2ನೇ ಬಾರಿ ಲ್ಯಾಂಡಿಂಗ್‌ ಪ್ರಯತ್ನದಲ್ಲಿದ್ದಾಗ ಅಜಿತ್‌ ಪವಾರ್‌ ವಿಮಾನ ಪತನ

1 Min Read

ಮುಂಬೈ: ಅಜಿತ್‌ ಪವಾರ್‌ (Ajit Pawar) ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಎರಡನೇ ಬಾರಿ ರನ್‌ವೇನಲ್ಲಿ (Runway) ಲ್ಯಾಂಡ್‌ ಆಗಲು ಇಳಿಯುವ ಹಂತದಲ್ಲಿದ್ದಾಗ ಪತನಗೊಂಡಿದೆ.

ಫ್ಲೈಟ್‌ರಾಡರ್‌ನ ದತ್ತಾಂಶದ ಪ್ರಕಾರ ಬಾಂಬಾರ್ಡಿಯರ್ ಲಿಯರ್‌ಜೆಟ್ 45 (ವಿಟಿ-ಎಸ್‌ಎಸ್‌ಕೆ) ಮುಂಬೈ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:10ಕ್ಕೆ ಟೇಕಾಫ್‌ ಆಗಿತ್ತು.ಅರಬ್ಬಿ ಸಮದ್ರದ ಮೇಲೆ ಹಾರಿ 8:30ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ (Baramati Air Port) ಲ್ಯಾಂಡ್‌ ಮಾಡಲು ಪೈಲಟ್‌ ಪ್ರಯತ್ನಿಸಿದ್ದಾರೆ.

ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಎರಡನೇ ಬಾರಿ ವಿಮಾನ ಇಳಿಸಲು ಮುಂದಾಗಿದ್ದಾರೆ. ಬೆಳಗ್ಗೆ 8:42 ರ ಸುಮಾರಿಗೆ ಎರಡನೇ ಬಾರಿಗೆ ಇಳಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ವಿಫಲವಾಗಿ ವಿಮಾನ ಪತನಗೊಂಡಿದೆ.

 

16 ವರ್ಷ ಹಳೆಯದಾದ ವಿಮಾದಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ. ಬಹುಶಃ ಕಳಪೆ ಗೋಚರತೆಯ ಕಾರಣದಿಂದಾಗಿ ವಿಮಾನ ಪತನ ಹೊಂದಿರಬಹುದು ಎಂದು ವಿಮಾನ ನಿರ್ವಾಹಕ ಕಂಪನಿ ವಿಎಸ್ಆರ್ ವೆಂಚರ್ಸ್ ಹೇಳಿದೆ. ಇದನ್ನೂ ಓದಿ: ವಿಮಾನ, ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣಕ್ಕೀಡಾದ ಪ್ರಮುಖ ರಾಜಕಾರಣಿಗಳು..!

ವಿಮಾನ ರನ್‌ವೇ (Runway) ಬಳಿಯೇ ಹಾರುತ್ತಿತ್ತು.ರನ್‌ವೇ ಸಮೀಪಿಸಲು ಇನ್ನೇನು 100 ಅಡಿ ಇದ್ದಾಗ ಪತನಗೊಂಡು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.


ಲಕ್ಕೆ ಬಿದ್ದ ಕೂಡಲೇ ದೊಡ್ಡ ಸ್ಫೋಟಗೊಂಡಿತು. ನಂತರ 4-5 ಹೆಚ್ಚಿನ ಸ್ಫೋಟಗಳು ಸಂಭವಿಸಿದವು ಎಂದು ತಿಳಿಸಿದರು. ವಿಮಾನ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಳ್ಳುವುದನ್ನು ನೋಡಿದ ಕೂಡಲೇ ನಾವು ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ಹೊರಗೆ ತೆಗೆಯಲು ಪ್ರಯತ್ನಪಟ್ಟೆವು. ಆದರೆ ಬೆಂಕಿಯ ಜ್ವಾಲೆಯಿಂದ ಅವರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

Share This Article