ವಾಯುಪಡೆ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಏರ್ ಮಾರ್ಷಲ್ ಎಪಿ ಸಿಂಗ್

Public TV
1 Min Read

ನವದೆಹಲಿ: ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್‌ ಅವರು (Air Marshal Amar Preet Singh) ವಾಯುಪಡೆಯ (Indian Air Force) ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

5,000 ಗಂಟೆಗಳ ಯುದ್ಧ ವಿಮಾನ ಹಾರಾಟದ ಅನುಭವ ಹೊಂದಿರುವ ಅಮರ್ ಪ್ರೀತ್ ಸಿಂಗ್ ಈ ಹಿಂದೆ ವಾಯುಪಡೆಯ ವೈಸ್ ಚೀಫ್ ಆಫ್ ದಿ ಏರ್ ಸ್ಟಾಫ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು (ಸೋಮವಾರ) ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ನಿವೃತ್ತರಾಗಿದ್ದು, ವಾಯುಪಡೆ ನೂತನ ಮುಖ್ಯಸ್ಥರಾಗಿ ಎಪಿ ಸಿಂಗ್ ಅಧಿಕಾರ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ | ರಾಜಕೀಯದಿಂದ ದೇವರನ್ನು ದೂರವಿಡಿ: ಸುಪ್ರೀಂ ಕೋರ್ಟ್

ಅಮರ್ ಪ್ರೀತ್ ಸಿಂಗ್ 5,000 ಗಂಟೆಗಳ ಯುದ್ಧ ವಿಮಾನ ಹಾರಾಟದ ಅನುಭವ ಹೊಂದಿದ್ದಾರೆ. ಇತ್ತೀಚೆಗೆ ಐಎಎಫ್ ಆಯೋಜಿಸಿದ್ದ ಬಹುರಾಷ್ಟ್ರೀಯ ಯುದ್ಧ ವಿಮಾನಗಳ ಕಸರತ್ತು `ತರಂಗ್ ಶಕ್ತಿ’ ಆಯೋಜಿಸುವಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.

ಅಕ್ಟೋಬರ್ 27, 1964 ರಂದು ಜನಿಸಿದ ಏರ್ ಮಾರ್ಷಲ್ ಸಿಂಗ್ ಅವರು ಡಿಸೆಂಬರ್ 1984 ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಪೈಲಟ್ ಸ್ಟ್ರೀಮ್‍ಗೆ ನಿಯೋಜಿಸಲ್ಪಟ್ಟರು. ಸುಮಾರು 40 ವರ್ಷಗಳ ಕಾಲ ಅವರ ಸುದೀರ್ಘ ಮತ್ತು ವಿಶಿಷ್ಟ ಸೇವೆಯಲ್ಲಿ, ವಿವಿಧ ಕಮಾಂಡ್, ಮತ್ತು ವಿದೇಶಿ ನೇಮಕಾತಿಯಲ್ಲೂ ಸೇವೆ ಸಲ್ಲಿಸಿದ್ದಾರೆ.

ಪರೀಕ್ಷಾ ಪೈಲಟ್ ಆಗಿ, ಮಾಸ್ಕೋದಲ್ಲಿ ಮಿಗ್-29 ಅಪ್‍ಗ್ರೇಡ್ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೇ ರಾಷ್ಟ್ರೀಯ ವಿಮಾನ ಪರೀಕ್ಷಾ ಕೇಂದ್ರದಲ್ಲಿ ಯೋಜನಾ ನಿರ್ದೇಶಕರಾಗಿದ್ದರು (ವಿಮಾನ ಪರೀಕ್ಷೆ) ಮತ್ತು ಲಘು ಯುದ್ಧ ವಿಮಾನ ತೇಜಸ್‍ನ ಹಾರಾಟ ಪರೀಕ್ಷೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಏರ್ ಮಾರ್ಷಲ್ ಪರಮ ವಿಶಿಷ್ಟ ಸೇವಾ ಪದಕ ಮತ್ತು ಅತಿ ವಿಶಿಷ್ಟ ಸೇವಾ ಪದಕವನ್ನು ಪಡೆದಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಸುಪ್ರೀಂ ರಿಲೀಫ್ – ಬಳ್ಳಾರಿ ಪ್ರವೇಶಕ್ಕೆ ಗ್ರೀನ್‌ಸಿಗ್ನಲ್‌

Share This Article