ಪೆಟ್ರೋಲ್ ಸುರಿದು ಮೃತದೇಹ ಸುಟ್ಟರು – ಏರ್ ಸರ್ಜಿಕಲ್ ಸ್ಟ್ರೈಕ್‍ಗೆ ಸಿಕ್ತು ಆಡಿಯೋ ಸಾಕ್ಷ್ಯ!

Public TV
2 Min Read

– ದಾಳಿ ಬಳಿಕ ಇಂಟರ್‍ನೆಟ್ ಸೇವೆ ಸ್ಥಗಿತ
– ಬಾಲಕೋಟ್ ನೆಲೆಯನ್ನು ಸುತ್ತುವರಿದ ಪಾಕ್ ಸೇನೆ
– ಗಾಯಗೊಂಡ ಉಗ್ರರನ್ನು ಅಫ್ಘಾನಿಸ್ತಾನಕ್ಕೆ ಶಿಫ್ಟ್

ನವದೆಹಲಿ: ಏರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಭಾರತದ ಕೆಲ ರಾಜಕೀಯ ಪಕ್ಷಗಳು ಸಾಕ್ಷಿಗಳನ್ನು ಕೇಳಿ ದಾಳಿ ನಡೆದಿರುವುದನ್ನೇ ಅನುಮಾನಿಸಿದ್ದರು. ಆದರೆ ದಾಳಿ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿ ಆಡಿಯೋ ಸಾಕ್ಷ್ಯವನ್ನು ಬಿಡುಗಡೆ ಮಾಡಿದೆ.

ಬಾಲಕೋಟ್ ಭಯೋತ್ಪಾದಕ ವಿರುದ್ಧ ಭಾರತ ದಾಳಿಗೆ ಸಂಬಂಧಿಸಿದಂತೆ ಸ್ಥಳೀಯ ವ್ಯಕ್ತಿಯೊಬ್ಬರು ಮಾತನಾಡಿರುವ 3 ನಿಮಿಷಗಳ ಆಡಿಯೋ ಲಭ್ಯವಾಗಿದೆ.

ಏರ್ ಸ್ಟ್ರೈಕ್ ನಡೆದಿದೆ ಎಂದು ಮೊದಲು ಒಪ್ಪಿಕೊಂಡಿದ್ದ ಪಾಕಿಸ್ತಾನ ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ. ಆದರೆ ಬಾಂಬ್ ದಾಳಿಯಿಂದ ಪರಿಸರ ಮೇಲೆ ದಾಳಿ ನಡೆದಿದೆ ಎಂದು ವಿಶ್ವಸಂಸ್ಥೆಗೂ ದೂರು ನೀಡಲು ಮುಂದಾಗಿತ್ತು. ಆದರೆ ಸದ್ಯ ಘಟನೆಯನ್ನು ಪ್ರಪಂಚಕ್ಕೆ ತಿಳಿಯದಂತೆ ಮಾಡಲು ಪಾಕಿಸ್ತಾನ ಎಷ್ಟೆಲ್ಲಾ ಪ್ರಯತ್ನ ನಡೆಸಿತ್ತು ಎನ್ನುವುದು ಬಹಿರಂಗವಾಗಿದೆ.

ಭಾರತ ದಾಳಿ ನಡೆಸಿ ಬಾಲಕೋಟ್ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉಗ್ರರು ನೆಲೆಸಿದ್ದಾರೆ ಎನ್ನುವುದು ಖಚಿತವಾಗಿದೆ. ಅಲ್ಲದೇ ದಾಳಿಯಲ್ಲಿ ಸಾಕಷ್ಟು ಉಗ್ರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಮಾಹಿತಿ ಹೊರಬಾರದಂತೆ ತಡೆಯಲು ಯತ್ನಿಸಿದ್ದ ಪಾಕಿಸ್ತಾನ ಸೇನೆ ಸಂಪೂರ್ಣ ಪ್ರದೇಶವನ್ನು ವಶಕ್ಕೆ ಪಡೆದು ಯಾರು ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಿತ್ತು.

ದಾಳಿಯಲ್ಲಿ ಮೃತಪಟ್ಟ ಉಗ್ರರ ಶವಗಳನ್ನು ಸಂಗ್ರಹಿಸಿದ್ದ ಪಾಕ್ ಹಲವು ಕಾರುಗಳಲ್ಲಿ ಪೆಟ್ರೋಲ್ ತಂದು ಸುರಿದು ಸ್ಥಳದಲ್ಲೇ ಸುಟ್ಟು ಹಾಕಿತ್ತು. ಅಷ್ಟು ಶವಗಳನ್ನು ಸುಟ್ಟು ಹಾಕಲು ಸಾಧ್ಯವಾಗದ ಪರಿಣಾಮ ಒಂದಷ್ಟು ಶವಗಳನ್ನು ಹತ್ತಿರದ ಕುಲ್ಹಾಗ್ ನದಿಗೆ ಎಸೆದು ಸಾಕ್ಷ್ಯ ನಾಶ ಪಡಿಸಿತ್ತು ಎಂಬ ಮಾಹಿತಿ ಲಭಿಸಿದೆ.

