– ಕೊಚ್ಚಿಯಿಂದ ಮುಂಬೈಗೆ ಆಗಮಿಸಿದ್ದ ವಿಮಾನ
ಮುಂಬೈ: ಕೊಚ್ಚಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಭಾರೀ ಮಳೆಯಿಂದಾಗಿ ರನ್‌ವೇನಲ್ಲಿ ಜಾರಿ ಪಕ್ಕದ ಜಮೀನಿಗೆ ಹೋಗಿದ್ದು, ಬಳಿಕ ಪೈಲಟ್‌ನ ಚಾಣಕ್ಷ್ಯತನದಿಂದ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.
ಸೋಮವಾರ ಬೆಳಗ್ಗೆ 7:43ರ ಸುಮಾರಿಗೆ ಕೊಚ್ಚಿಯಿಂದ AI2744 ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗಿತ್ತು. ಅಲ್ಲಿಂದ ಹೊರಟು ಬೆಳಗ್ಗೆ 9:27ಕ್ಕೆ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಭಾರೀ ಮಳೆಯಿಂದಾಗಿ ವಿಮಾನವು ರನ್‌ವೇಯಿಂದ ಜರಿದು ಪಕ್ಕದ ಜಮೀನಿಗೆ ಹೋಗಿತ್ತು. ಬಳಿಕ ಪೈಲಟ್‌ನ ಚಾಣಕ್ಷ್ಯತನದಿಂದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.ಇದನ್ನೂ ಓದಿ: ಕನಕಪುರದ 250ಕ್ಕೂ ಹೆಚ್ಚು ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆ: ಡಿಕೆಶಿ
VT-TYA ನೋಂದಣಿಯ ಏರ್‌ಬಸ್ A320ne ವಿಮಾನವನ್ನು ಲ್ಯಾಂಡಿಂಗ್ ವೇಳೆ ಟರ್ಮಿನಲ್‌ಗೆ ಸಂಪರ್ಕಿಸಲಾಗಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ. ಯಾವುದೇ ಅವಘಡ ಸಂಭವಿಸಿಲ್ಲ. ಇನ್ನೂ ವಿಮಾನವು ರನ್‌ವೇಯಿಂದ ಜರಿದು ಪಕ್ಕಕ್ಕೆ ಹೋಗಿದ್ದರಿಂದ ನಿಲ್ದಾಣದ ಪ್ರಾಥಮಿಕ ರನ್‌ವೇ 09/27 ಹಾಗೂ ವಿಮಾನದ 3 ಟೈರ್‌ಗಳು ಸ್ಫೋಟಗೊಂಡು ಸಣ್ಣಪುಟ್ಟ ಹಾನಿಯಾಗಿದೆ. ಹೀಗಾಗಿ ಯಾವುದೇ ಅಡಚಣೆಯಿಲ್ಲದೇ ವಿಮಾನಗಳ ಹಾರಾಟಕ್ಕಾಗಿ ಎರಡನೇ ರನ್‌ವೇಯನ್ನು ಬಳಸಲಾಯಿತು.
“Flight AI2744, operating from Kochi to Mumbai on 21 July 2025, experienced heavy rain during landing, resulting in a runway excursion after touchdown. The aircraft taxied safely to the gate, and all passengers and crew members have since disembarked. The aircraft has been…
— Air India (@airindia) July 21, 2025
ಮುಂಬೈ ವಿಮಾನ ನಿಲ್ದಾಣವು ಎರಡು ಛೇದಿಸುವ ರನ್‌ವೇಗಳನ್ನು ಹೊಂದಿದ್ದು, ಒಂದು ಸಮಯದಲ್ಲಿ ಒಂದು ವಿಮಾನ ಮಾತ್ರ ಕಾರ್ಯನಿರ್ವಹಿಸಬಹುದು. ಜೊತೆಗೆ ಈ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಜನದಟ್ಟಣೆಯಿಂದ ಕೂಡಿರುವ ಒಂದೇ ರನ್‌ವೇ ಕಾರ್ಯಾಚರಣೆ ಮಾಡುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.
ಮುಂಬೈನಲ್ಲಿ ನಿರಂತರ ಮಳೆಯಾಗುತ್ತಿರುವುದು ಈ ಅವಘಡಕ್ಕೆ ಕಾರಣವಾಗಿದೆ. ಸೋಮವಾರ ಬೆಳಿಗ್ಗೆ, ಮುಂಬೈ ಉಪನಗರಗಳಲ್ಲಿ 115 ಮಿ.ಮೀ ಮಳೆಯಾಗಿದ್ದರೆ, ಕೊಲಾಬಾದಲ್ಲಿ ಕೇವಲ 11 ಮಿ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಇದನ್ನೂ ಓದಿ: ಇನ್ಮುಂದೆ ಉಪ್ಪಿ ʻನೆಕ್ಸ್ಟ್ ಲೆವೆಲ್ʼ – ಸದ್ದಿಲ್ಲದೇ ಸೆಟ್ಟೇರುತ್ತಿದೆ ಹೊಸ ಸಿನಿಮಾ