ವಾಯು ಮಾಲಿನ್ಯ ಹೆಚ್ಚಳದಿಂದ  ಶಾಲಾ-ಕಾಲೇಜು ಬಂದ್

Public TV
1 Min Read

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚಳದ ಪರಿಣಾಮವಾಗಿ ಮುಂದಿನ ಆದೇಶದವರೆಗೂ ಶಾಲೆ, ಕಾಲೇಜು ಹಾಗೂ ಎಲ್ಲಾ ವಿದ್ಯಾಕೇಂದ್ರಗಳನ್ನು ಮುಚ್ಚಬೇಕು ಎಂದು ಶಿಕ್ಷಣ ಇಲಾಖೆ ಇಂದು ಘೋಷಿಸಿದೆ.

ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಆಯೋಗದಿಂದ ಮಾಹಿತಿ ಬರುವವರೆಗೆ ಶಾಲಾ ಕಾಲೇಜುಗಳನ್ನು ತೆರೆಯುವಂತಿಲ್ಲ ಎಂದು ಪರಿಸರ ಇಲಾಖೆ ತಿಳಿಸಿದೆ. ಆದರೆ ಎಲ್ಲಾ ವಿದ್ಯಾಕೇಂದ್ರಗಳಿಗೆ ಆನ್‍ಲೈನ್ ತರಗತಿಗಳನ್ನು ನಡೆಸಲು ಅನುಮತಿ ನೀಡಿದ್ದಾರೆ. ಆದ್ದರಿಂದ ಮುಂದಿನ ಆದೇಶದವರೆಗೂ ಎಲ್ಲಾ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ ಎಂದು ಹೆಚ್ಚುವರಿ ಶಿಕ್ಷಣ ನಿರ್ದೇಶಕಿ ರೀಟಾ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 247 ಕೊರೊನಾ ಕೇಸ್, 1 ಸಾವು

ಆನ್‍ಲೈನ್ ಭೋಧನಾ ಕಲಿಕಾ ಚಟುವಟಿಕೆ ಹಾಗೂ ಬೋರ್ಡ್ ತರಗತಿಗಳಿಗೆ ಪರೀಕ್ಷೆಗಳನ್ನು ಈ ಹಿಂದೆ ನೀಡಲಾಗಿದ್ದ ಮಾರ್ಗಸೂಚಿಯ ಪ್ರಕಾರವೇ ನಡೆಸಲಾಗುವುದು. ಒಂದು ವಾರಗಳ ಕಾಲ ಶಾಲಾ ಕಾಲೇಜುಗಳನ್ನು ಮುಚ್ಚುವಂತೆ ನ.13ರಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು. ನಂತರದ ದಿನಗಳಲ್ಲಿ ಹರಿಯಾಣ ಸರ್ಕಾರವೂ ಗುರುಗ್ರಾಮ, ಫರಿದಾಬಾದ್, ಸೋನಿಪತ್ ಮತ್ತು ಜಿಜರ್ ನಗರಗಳಲ್ಲಿ ಬಂದ್‍ಗೆ ಕರೆ ನೀಡಿತ್ತು. ಇಂದು ಬೆಳಗ್ಗೆ ನಗರದಲ್ಲಿ 382 ಗರಿಷ್ಠ ವಾಯು ಮಾಲಿನ್ಯದ ಗುಣಮಟ್ಟ ದಾಖಲಾಗಿದೆ. ಮತ್ತೊಮ್ಮೆ ಅತ್ಯಂತ ಕಳಪೆ ವಾಯು ಮಾಲಿನ್ಯದ ಗುಣಮಟ್ಟ ಎಂದು ವರದಿಯಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಭಾಷಣದಲ್ಲಿಂದು ಪೂರ್ತಿ ಮೋದಿ ‘ಜೀ’ ಮಯ

Share This Article
Leave a Comment

Leave a Reply

Your email address will not be published. Required fields are marked *