂಟ್ರಡಕ್ಷನ್ ಸೀನ್ ಸೇರಿದಂತೆ ಕಥೆಯ ಅನುಸಾರ ಹೈದರಾಬಾದ್ ಶೂಟಿಂಗ್ ಆಗಿದೆ. ಮುಂದಿನ ಶೆಡ್ಯೂಲ್‌ಗೆ ಚಿತ್ರತಂಡ ಪ್ಲ್ಯಾನ್‌ ಮಾಡುತ್ತಿದ್ದಾರೆ.

ಅಂದಹಾಗೆ, ಚಿತ್ರದ ಪೋಸ್ಟರ್‌ನಲ್ಲಿ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ 3 ಲುಕ್‌ನಲ್ಲಿ ಅಜಿತ್ ಪೋಸ್ ಕೊಟ್ಟಿದ್ದರು. ಅದರಲ್ಲಿ ಮಧ್ಯದಲ್ಲಿರುವ ಅಜಿತ್ ಕೊಂಚ ದಪ್ಪಗೆ ಕಾಣಿಸಿಕೊಂಡಿದ್ದರು. ಅವರ ಕೈಗೆ ಟ್ಯಾಟೂ ಇದ್ದು, ಮತ್ತೊಂದರಲ್ಲಿ ಮಧ್ಯೆ ಬೆರಳು ತೋರಿಸಿ ಪೋಸ್ಟರ್‌ನಲ್ಲಿ ಬ್ಲರ್ ಮಾಡಿದ್ದರು. ಇನ್ನೊಂದರಲ್ಲಿ ಅಜಿತ್ ಯಾರೋನ್ನು ಹೊಡೆಯಲು ರೆಡಿಯಾದಂತೆ ಪೋಸ್ ಕೊಟ್ಟಿದ್ದರು. ಹಸಿರು ಮತ್ತು ಹಳದಿ ಮಿಶ್ರಿತ ಬಟ್ಟೆಯಲ್ಲಿ ಅಜಿತ್ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಅಜಿತ್ ಕುಮಾರ್ ತ್ರಿಬಲ್ ರೋಲ್‌ನಲ್ಲಿ ನಟಿಸುತ್ತಿದ್ದಾರಾ ಎಂಬ ಕೌತುಕ ಅಭಿಮಾನಿಗಳಲ್ಲಿ ಮೂಡಿತ್ತು.

ಅಜಿತ್ ಕುಮಾರ್ ನಟನೆಯ 63ನೇ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಅಧಿಕ್ ರವಿಚಂದ್ರನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ವರ್ಷ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ಅಂದಹಾಗೆ, ಅಜಿತ್ ಕುಮಾರ್‌ಗೆ ನಾಯಕಿಯಾಗಿ ಶ್ರೀಲೀಲಾ (Sreeleela) ನಟಿಸಲಿದ್ದಾರೆ ಎನ್ನಲಾಗಿದೆ. ಕಾಲಿವುಡ್‌ನಲ್ಲಿ ನಟಿಗೆ ಬಿಗ್ ಆಫರ್ ಸಿಕ್ಕಿದೆ ಎನ್ನಲಾಗಿದೆ.

Share This Article