ಟೆಸ್ಟ್ ಸರಣಿ ಸೋಲಿಗೆ ಕಾರಣವಾಯಿತೇ ಪೂಜಾರ, ರಹಾನೆ ಬ್ಯಾಟಿಂಗ್ ವೈಫಲ್ಯ?

Public TV
2 Min Read

ಜೋಹನ್ಸ್‌ಬಗ್‌: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಸೋತಿದೆ. ಸರಣಿ ಸೋಲಲು ಇಬ್ಬರು ಬ್ಯಾಟ್ಸ್‌ಮ್ಯಾನ್‌ಗಳ ಬ್ಯಾಟಿಂಗ್ ವೈಫಲ್ಯ ಪ್ರಮುಖ ಕಾರಣವೆಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೇಳಿಬರುತ್ತಿದೆ.

ಹೌದು ಟೀಂ ಇಂಡಿಯಾದಲ್ಲಿ ರಾಹುಲ್ ದ್ರಾವಿಡ್ ಮತ್ತು ವಿ.ವಿ.ಎಸ್ ಲಕ್ಷ್ಮಣ್ ಬಳಿಕ ಟೆಸ್ಟ್ ಸ್ಪೆಷಲಿಷ್ಟ್‌ಗಳೆಂದು ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಕಳೆದ ಕೆಲ ಸರಣಿಗಳಲ್ಲಿ ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಸುಳ್ಳಾಗಿಸಿದ್ದಾರೆ. ಇದೀಗ ಇವರಿಬ್ಬರ ಬ್ಯಾಟಿಂಗ್ ವೈಫಲ್ಯ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಮುಂದುವರಿದಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಪೂಜಾರ ಮತ್ತು ರಹಾನೆ ತಲಾ ಒಂದೊಂದು ಅರ್ಧಶತಕ ಸಿಡಿಸಿದನ್ನು ಬಿಟ್ಟರೆ ಇವರ ಬ್ಯಾಟ್‍ನಿಂದ ರನ್ ಹರಿದು ಬಂದಿಲ್ಲ. ಮಧ್ಯಮಕ್ರಮಾಂಕದಲ್ಲಿ ತಂಡದ ಆಧಾರ ಸ್ತಂಭವಾಗಬೇಕಿದ್ದ ಈ ಇಬ್ಬರೂ ಬ್ಯಾಟ್ಸ್‌ಮ್ಯಾನ್‌ಗಳು ಕೂಡ ಕೈ ಕೊಟ್ಟರು ಹಾಗಾಗಿ ಟೀಂ ಇಂಡಿಯಾ ಸರಣಿ ಸೋತಿದೆ. ಮುಂದಿನ ಸರಣಿಗೆ ಪೂಜಾರ ಮತ್ತು ರಹಾನೆಗೆ ಕೊಕ್ ನೀಡಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಿಕೊಡಿ ಎಂಬ ಕೂಗು ಜೋರಾಗಿದೆ. ಇದನ್ನೂ ಓದಿ: 3ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು – ಸರಣಿ ವಶಪಡಿಸಿಕೊಂಡ ಆಫ್ರಿಕಾ

ಸರಣಿಯ ಮೂರು ಪಂದ್ಯಗಳ 6 ಇನ್ನಿಂಗ್ಸ್‌ನಲ್ಲಿ ಪೂಜಾರ, ಕ್ರಮವಾಗಿ 0, 16, 3, 53, 43, 9 ರನ್ ಸೇರಿ ಒಟ್ಟು 124 ರನ್ ಸಿಡಿಸಿದರೆ, ರಹಾನೆ ಕೊಡುಗೆ 48, 20, 0, 58, 9, 1 ರನ್ ಸೇರಿ ಒಟ್ಟು 136 ರನ್ ಬಾರಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ತಂಡ ಆರಂಭಿಕ ಆಘಾತ ಎದುರಿಸಿದಾಗ ಕ್ರಿಸ್‍ನಲ್ಲಿ ನಿಂತು ಬ್ಯಾಟಿಂಗ್ ಮುಂದುವರಿಸಿ ತಂಡಕ್ಕೆ ಬಲ ತುಂಬಬೇಕಾಗಿದ್ದ ಇಬ್ಬರೂ ಕೂಡ ಆಫ್ರಿಕಾ ನೆಲದಲ್ಲಿ ಎಡವಿದ್ದಾರೆ. ಈಗಾಗಲೇ ಸಾಕಷ್ಟು ಅವಕಾಶಗಳನ್ನು ಟೀಂ ಇಂಡಿಯಾದಲ್ಲಿ ಪೂಜಾರ ಮತ್ತು ರಹಾನೆಗೆ ಕಲ್ಪಿಸಿಕೊಡಲಾಗಿದೆ. ಹಾಗಾಗಿ ಮುಂದಿನ ಸರಣಿಯಲ್ಲಿ ಬೆಂಚ್ ಕಾಯುತ್ತಿರುವ ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಅವರಂತ ಪ್ರತಿಭವಂತ ಆಟಗಾರರಿಗೆ ಅವಕಾಶ ಕೊಡಿ ಎಂಬ ಅಭಿಪ್ರಾಯ ಹೆಚ್ಚಿದೆ. ಇದನ್ನೂ ಓದಿ: ಶಾಕಿಂಗ್‌ ಡಿಆರ್‌ಎಸ್‌ ವಿಡಿಯೋಗೆ ಕೊಹ್ಲಿ ಕಿಡಿ – ರಿವ್ಯೂ ಸಕ್ಸಸ್‌ ಎಂದು ವಾಹಿನಿಯಿಂದ ಸಮರ್ಥನೆ

ಟೆಸ್ಟ್ ಸರಣಿಯನ್ನು ಗೆಲುವಿನ ಮೂಲಕ ಆರಂಭಿಸಿದ ಟೀಂ ಇಂಡಿಯಾ ಆ ಬಳಿಕ ಸತತ 2 ಪಂದ್ಯವನ್ನು ಸೋತು ಸರಣಿ ಕೈಚೆಲ್ಲಿದೆ. ಇದೀಗ ಏಕದಿನ ಸರಣಿಗೆ ಸಜ್ಜಾಗುತ್ತಿದ್ದು ಮೊದಲ ಪಂದ್ಯ ಜನವರಿ 19 ರಂದು ಆರಂಭವಾಗುತ್ತಿದೆ. ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿ ಸರಣಿ ಗೆಲ್ಲಲಿ ಅನ್ನೋದು ಅಭಿಮಾನಿಗಳ ಹಾರೈಕೆಯಾಗಿದೆ. ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

Share This Article
Leave a Comment

Leave a Reply

Your email address will not be published. Required fields are marked *