ಪುಟ್ಟ ಗಣೇಶನ ಹಿಡಿದು ಸಿಹಿ ಸುದ್ದಿ ಹಂಚಿಕೊಂಡ ಐಶ್ವರ್ಯ-ವಿನಯ್ ದಂಪತಿ

By
1 Min Read

ರಾಜಾ-ರಾಣಿ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ ಐಶ್ವರ್ಯ- ವಿನಯ್ ದಂಪತಿ (Aishwarya Vinay) ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ ಗಣೇಶ ಹಬ್ಬದಂದು ಪುಟ್ಟ ವಿಗ್ರಹ ಹಿಡಿದುಕೊಂಡು ಚತುರ್ಥಿ ಹಬ್ಬ ಆಚರಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ವಿಶೇಷ ದಿನದಂದು ನಿಮಗೆ ಪುಟ್ಟ ರಹಸ್ಯವೊಂದನ್ನು ಹೇಳುತ್ತಿದ್ದೇವೆ. ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ದೇವರು ನಾವು ಕೇಳಿದ್ದಕ್ಕಿಂತ ಹೆಚ್ಚಿನದನ್ನು ನೀಡಿದ್ದಾನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಜೊತೆ ಇರಲಿ. ದೃಷ್ಟಿ ಹಾಕಬೇಡಿ ಎಂದು ಬರೆದುಕೊಂಡಿದ್ದಾರೆ.

ಮೂಲತಃ ಉತ್ತರ ಕರ್ನಾಟಕದವರಾದ ಇವರು ಹಲವುಗಳ ವರ್ಷಗಳ ಕಾಲ ಪ್ರೀತಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಐಶ್ವರ್ಯ ಅಗ್ನಿಸಾಕ್ಷಿ, ರಾಮಾಚಾರಿ ಸೇರಿದಂತೆ ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನೂ ವಿನಯ್ ಕೂಡ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ಇಬ್ಬರು ಒಟ್ಟಿಗೆ ರಾಜಾ-ರಾಣಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚಿಗೆ ರಾಮಾಚಾರಿ ಧಾರಾವಹಿಯಲ್ಲಿ ನಟಿಸುತ್ತಿದ್ದ ಐಶ್ವರ್ಯ ಅವರು ಕೆಲ ದಿನಗಳಿಂದ ಕಾಣಿಸುತ್ತಿರಲಿಲ್ಲ. ಸದ್ಯ ದಂಪತಿ ಗಣೇಶ ಹಬ್ಬದಂದು ಮೊದಲ ಮಗುವಿನ ಬಗ್ಗೆ ಸಿಹಿ ಹಂಚಿಕೊಂಡಿದ್ದಾರೆ.

Share This Article