ವಾಷಿಂಗ್ಟನ್: ಜೂನ್ ತಿಂಗಳಲ್ಲಿ ಏರ್ ಇಂಡಿಯಾ ಫ್ಲೈಟ್ 171 ಪತನವಾಗಿ (Air India Plane Crash) ಮೃತಪಟ್ಟವರ ಕುಟುಂಬಸ್ಥರು ಈಗ ಕಾನೂನು ಸಮರ ಸಾರಿದ್ದಾರೆ.
ಬೋಯಿಂಗ್ ಮತ್ತು ವಿಮಾನ ಬಿಡಿಭಾಗಗಳ ತಯಾರಕ ಹನಿವೆಲ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ ಹೂಡಿದ್ದಾರೆ. ಕಂಪನಿಗಳು ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ದುರಂತಕ್ಕೆ ಪೈಲಟ್ ಕಾರಣನಾ? – ಅಮೆರಿಕ ವರದಿಯಿಂದ ಗೊಂದಲ; ಪ್ರತಿಕ್ರಿಯೆಗೆ ಕೇಂದ್ರ ನಕಾರ
ಮಂಗಳವಾರ ಸಲ್ಲಿಸಲಾದ ಮೊಕದ್ದಮೆಯಲ್ಲಿ ದೋಷಪೂರಿತ ಇಂಧನ ಸ್ವಿಚ್‌ಗಳು ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ವಿಮಾನದ ವಿನ್ಯಾಸದ ಅಪಾಯಗಳ ಬಗ್ಗೆ ತಿಳಿದಿದ್ದರೂ ಕಂಪನಿಗಳು ಏನನ್ನೂ ಮಾಡಿಲ್ಲ ಎಂದು ಆರೋಪಿಸಲಾಗಿದೆ.
ಲಂಡನ್ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಫ್ಲೈಟ್ 171, ಬೋಯಿಂಗ್ 787, ಅಹಮದಾಬಾದ್‌ನಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡು 260 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ
ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್‌ಗಳಿಗೆ ಇಂಧನ ಕಡಿತಗೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬೋಯಿಂಗ್ ವಿಮಾನಗಳಲ್ಲಿನ ಇಂಧನ ನಿಯಂತ್ರಣ ಸ್ವಿಚ್‌ಗಳು ಸುರಕ್ಷಿತವೆಂದು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಈ ಹಿಂದೆ ಹೇಳಿತ್ತು. ಈಗ ಇಂಧನ ಸ್ವಿಚ್‌ಗಳ ಬಗ್ಗೆ ತನಿಖಾಧಿಕಾರಿಗಳ ಗಮನ ಕೇಂದ್ರೀಕರಿಸಿದೆ.