ಅದ್ದೂರಿಯಾಗಿ ನಡೆಯಿತು ಅರ್ಜುನ್ ಸರ್ಜಾ ಪುತ್ರಿಯ ನಿಶ್ಚಿತಾರ್ಥ

By
1 Min Read

ರ್ನಾಟಕ ಮೂಲದ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ (Arjun Sarja) ಅವರ ಪುತ್ರಿ ನಟಿ ಐಶ್ವರ್ಯಾ ಸರ್ಜಾ (Aishwarya Sarja) ಅವರು ಚೆನ್ನೈನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮಿಳಿನ ಲೆಜೆಂಡರಿ ಆಕ್ಟರ್ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಜೊತೆ ಐಶ್ವರ್ಯಾ ಎಂಗೇಜ್ ಆಗಿದ್ದಾರೆ.

ಹಲವು ವರ್ಷಗಳ ಪ್ರೀತಿಗೆ ಇಂದು ಐಶ್ವರ್ಯಾ- ಉಮಾಪತಿ ಉಂಗುರದ ಮುದ್ರೆ ಒತ್ತಿದ್ದಾರೆ. ಕುಟುಂಬದ ಸಮ್ಮತಿ ಪಡೆದು ಅದ್ದೂರಿಯಾಗಿ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಅದ್ದೂರಿ ನಿಶ್ಚಿತಾರ್ಥದಲ್ಲಿ ಧ್ರುವ ಸರ್ಜಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಡಿಸೆಂಬರ್‌ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

‘ಪ್ರೇಮ ಬರಹ’ ಚಿತ್ರದ ಮೂಲಕ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಪರಿಚಿತರಾದರು. ಬಿಗ್ ಬಾಸ್ ಖ್ಯಾತಿಯ ಚಂದನ್ ಕುಮಾರ್‌ಗೆ ನಾಯಕಿಯಾಗಿ ನಟಿಸಿದ್ದರು. ಮಗಳ ಮೊದಲ ಸಿನಿಮಾಗೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್