– 40 ವಿಮಾನಗಳ ಹಾರಾಟ ರದ್ದು; ನೂರಾರು ಕನ್ನಡಿಗರಿಗೂ ಸಮಸ್ಯೆ
ನವದೆಹಲಿ: ಇಂಡಿಗೋ ಬಳಿಕ ಏರ್ ಇಂಡಿಯಾ (Air India) ವಿಮಾನ ಕಾರ್ಯಾಚರಣೆಯಲ್ಲೂ ಅಡಚಣೆ ಉಂಟಾಗಿದೆ. ಇದರಿಂದ ಬೆಂಗಳೂರಿಗೆ ಬರಬೇಕಿದ್ದ ಕಾಂಗ್ರೆಸ್ ನಾಯಕರು ದೆಹಲಿ ವಿಮಾನ ನಿಲ್ದಾಣದಲ್ಲೇ ಲಾಕ್ ಆಗಿದ್ದಾರೆ.
ಹೌದು. ದೆಹಲಿ ವಿಮಾನ ನಿಲ್ದಾಣದ (Delhi Airport) ಸುತ್ತ ಸೋಮವಾರ ದಟ್ಟವಾದ ಮಂಜು ಆವರಿಸಿದ್ದು ಅನೇಕ ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ. ದಟ್ಟ ಮಂಜಿನಿಂದ ಕಡಿಮೆ ಗೋಚರತೆ ಉಂಟಾದ ಪರಿಣಾಮ ದೆಹಲಿಗೆ ಮತ್ತು ಅಲ್ಲಿಂದ ಹೊರಡುವ 40 ವಿಮಾನ ಹಾರಾಟವನ್ನ ಏರ್ ಇಂಡಿಯಾ ರದ್ದುಗೊಳಿಸಿದೆ. ಕೆಲ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮಂಜು, ಹೊಗೆ – ಇಂಡಿಗೋ ವಿಮಾನದಲ್ಲಿ ರಾಜ್ಯದ 21 ಶಾಸಕರು ಲಾಕ್!
ದೆಹಲಿಯಿಂದ ಬೆಂಗಳೂರಿಗೆ (Bengaluru) ಇಂದು ಮಧ್ಯಾಹ್ನ 3 ಗಂಟೆಗೆ ಹೊರಡಬೇಕಿದ್ದ AI2664 ಸಂಖ್ಯೆ ವಿಮಾನಕ್ಕೆ ಈವೆರೆಗ ಬೋರ್ಡಿಂಗ್ ಪಾಸ್ ಪ್ರಕ್ರಿಯೆ ಕೂಡ ಶುರುವಾಗಿಲ್ಲ. ಇದರಿಂದ ಕಾಂಗ್ರೆಸ್ ನಾಯಕರು ಸೇರಿದಂತೆ ನೂರಾರು ಕನ್ನಡಿಗರು ಸಮಸ್ಯೆಗೆ ಸಿಲುಕಿದ್ದಾರೆ. ಇದನ್ನೂ ಓದಿ: `No Work Call After Office Hours’ – ಏನಿದು ಸಂಪರ್ಕ ಕಡಿತಗೊಳಿಸುವ ಹಕ್ಕು?
ಭಾನುವಾರ ಆಯೋಜನೆಗೊಂಡಿದ್ದ ವೋಟ್ ಚೋರಿ ಸಮಾವೇಶಕ್ಕೆ ಮಂತ್ರಿಗಳು, ಕಾಂಗ್ರೆಸ್ ಶಾಸಕರು ದೆಹಲಿಗೆ ಆಗಮಿಸಿದ್ದರು. ಇಂದು ಬೆಂಗಳೂರಿಗೆ ತೆರಳಬೇಕಿತ್ತು. ಆದ್ರೆ ಮಾಜಿ ಸಂಸದ ಚಂದ್ರಪ್ಪ, ಆದಿ ಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್ ಮಂಜುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಸಂತ್ ಪಿ ಗಾಂಧಿ, ಹಲವರು ಏರ್‌ಪೋರ್ಟ್‌ನಲ್ಲೇ ಲಾಕ್ ಆಗಿದ್ದಾರೆ.
ಬೆಂಗಳೂರು ಮಾತ್ರವಲ್ಲೇ ಚೆನ್ನೈ, ಪುಣೆ, ಮುಂಬೈಗೆ ತೆರಳಬೇಕಿದ್ದ ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ಕಂಡುಬಂದಿದೆ. ಆದರೆ ಉತ್ತರ ಭಾರತದ ನಗರಗಳಿಗೆ ತೆರಳುವ ವಿಮಾನಗಳ ಹಾರಾಟದಲ್ಲಿ ಸಮಸ್ಯೆ ಕಂಡುಬಂದಿಲ್ಲ. ಇದನ್ನೂ ಓದಿ: Pahalgam Terror Attack | 1,597 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಆಪರೇಷನ್ ಮಹಾದೇವ್‌ನಲ್ಲಿ ಹತ್ಯೆಯಾದ ಉಗ್ರರ ಹೆಸರು ಉಲ್ಲೇಖ
ದಟ್ಟವಾದ ಮಂಜು ವಿಮಾಯಯಾನ ರದ್ದುಗೊಳಿಸಲು ಕಾರಣ ಎಂದು ಹೇಳಿರುವ ಏರ್ ಇಂಡಿಯಾ, “ನಾವು ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪ್ರಯಾಣ ಸುರಕ್ಷಿತವಾದ ತಕ್ಷಣ ಕಾರ್ಯಾಚರಣೆ ಪುನರಾರಂಭಿಸುತ್ತೇವೆ. ಸುರಕ್ಷತೆಯ ಹಿತದೃಷ್ಟಿಯಿಂದ ಮತ್ತು ನಮ್ಮ ಅತಿಥಿಗಳಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು, ನಾವು ಕೆಲವು ವಿಮಾಯಯಾನಗಳನ್ನು ರದ್ದುಗೊಳಿಸಿದ್ದೇವೆ. ಇದು ಸಮಸ್ಯೆ ಉಂಟು ಮಾಡಬಹುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ವಿಮಾನ ನಿಲ್ದಾಣಗಳಲ್ಲಿ ನಮ್ಮ ತಂಡ ನಿಮಗೆ ಸಹಾಯ ಮಾಡಲು 24 ಗಂಟೆಗಳ ಕಾಲ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.



