ಏರ್‌ ಇಂಡಿಯಾ ಮುಂಬೈ-ಜೋಧ್‌ಪುರ ವಿಮಾನ ರನ್‌ವೇಯಲ್ಲೇ ಸ್ಟಾಪ್ ಮಾಡಿದ ಪೈಲಟ್

Public TV
1 Min Read

– ವಿಮಾನ ಟೇಕಾಫ್‌ಗೆ ಸಿದ್ಧವಾಗಿತ್ತು; ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಮತ್ತೆ ಏರ್‌ಪೋರ್ಟ್ ಬೇ ಗೆ ವಾಪಸ್

ಮುಂಬೈ: ಮುಂಬೈನಿಂದ ಜೋಧ್‌ಪುರಕ್ಕೆ ಹೊರಟಿದ್ದ ಏರ್‌ ಇಂಡಿಯಾ (Air India) ವಿಮಾನ AI645 ಟೇಕಾಫ್‌ ವೇಳೆಯೇ ತಾಂತ್ರಿಕ ಸಮಸ್ಯೆಯಿಂದಾಗಿ ರನ್‌ವೇಯಲ್ಲೇ ನಿಂತಿತು.

ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ವಿಮಾನವು ಬೆಳಗ್ಗೆ 9:25ಕ್ಕೆ ಟೇಕಾಫ್‌ಗೆ ಸಿದ್ಧವಾಗಿತ್ತು. ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಏರ್‌ಪೋರ್ಟ್‌ ಬೇ ಗೆ ವಾಪಸ್‌ ಆಯಿತು. ಇದರಿಂದಾಗಿ ಅನಿರೀಕ್ಷಿತ ನಿಲುಗಡೆ ಉಂಟಾಯಿತು. ಇದನ್ನೂ ಓದಿ: ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ; `ಕೈʼ ಶಾಸಕ ವೀರೇಂದ್ರ ಪಪ್ಪಿ ಸಿಕ್ಕಿಂನಲ್ಲಿ ED ವಶಕ್ಕೆ

ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ಗೇಟ್‌ಗೆ ಹಿಂತಿರುಗುವಂತೆ ಮಾಡಲಾಯಿತು. ಸ್ವಲ್ಪ ಸಮಯದ ನಂತರ, ಪ್ರಯಾಣಿಕರನ್ನು ಮತ್ತೆ ಹತ್ತಲು ಹೇಳಲಾಯಿತು. ಆದಾಗ್ಯೂ, ಅವರು ಅದೇ ವಿಮಾನವನ್ನು ಮರು ಹತ್ತಿದ್ದಾರೆಯೇ ಅಥವಾ ಬೇರೆ ವಿಮಾನವನ್ನು ಹತ್ತಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮತ್ತೊಂದು ಘಟನೆಯಲ್ಲಿ, ಆಗಸ್ಟ್ 16 ರಂದು ಮಿಲನ್‌ನಿಂದ ದೆಹಲಿಗೆ ನಿಗದಿಯಾಗಿದ್ದ ಮತ್ತೊಂದು ಏರ್ ಇಂಡಿಯಾ ವಿಮಾನವನ್ನು ತಾಂತ್ರಿಕ ಸಮಸ್ಯೆ ಕಾರಣ ರದ್ದುಗೊಳಿಸಲಾಯಿತು. ವಿಮಾನ ಹಾರಾಟದ ಸಮಯದಲ್ಲಿ ನಿರ್ವಹಣಾ ಸಮಸ್ಯೆ ಕಂಡುಬಂದ ನಂತರ AI138 ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್‌ ಭವನದಲ್ಲಿ ಮತ್ತೆ ಭದ್ರತಾ ವೈಫಲ್ಯ – ಗೋಡೆ ಹಾರಿ ಆವರಣಕ್ಕೆ ಎಂಟ್ರಿ

ಅನಿರೀಕ್ಷಿತ ರದ್ದತಿಯಿಂದ ಉಂಟಾದ ಅನಾನುಕೂಲತೆಗಾಗಿ ಏರ್‌ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದಾರೆ.

Share This Article