ಏರ್ ಸರ್ಜಿಕಲ್ ಸ್ಟ್ರೈಕ್ ಬೆನ್ನಲ್ಲೇ ಇಡೀ ಪ್ರದೇಶವನ್ನು ವಶಕ್ಕೆ ಪಡೆದ ಸೇನೆ ಬಳಿಕ ಇಡೀ ಪ್ರದೇಶದ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಿತ್ತು. ಈ ಮೂಲಕ ಘಟನೆಯ ಫೋಟೋ, ವಿಡಿಯೋ ವೈರಲ್ ಆಗದಂತೆ ಬಂದ್ ಮಾಡಿತ್ತು. ಪಾಕಿಸ್ತಾನದ ಸೇನಾ ಅಧಿಕಾರಿ ಕೆಲ ಫೋಟೋಗಳನ್ನು ಟ್ವೀಟ್ ಮಾಡಿ ಏನು ಆಗಿಲ್ಲ ಎಂಬಂತೆ ಬಿಂಬಿಸಿದ್ದರು. ಅಲ್ಲದೇ ಮಾಧ್ಯಮಗಳು ಸೇರಿದಂತೆ ಯಾರಿಗೂ ಹೇಳಿಕೆ ನೀಡದಂತೆ ಸ್ಥಳೀಯ ಮಂದಿ ಮೇಲೆ ಹಲ್ಲೆ ನಡೆಸಿ ಪಾಕಿಸ್ತಾನ ಸೇನೆ ಎಚ್ಚರಿಕೆ ನೀಡಿತ್ತು. ಅವರಲ್ಲಿದ್ದ ಮೊಬೈಲ್ ಫೋನ್‍ಗಳನ್ನು ಕಿತ್ತುಕೊಂಡಿತ್ತು ಎಂದು ತಿಳಿದು ಬಂದಿದೆ.

ಬಾಂಬ್ ದಾಳಿಯಲ್ಲಿ ಗಾಯಗೊಂಡ ಉಗ್ರರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡದೇ ಅಫ್ಘಾನಿಸ್ತಾನದ ಗಡಿಗೆ ಕಳುಹಿಸಿಕೊಟ್ಟು ಪ್ರದೇಶವನ್ನು ಕ್ಲೀಯರ್ ಮಾಡಿತ್ತು. ದಾಳಿಯಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆಯ ಬಾಂಬ್ ತಜ್ಞ, ಸಾಫ್ಟ್‍ವೇರ್ ಎಕ್ಸ್‍ಪರ್ಟ್ ಬಲಿಯಾಗಿರುವುದು ಕೂಡ ಸ್ಪಷ್ಟವಾಗಿದೆ.

ಉಗ್ರ ಕೇಂದ್ರದಲ್ಲಿದ್ದ ಉಗ್ರರಲ್ಲಿ ಹೆಚ್ಚಿನವರು ಜೈಷ್ ಸಂಘಟನೆಗೆ ಸೇರಿದವರು. ಸ್ಥಳೀಯ ವ್ಯಕ್ತಿಯ ಹೇಳಿಕೆ ಅನ್ವಯ ಭಾರತದ ದಾಳಿಯನ್ನು ಕಂಡು ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್‍ಐ ಹಾಗೂ ಜೈಷ್ ಸಂಘಟನೆ ಭಯಗೊಂಡಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಎಷ್ಟು ಮಂದಿ ಸಾವನ್ನಪಿದ್ದರು ಎಂದು ಹೇಳುವುದು ಕಷ್ಟಸಾಧ್ಯ ಎಂದಿದ್ದಾನೆ.

ನಮಗೆ ನಂಬಿಕೆ ಇದೆ. ಭಾರತ ಮತ್ತೊಮ್ಮೆ ಈ ರೀತಿ ಉಗ್ರರ ಕೇಂದ್ರಗಳ ಮೇಲೆ ದಾಳಿ ನಡೆಸಬೇಕು. ಮತ್ತೆ ದಾಳಿ ನಡೆಸಿದರೆ ನಮಗೆ ಉಗ್ರರ ಸಮಸ್ಯೆಯೇ ಇಲ್ಲವಾಗುತ್ತದೆ ಎಂದು ಸ್ಥಳೀಯ ವ್ಯಕ್ತಿ ಹೇಳಿದ್ದಾನೆ. ಭಾರತ ಮತ್ತೊಂದು ದಾಳಿ ನಡೆಸಿದರೆ ಸ್ಥಳದಲ್ಲಿ ಅಡಗಿ ಕುಳಿತುಕೊಳ್ಳಲು ಎಲ್ಲೂ ಅವಕಾಶ ಇಲ್ಲದ ಪರಿಣಾಮ ಉಗ್ರರನ್ನು ಪಾಕ್ ಅಫ್ಘಾನ್ ಗಡಿಗೆ ಶಿಫ್ಟ್ ಮಾಡಿದೆ.

https://www.youtube.com/watch?v=j7O4vOnieC8

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *