ಅರ್ಹತೆ ಹೊಂದಿರದ ಸಿಬ್ಬಂದಿ ಬಳಕೆ – ಏರ್ ಇಂಡಿಯಾಗೆ 90 ಲಕ್ಷ ರೂ. ದಂಡ

Public TV
1 Min Read

ನವದೆಹಲಿ: ಅರ್ಹತೆ ಇಲ್ಲದ ಸಿಬ್ಬಂದಿಯನ್ನು ವಿಮಾನ ಯಾನಕ್ಕೆ ಬಳಕೆ ಮಾಡಿದ್ದಕ್ಕೆ ಏರ್ ಇಂಡಿಯಾಗೆ (Air India) ಡಿಜಿಸಿಎ (DGCA) 90 ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೇ ಏರ್ ಇಂಡಿಯಾದ ಕಾರ್ಯಾಚರಣೆಯ ನಿರ್ದೇಶಕರಿಗೆ 6 ಲಕ್ಷ ರೂ. ಮತ್ತು ತರಬೇತಿ ನಿರ್ದೇಶಕರಿಗೆ 3 ಲಕ್ಷ ರೂ. ದಂಡ ವಿಧಿಸಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಸಂಬಂಧಿಸಿದ ಪೈಲಟ್‍ಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮುಡಾ ಹಗರಣಕ್ಕೆ ಅಧಿಕಾರಿ ಕಾರಣವೇ ಹೊರತು ಪ್ರಾಧಿಕಾರ ಸಮಿತಿಯಲ್ಲ – ರಮೇಶ ಬಂಡಿಸಿದ್ದೇಗೌಡ

ಏರ್ ಇಂಡಿಯಾ ಅನುಭವ ಇಲ್ಲದ ಲೈನ್ ಕ್ಯಾಪ್ಟನ್‍ಗಳನ್ನು ಬಳಸಿಕೊಂಡು ವಿಮಾನ ಹಾರಾಟ ನಡೆಸಿದೆ. ಇದು ಸುರಕ್ಷತಾ ನೀತಿ ಉಲ್ಲಂಘನೆಯಾಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಡಿಜಿಸಿಎ ಏರ್ ಇಂಡಿಯಾಗೆ ಎಚ್ಚರಿಕೆ ನೀಡಿದೆ.

ಜು.10 ರಂದು ಏರ್‌ಲೈನ್‌ ಸಲ್ಲಿಸಿದ ವರದಿಯ ಬಳಿಕ ಡಿಜಿಸಿಎ ದಾಖಲಾತಿಗಳ ಪರಿಶೀಲನೆ, ವೇಳಾಪಟ್ಟಿ ಸೇರಿದಂತೆ ವಿಮಾನದ ಕಾರ್ಯಾಚರಣೆಗಳನ್ನು ಪರಿಶೀಲಿಸಿ ತನಿಖೆ ನಡೆಸಿತ್ತು. ತನಿಖೆ ವೇಳೆ ಹಲವಾರು ನಿಯಮ ಉಲ್ಲಂಘನೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ ನೋಟಿಸ್‍ಗೆ ನೀಡಿರುವ ಉತ್ತರ ತೃಪ್ತಿಕರವಾಗಿಲ್ಲ. ಈ ಕಾರಣಕ್ಕೆ ನಿಯಮದ ಪ್ರಕಾರ ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರು ಎಸಿಗಳು ಅಂದ್ರೆ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? – ಕೃಷ್ಣಭೈರೇಗೌಡ ತರಾಟೆ

Share This Article