– ಅಹಮದಾಬಾದ್ ದುರಂತದ ಬಳಿಕ ಮತ್ತೆ ಫ್ಯೂಯಲ್ ಸ್ವಿಚ್‌ನಲ್ಲಿ ಸಮಸ್ಯೆ
ನವದೆಹಲಿ: ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಸಮಸ್ಯೆ ಇಲ್ಲದೇ ವಿಮಾನ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದಿದೆ.
ಲಂಡನ್ ನಿಂದ ಬೆಂಗಳೂರಿಗೆ (London–Bengaluru flight) ಹಾರಾಟ ನಡೆಸಲು ಏರ್ ಇಂಡಿಯಾ (Air India) ಬೋಯಿಂಗ್ 787-8 ವಿಮಾನ ನಿಗದಿಯಾಗಿತ್ತು. ವಿಮಾನ ಹಾರಾಟದ ವೇಳೆಯೇ ಫ್ಯೂಯಲ್ ಕಂಟ್ರೋಲ್ ಸ್ವಿಚ್ ನಲ್ಲಿ (ಇಂಧನ ನಿಯಂತ್ರಣ ಸ್ವಿಚ್) ದೋಷ ಕಾಣಿಸಿಕೊಂಡಿತ್ತು. ದೋಷ ಕಾಣಿಸಿಕೊಂಡ ಬಗ್ಗೆ ಪೈಲಟ್ ವರದಿ ಮಾಡಿದ ಬಳಿಕ ವಿಮಾನಯಾನ ಸಂಸ್ಥೆ ಮುಂದಿನ ಕ್ರಮ ಕೈಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಲಡಾಖ್ ಗಡಿ ಸಂಘರ್ಷ; ನರವಾಣೆ ಅಪ್ರಕಟಿತ ಪುಸ್ತಕ ಪ್ರಸ್ತಾಪಿಸಿದ ರಾಗಾ – ಲೋಕಸಭೆಯಲ್ಲಿ ಗದ್ದಲ

ವಿಮಾನ ಹಾರಾಟದ ವೇಳೆ ಆಗಿದ್ದೇನು?: ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನದಲ್ಲಿ ಇಂಧನ ಪೂರೈಸುವ ಸ್ವಿಚ್ 2 ಬಾರಿ ತನ್ನಷ್ಟಕ್ಕೆ ಕಟಾಫ್ ಆಗಿತ್ತು. ಅಂದ್ರೆ ರನ್ ಮೋಡ್‌ಗೆ ಹಾಕಿದ್ರೂ, ತನ್ನಷ್ಟಕ್ಕೆ ಮೋಡ್ ಆಫ್ ಆಗುತ್ತಿತ್ತು. ರನ್ ಮೋಡ್‌ನಲ್ಲಿ ಇದ್ದರೆ ಸಂಚಾರ ಸಾಧ್ಯ ಮೋಡ್ ಆಫ್ ಆದ್ರೆ ಇಂಧನ ಪೂರೈಕೆ ನಿಂತುಹೋಗಿ ವಿಮಾನ ಪತನಗೊಳ್ಳುವ ಸಾಧ್ಯತೆಯಿರುತ್ತದೆ. ಆದ್ರೆ ವಿಮಾನದಲ್ಲಿ 2 ಇಂಜಿನ್ ಇರುವ ಕಾರಣ ಮತ್ತೊಂದು ಇಂಜಿನ್ ಸಹಾಯದಿಂದ ಭೂಮಿಗೆ ತರಲಾಗಿದೆ ಎಂದು ತಿಳಿದುಬಂದಿದೆ.
ಹೌದು. ವಿಮಾನ ಹಾರಾಟದ ವೇಳೆ ಪೈಲಟ್ ಕಾರ್ಯ ವಿಧಾನಗಳನ್ನ ಪರಿಶೀಲಿಸುವಾಗ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ನಲ್ಲಿ (Fuel Control Switch) ದೋಷ ಕಾಣಿಸಿಕೊಂಡಿರುವುದನ್ನ ಗುರುತಿಸಿದ್ರು. ಈ ಬಗ್ಗೆ ವಿಮಾನಯಾನ ಸಂಸ್ಥೆಗೆ ವರದಿ ಮಾಡಿದರು. ಇದನ್ನೂ ಓದಿ: UPI ಮೂಲಕ ಪಿಎಫ್ ಹಣ ಬ್ಯಾಂಕ್ ಖಾತೆಗೆ – ಯಾವಾಗಿಂದ? ವರ್ಗಾವಣೆ ಮಾಡೋದು ಹೇಗೆ?
ಈ ಕುರಿತು ವಿಮಾನಯಾನ ಸಂಸ್ಥೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ನಮ್ಮ ಪೈಲಟ್‌ಗಳಲ್ಲಿ ಒಬ್ಬರು ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ ಇರುವ ಬಗ್ಗೆ ವರದಿ ಮಾಡಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಬಂದಿದೆ. ಆರಂಭಿಕ ಮಾಹಿತಿ ಸ್ವೀಕರಿಸಿದ ಬಳಿಕ ವಿಮಾನ ಹಾರಾಟವನ್ನ ಸ್ಥಗಿತಗೊಳಿಸಿದ್ದೇವೆ. ಜೊತೆಗೆ ಪೈಲಟ್‌ನ ಕಾಳಜಿಗಳನ್ನು ಆದ್ಯತೆಯ ಆಧಾರದ ಮೇಲೆ ಪರಿಶೀಲಿಸಲು OEM ಒಳಗೊಳ್ಳುತ್ತಿದ್ದೇವೆ ಎಂದು ಹೇಳಿದೆ. OEM ವಿಮಾನದ ಬಿಡಿ ಭಾಗಗಳ ತಯಾರಿಕ ಸಂಸ್ಥೆಯಾಗಿದೆ.
ಅಲ್ಲದೇ ಈ ವಿಷಯವನ್ನ ಏರ್ ಇಂಡಿಯಾ ಸಂಸ್ಥೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಗೆ ಗಮನಕ್ಕೆ ತಂದಿದೆ. ವಿಮಾನ ತಯಾರಕರೊಂದಿಗೆ ಸಮನ್ವಯದ ಜೊತೆಗೆ ಹೆಚ್ಚಿನ ತಾಂತ್ರಿಕ ಪರಿಶೀಲನೆ ನಡೆಯುತ್ತಿವೆ ಎಂದು ಏರ್ ಇಂಡಿಯಾ ದೃಢಪಡಿಸಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಚಿನ್ನದ ನಿಕ್ಷೇಪಕ್ಕಾಗಿ ಶೋಧ – ಹೆಲಿಕಾಪ್ಟರ್ ಮೂಲಕ ಏರಿಯಲ್ ಸರ್ವೆ
2025 ರಲ್ಲಿ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಡಿಜಿಸಿಎ ನಿರ್ದೇಶನದಂತೆ ಏರ್ ಇಂಡಿಯಾ ತನ್ನ ಎಲ್ಲಾ ಬೋಯಿಂಗ್ 787 ವಿಮಾನಗಳಲ್ಲಿ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ಗಳ ತಪಾಸಣೆ ನಡೆಸಿತ್ತು. ಆ ನಂತರ ಯಾವುದೇ ಸಮಸ್ಯೆಗಳು ಕಂಡುಬಂದಿರಲಿಲ್ಲ. ಏರ್ ಇಂಡಿಯಾದಲ್ಲಿ, ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.


