ಚೀನಾದಲ್ಲಿ ವಾಯುಮಾಲಿನ್ಯ ಪ್ರಮಾಣ ಭಾರೀ ಇಳಿಕೆ -2019 ರಲ್ಲಿ ಎಷ್ಟಿತ್ತು? ಈಗ ಎಷ್ಟಿದೆ?

Public TV
1 Min Read

ವಾಷಿಂಗ್ಟನ್: ಕೊರೊನಾ ವೈರಸ್ ನಿಂದ ತತ್ತರಿಸಿದ ಹೋಗಿರುವ ಚೀನಾದಲ್ಲಿ ಈಗ ವಾಯುಮಾಲಿನ್ಯ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

ವೈರಸ್ ಭೀತಿಯಿಂದ ಚೀನಾದಲ್ಲಿ ಹಲವು ನಗರಗಳನ್ನು ಬಂದ್ ಮಾಡಲಾಗಿದೆ. ಇದರ ಜೊತೆ ಕಾರ್ಖಾನೆಗಳನ್ನು ಸಹ ಬಂದ್ ಮಾಡಲಾಗಿದ್ದು ಜನರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಎಲ್ಲದರ ಪರಿಣಾಮ ವಾಯುಮಾಲಿನ್ಯ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಅಮೆರಿಕದ ನಾಸಾ ತಿಳಿಸಿದೆ.

ಈ ಸಂಬಂಧ ಕೊರೊನಾ ವೈರಸ್ ಹರಡಿದ ಕೇಂದ್ರ ಸ್ಥಾನವಾದ ವುಹಾನ್ ಪ್ರದೇಶದ ಉಪಗ್ರಹದ ಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ 2019 ಮತ್ತು 2020ರ ಜ.1 ರಿಂದ 20, ಜ.28 ರಿಂದ ಫೆ.9, ಫೆ.10 ರಿಂದ 25ರವರೆಗಿನ ಚಿತ್ರಗಳನ್ನು ಹೋಲಿಕೆ ಬಿಡುಗಡೆ ಮಾಡಿ ಮಾಲಿನ್ಯ ಎಷ್ಟು ಕಡಿಮೆಯಾಗಿದೆ ಎನ್ನುವುದನ್ನು ತಿಳಿಸಿದೆ. ಇದನ್ನೂ ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೊನಾ?

ವಾಹನಗಳ ಬಳಕೆ ಮತ್ತು ಸಾರಿಗೆ ಸಂಪರ್ಕ ನಿರ್ಬಂಧ, ಕೈಗಾರಿಕೆಗಳನ್ನು ಸ್ಥಗಿತಗೊಳಿಸಿದ್ದರಿಂದ ಮಾಲಿನ್ಯ ಗಣನೀಯವಾಗಿ ಇಳಿಕೆಯಾಗಿದೆ. ಒಂದು ಪ್ರದೇಶದಲ್ಲಿ ಮಾಲಿನ್ಯದ ಪ್ರಮಾಣ ಇಷ್ಟೊಂದು ಪ್ರಮಾಣದಲ್ಲಿ ದಿಢೀರ್ ಇಳಿಕೆಯಾಗಿರುವುದನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ನಾಸಾದ ವಾಯು ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸುವ ವಿಜ್ಞಾನಿ ಫೆಲೂಯ್ ತಿಳಿಸಿದ್ದಾರೆ.

2008ರ ಆರ್ಥಿಕ ಹಿಂಜರಿಕೆ ಉಂಟಾದಾಗ ನೈಟ್ರೋಜನ್ ಆಕ್ಸೈಡ್ ಪ್ರಮಾಣ ಕಡಿಮೆ ಆಗಿತ್ತು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಕಡಿಮೆ ಆಗಿರಲಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸದ್ಯ ಈಗ ಚೀನಾದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ವಿಶ್ವದ ಹಲವೆಡೆ ವ್ಯಾಪಕವಾಗಿ ಕೊರೊನಾ ವೈರಸ್ ಪ್ರಸಾರವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *