NCP ಬಣಗಳ ವಿಲೀನ ನಿರ್ಧಾರವನ್ನ ಅಜಿತ್‌ ಪವಾರ್‌ ಫೆ.12ಕ್ಕೆ ಪ್ರಕಟಿಸಬೇಕಿತ್ತು: ಶರದ್ ಪವಾರ್

1 Min Read

– ಅಜಿತ್ ಪವಾರ್ ಪತ್ನಿ ಡಿಸಿಎಂ ಆಗೋ ವಿಚಾರ ಗೊತ್ತಿಲ್ಲ ಎಂದ ಎನ್‌ಸಿಪಿ ಮುಖ್ಯಸ್ಥ

ಮುಂಬೈ: ಕಳೆದ ನಾಲ್ಕು ತಿಂಗಳಿಂದ ಎನ್‌ಸಿಪಿ (NCP) ಎರಡು ಬಣಗಳ ವಿಲೀನ ಬಗ್ಗೆ ಮಾತುಕತೆ ನಡೆದಿತ್ತು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar) ತಿಳಿಸಿದ್ದಾರೆ.

ಜಯಂತ್ ಪಾಟೀಲ್ ಮತ್ತು ಅಜಿತ್ ಪವಾರ್ (Ajit Pawar) ನಡುವೆ ಎರಡು ಎನ್‌ಸಿಪಿ ಬಣಗಳ ವಿಲೀನದ ಕುರಿತು ಚರ್ಚೆಗಳು ನಡೆದಿದ್ದವು. ಸಕಾರಾತ್ಮಕ ದಿಕ್ಕಿನಲ್ಲಿ ಚರ್ಚೆಗಳು ಸಾಗುತ್ತಿವೆ. ಜನವರಿ 12 ರಂದು ಅಜಿತ್‌ ಪವಾರ್‌ ಬಣಗಳ ವಿಲೀನ ನಿರ್ಧಾರವನ್ನು ಪ್ರಕಟಿಸಬೇಕಿತ್ತು. ಅಷ್ಟರಲ್ಲಿ ಈ ದುರ್ಘಟನೆ ಆಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಜಿತ್ ಪವಾರ್ ನಿಧನ ಬಳಿಕ ಪತ್ನಿ ಸುನೇತ್ರಾ ಕ್ಯಾಬಿನೆಟ್ ಸೇರ್ಪಡೆಗೆ ಒತ್ತಡ

ಎರಡೂ ಎನ್‌ಸಿಪಿಗಳು ಒಟ್ಟಿಗೆ ಬರಬೇಕೆಂಬುದು ಅಜಿತ್ ದಾದಾ ಅವರ ಆಶಯವಾಗಿತ್ತು. ನಮ್ಮ ಆಶಯವೂ ಆದೇ ಆಗಿತ್ತು. ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಅವರ ಹಠಾತ್ ನಿಧನವು ಈಗ ಈ ವಿಲೀನ ಚರ್ಚೆಗಳಲ್ಲಿ ವಿರಾಮವನ್ನುಂಟು ಮಾಡಿದೆ ಎಂದು ಮಾತನಾಡಿದ್ದಾರೆ.

ನಾವು ಹೋದವರನ್ನು ಮರಳಿ ತರಲು ಸಾಧ್ಯವಿಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸುವುದು ಒಂದು ಸವಾಲಾಗಿದೆ. ಯಾರಾದರೂ ಅಜಿತ್ ಪವಾರ್ ಅವರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: NCP ಎರಡು ಬಣಗಳ ವಿಲೀನಕ್ಕೆ ನಿರ್ಧರಿಸಿದ್ದ ಅಜಿತ್ ಪವಾರ್: ತೆರೆಮರೆಯ ರಾಜಕೀಯ ಗುಟ್ಟು ಬಿಚ್ಚಿಟ್ಟ ಆಪ್ತ ಕಿರಣ್ ಗುಜಾರ್

ಅಜಿತ್ ಪವಾರ್ ಪತ್ನಿ ಸುನೇತ್ರಾ ಉಪಮುಖ್ಯಮಂತ್ರಿಯಾಗಿ ನೇಮಿಸುವ ವಿಚಾರ ಕುರಿತು ಮಾತನಾಡಿ, ಈ ಬಗ್ಗೆ ನನ್ನೊಟ್ಟಿಗೆ ಯಾರು ಕೂಡ ಯಾವುದೇ ಸಮಾಲೋಚನೆ ನಡೆಸಿಲ್ಲ. ಈ ಬಗ್ಗೆ ನಾನು ಸುನೇತ್ರಾ ಪವಾರ್ ಅವರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಬೆಳಗಿನ ಸುದ್ದಿಗಳ ಮೂಲಕವೇ ನನಗೆ ಪ್ರಮಾಣವಚನ ಸಮಾರಂಭದ ಬಗ್ಗೆ ತಿಳಿದುಕೊಂಡೆ ಎಂದು ಶರದ್ ಪವಾರ್ ತಿಳಿಸಿದ್ದಾರೆ.

Share This Article