ಕಾಲಿವುಡ್ನ ನಟ ತಲಾ ಅಜಿತ್ (Ajit Kumar) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 33 ವರ್ಷಗಳು ತುಂಬಿವೆ. ಈ 33 ವರ್ಷಗಳ ಸುದೀರ್ಘ ಪಯಣದಲ್ಲಿ ಅಜಿತ್ಕುಮಾರ್ 63 ಸಿನಿಮಾಗಳನ್ನ ಮಾಡಿದ್ದಾರೆ. ಅವರ ಮುಂಬರುವ ಸಿನಿಮಾ 64ನೇ ಸಿನಿಮಾಗೆ ಸದ್ದಿಲ್ಲದೇ ತಯಾರಿ ಕೂಡಾ ನಡೆಯುತ್ತಿದೆ. 1993ರಲ್ಲಿ ತೆರೆಕಂಡ ಅಮರಾವತಿ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಸ್ಪುರದ್ರೂಪಿ ನಾಯಕನಟನಾಗಿ ಎಂಟ್ರಿಕೊಟ್ಟಿದ್ದಾರೆ ನಟ ಅಜಿತ್.
`ಅಮರಾವತಿ’ ಸಿನಿಮಾಗಿಂತಲೂ ಮೊದಲೇ ಬಾಲ ಕಲಾವಿದರಾಗಿ `ಎನ್ ವೀಡು ಎನ್ ಕನವರ್’ ಸಿನಿಮಾದಲ್ಲಿ ನಟಿಸಿದ್ದ ಅಜಿತ್ ಕುಮಾರ್ ಶಾಲಾ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಅದಾದ ಮೂರುವರ್ಷಗಳ ಬಳಿಕ `ಅಮರಾವತಿ’ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡಿದವರು. ನಾಯಕ ನಟರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಜಿತ್ ಅವರಿಗೆ 33ನೇ ವರ್ಷದ ಸಂಭ್ರಮ. ಈ ಕ್ಷಣವನ್ನ ಅವರ ಅಭಿಮಾನಿಗಳು ಹ್ಯಾಶ್ಟ್ಯಾಗ್ ಬಳಸಿ `#33 ಇಯರ್ಸ್ ಆಫ್ ಅಜಿತಿಸಂ’ ಅಂತಾ ಸಂಭ್ರಮ ಪಡುತ್ತಿದ್ದಾರೆ. ಇದನ್ನೂ ಓದಿ: ಶ್ರೀದೇವಿಗೆ ಪ್ರಪೋಸ್ ಮಾಡಬೇಕಿದ್ದ ರಜನಿಕಾಂತ್ – ತಡೆದಿದ್ದು ಯಾವ ಪವರ್?
ಇದೇ ವರ್ಷ ತೆರೆಕಂಡ `ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ನಿರ್ದೇಶಕ ಅಧಿಕ್ ರವಿಚಂದ್ರನ್ ಜೊತೆ ಮತ್ತೆ ಸಿನಿಮಾ ಮಾಡಲು ಎಲ್ಲಾ ತಯಾರಿ ನಡೆಯುತ್ತಿದೆ. ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಎಕೆ64 ಅನ್ನೋ ವರ್ಕಿಂಗ್ ಟೈಟಲ್ನಲ್ಲಿ ಅಜಿತ್ ಮುಂದಿನ ಸಿನಿಮಾ ಅನೌನ್ಸ್ ಮಾಡಲಾಗಿದೆ. ಅಜಿತ್ ಇತ್ತೀಚೆಗೆ ಸಿನಿಮಾಗಿಂತ ಕಾರ್ ರೇಸ್ನಲ್ಲೇ ಜಾಸ್ತಿ ಸಮಯ ಕಳೆಯುತ್ತಿದ್ದಾರೆ. ಕಾರ್ ರೇಸ್ ಜೊತೆಗೆ ಸಿನಿಮಾಗೂ ಟೈಮ್ ಕೊಡಲಿದ್ದಾರೆ ಅಜಿತ್.