‘ಪಾನ್ ಇಂಡಿಯಾ’ ಸ್ಟಾರ್‌ಗೆ ‘ಪ್ಯಾನ್ ಇಂಡಿಯಾ’ ಸ್ಟಾರ್ ಗುನ್ನಾ – ಸುದೀಪ್ ಬೆನ್ನಿಗೆ ನಿಂತ ಸ್ಯಾಂಡಲ್‍ವುಡ್

Public TV
2 Min Read

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆಯನ್ನಾಗಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲವೆಂದು ಹೇಳಿಕೆ ನೀಡಿದ್ದ ಸ್ಯಾಂಡಲ್‍ವುಡ್ ಸ್ಟಾರ್ ನಟ ಕಿಚ್ಚ ಸುದೀಪ್‍ಗೆ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದ ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ಸ್ಯಾಂಡಲ್‍ವುಡ್ ತಾರೆಯರು ರೊಚ್ಚಿಗೆದ್ದಿದ್ದಾರೆ.

ಅಜಯ್ ದೇವಗನ್, ನನ್ನ ಸಹೋದರ ಕಿಚ್ಚ ಸುದೀಪ್, ನಿಮ್ಮ ಪ್ರಕಾರ ಹಿಂದಿಯು ರಾಷ್ಟ್ರ ಭಾಷೆ ಅಲ್ಲದಿದ್ದರೆ, ನಿಮ್ಮ ಮಾತೃ ಭಾಷೆಯಲ್ಲೇ ಚಿತ್ರಗಳನ್ನು ಬಿಡುಗಡೆ ಮಾಡಿಕೊಳ್ಳಿ. ಅವುಗಳನ್ನು ಹಿಂದಿಗೆ ಡಬ್ ಮಾಡುತ್ತೀರೇಕೆ? ಹಿಂದಿ ನಮಗೆ ಯಾವಾಗಲೂ ಮಾತೃಭಾಷೆ ಆಗಿರುತ್ತದೆ. ಹಿಂದಿ ಭಾಷೆ ಮತ್ತು ರಾಷ್ಟ್ರ ಭಾಷೆ. ಜನ ಗಣ ಮನ ಎಂದು ಹಿಂದಿಯಲ್ಲೇ ಟ್ವೀಟ್ ಮಾಡಿದ್ದರು. ಆ ಬಳಿಕ ಸುದೀಪ್ ರೀ ಟ್ವೀಟ್ ಮಾಡಿ ಅಜಯ್ ದೇವಗನ್‍ಗೆ ತಾವು ಮಾತನಾಡಿರುವ ಸಂದರ್ಭದ ಬಗ್ಗೆ ತಿಳಿ ಹೇಳಲು ಪ್ರಯತ್ನಿಸಿದ್ದರು. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ

sudeep

ಇದೀಗ ಸುದೀಪ್ ಪರ ನಿಂತಿರುವ ಸ್ಯಾಂಡಲ್‍ವುಡ್‍ನ ತಾರೆಗಳು, ಸುದೀಪ್ ಅವರು ತಪ್ಪಾಗಿ ಏನೂ ಹೇಳಿಲ್ಲ. ಸರಿಯಾಗಿಯೇ ಹೇಳಿಕೆ ನೀಡಿದ್ದಾರೆ. ನೀವು ಮೊದಲು ಸಿನಿಮಾವನ್ನು ಸಿನಿಮಾದ ರೀತಿ ನೋಡಿ ಎಂದು ಅಜಯ್ ದೇವಗನ್‍ಗೆ ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

ತಾರೆಯರ ಟ್ವೀಟ್
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. ನಿಮ್ಮ ತಿರಸ್ಕಾರ ಭಾವನೆ ವಿಪರ್ಯಾಸ. ಕೆಜಿಎಫ್, ಪುಷ್ಪ ಮತ್ತು ಆರ್‌ಆರ್‌ಅರ್‌ನಂತಹ ಚಲನಚಿತ್ರಗಳು ಹಿಂದಿಯಲ್ಲಿ ಉತ್ತಮವಾಗಿ ಪ್ರದರ್ಶನ ಕಂಡಿದೆ. ಕಲೆಗೆ ಯಾವುದೇ ಭಾಷೆಯ ಅಡೆ-ತಡೆ ಇಲ್ಲ. ನಿಮ್ಮ ಚಲನಚಿತ್ರಗಳನ್ನು ನಾವು ಆನಂದಿಸಿದಂತೆ ದಯವಿಟ್ಟು ನಮ್ಮ ಚಲನಚಿತ್ರಗಳನ್ನು ಆನಂದಿಸಿ ಎಂದು ನಟಿ ರಮ್ಯಾ ತಿರುಗೇಟು ನೀಡಿದ್ದಾರೆ.

ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ, ಈಗಷ್ಟೇ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ, ನಮ್ಮಂತೆ ನೀವು ನಮ್ಮನ್ನು, ನಮ್ಮ ಭಾಷೆಯನ್ನು ಗೌರವಿಸಿ. ಹಿಂದಿ ಅಂದಿಗೂ ಎಂದಿಗೂ ನಮ್ಮ ರಾಷ್ಟ್ರ ಭಾಷೆಯಲ್ಲ. ನಿಮ್ಮ ಧ್ವನಿಗೆ ನಮ್ಮ ಧ್ವನಿ ಸುದೀಪ್ ಸರ್ ಎಂದು ಟ್ವೀಟ್ ಮಾಡುವ ಮೂಲಕ ನಟ ನಿನಾಸಂ ಸತೀಶ್ ಕಿಚ್ಚನ ಬೆಂಬಲಕ್ಕೆ ನಿಂತಿದ್ದಾರೆ. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ ಅಲ್ಲದಿದ್ದರೆ ನೀವೇಕೆ ಹಿಂದಿಗೆ ಡಬ್ ಮಾಡುತ್ತೀರಿ?- ಕಿಚ್ಚ ಸುದೀಪ್‌ಗೆ ಅಜಯ್ ದೇವಗನ್ ಪ್ರಶ್ನೆ

ಅಣ್ಣ ದಕ್ಷಿಣ ಭಾಷೆಗಳು ಭಾರತದ ಪ್ರತಿಯೊಂದು ಭಾಷೆಯನ್ನು ಗೌರವಿಸುತ್ತವೆ. ಆದರೆ ಗುಟ್ಕಾ ಕಾವೋ ಜನರು ಮಾತ್ರ ಪ್ರತಿ ರಾಜ್ಯದ ಮೇಲೆ ಹಿಂದಿ ಹೇರಲು ಪ್ರಯತ್ನಿಸುತ್ತಿದ್ದಾರೆ. ಪ್ಲೀಸ್ ಆಪ್ ಗುಟ್ಕಾ ಕಾವೋ & ರೋಡ್ ಮೇ ಕೇಸ್ರಿ ಟುಪುಕ್ ಟುಪುಕ್ ಕರೋ & ದಯವಿಟ್ಟು ಅರ್ಥಮಾಡಿಕೊಳ್ಳಿ “ಜನಗಣಮನ” ಗೀತೆ ಮತ್ತು ಅದರ ಸಂಪೂರ್ಣ ಪರಿಕಲ್ಪನೆ ಏನೆಂದರೆ “ವೈವಿಧ್ಯತೆಯಲ್ಲಿ ಏಕತೆ” ಹೊರತು ಹಿಂದಿ ವಿಶ್ವವಿದ್ಯಾನಿಲಯವಲ್ಲ ಎಂದು ಟ್ವೀಟ್ ಮಾಡಿ ವ್ಯಂಗ್ಯದ ಮೂಲಕ ನಿರ್ದೇಶಕ ಸಿಂಪಲ್ ಸುನಿ ಟಾಂಗ್ ನೀಡಿದ್ದಾರೆ.

ವ್ಯಾವಹಾರಿಕ ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ತಪ್ಪಾಗಿ ಗ್ರಹಿಸಿರುವುದು ಮೊದಲ ತಪ್ಪು. ಅಲ್ಲದೇ ಆತ್ಮವಿಶ್ವಾಸದಿಂದ ಅದರ ಬಗ್ಗೆ ಟ್ವೀಟ್ ಮಾಡಿ ಹಿಂದಿ ಹೇರಿಕೆಗೆ ಮುಂದಾಗಿರುವುದು ಗುಟ್ಕಾ ತಿಂದಂತಲ್ಲ ಎಂದು ನಟಿ ರೂಪ ನಟರಾಜ್ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *