ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಡಾ.ಪ್ರತೀಕ್ ಜೋಶಿ ಬೆಳಗಾವಿಯ ವಿದ್ಯಾರ್ಥಿ – ಕಣ್ಣೀರಿಟ್ಟ ಸಹಪಾಠಿಗಳು

Public TV
1 Min Read

ಬೆಳಗಾವಿ: ವಿಮಾನ ದುರಂತದಲ್ಲಿ ಬೆಳಗಾವಿಯಲ್ಲೇ (Belagavi) ಓದಿದ್ದ ವೈದ್ಯನ ಕುಟುಂಬವೇ ಬಲಿಯಾಗಿದೆ. ಮೂರು ಮುದ್ದಾದ ಮಕ್ಕಳು, ಪತ್ನಿ ಜೊತೆ ರಾಜಸ್ಥಾನದ ಡಾ.ಪ್ರತೀಕ್ ಜೋಶಿ (Dr Prateek Joshi) ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಬೆಳಗಾವಿಯ ಕೆಎಲ್‌ಇ ಕಾಲೇಜಿನಲ್ಲಿ (KLE College) ಪ್ರತೀಕ್ ವ್ಯಾಸಂಗ ಮಾಡಿದ್ದರು. ಪ್ರತೀಕ್ ಕುಟುಂಬದ ಸಾವಿಗೆ ಸ್ನೇಹಿತರು, ಕೆಎಲ್‌ಇ ಕಾಲೇಜು (KLE College) ಪ್ರಿನ್ಸಿಪಾಲ್ ಕಂಬನಿ ಮಿಡಿದಿದ್ದಾರೆ.

ಲಂಡನ್‌ನಲ್ಲಿ (London) ಸೆಟ್ಲ್ ಆಗಬೇಕು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಪ್ಲ್ಯಾನ್ ಮಾಡಿಕೊಂಡು ತಿಂಗಳ ಹಿಂದೆ ತನ್ನೂರು ರಾಜಸ್ಥಾನಕ್ಕೆ ಬಂದಿದ್ದ ಪ್ರತೀಕ್ ಅವರು ಕುಟುಂಬದ ಸದಸ್ಯರೊಂದಿಗೆ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ಮಗಳ ಸೇರುವ ತವಕದಲ್ಲಿದ್ದ ತಾಯಿ ಸಾವಿನ ಮನೆಗೆ!

 

ಪ್ರತೀಕ್ ಜೋಷಿ 2000ರಲ್ಲಿ ಬೆಳಗಾವಿಯ ಕೆಎಲ್‌ಇ ಕಾಲೇಜಿನಲ್ಲಿ ಮೆಡಿಕಲ್ ಓದಲು ಬಂದಿದ್ದರು. 2005ರ ವರೆಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಪ್ರತೀಕ್ ಕೋಲಾರದಲ್ಲಿ ರೇಡಿಯೋಲಾಜಿ ಮೇಲೆ ಪಿಜಿ ಮಾಡಿದ್ದರು. ಇದಾದ ಬಳಿಕ ತನ್ನೂರಿನಲ್ಲೇ ಕೆಲ ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ 2001ರಲ್ಲಿ ಲಂಡನ್‌ಗೆ ತೆರಳಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲಾರಂಭಿಸಿದ್ದರು. ಪ್ರತೀಕ್ ಅವರ ಪತ್ನಿ ಕೂಡ ವೈದ್ಯೆಯಾಗಿದ್ದು ಮಕ್ಕಳಾದ ಮೇಲೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಕೆಲಸಕ್ಕೆ ರಾಜೀನಾಮೆ ಕೊಡಿಸಿ ಲಂಡನ್‌ಗೆ ತೆರಳುತ್ತಿದ್ದರು.

ಇದೊಂದು ದೊಡ್ಡ ದುರಂತ. ಪ್ರತೀಕ್ ಜೋಶಿ 2005ರಲ್ಲಿ ರೇಡಿಯಾಲಜಿ ಪಿಜಿ ಕೋರ್ಸ್ ಮುಗಿಸಿದ್ದರು. 2021ರಲ್ಲಿ ಲಂಡನ್‌ಗೆ ಪ್ರಾಕ್ಟಿಸ್ ಮಾಡಲು ಹೋಗಿದ್ದರು. ಜೀವನ ಶುರು ಮಾಡಬೇಕು ಎನ್ನುವಾಗಲೇ ಅನ್ಯಾಯ ಆಗಿದೆ. ಎಲ್ಲರೂ ಶಾಕ್‌ನಲ್ಲೇ ಇದ್ದೇವೆ ಎಂದು ಪ್ರಿನ್ಸಿಪಾಲ್ ಡಾ.ನಿರಂಜನಾ ಮಹಾಂತಶೆಟ್ಟಿ ಭಾವುಕರಾಗಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ದಂತವೈದ್ಯೆಯಾಗಿದ್ದ ಭಾರತೀಯ ಮೂಲದ ಕೆನಡಾ ಪ್ರಜೆ ಸಾವು

ಆತ ಸದಾ ಹಸನ್ಮುಖಿಯಾಗಿದ್ದ. ನಾವೆಲ್ಲರೂ ಸೇರಿ 25 ವರ್ಷದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ನಿರ್ಧರಿಸಿದ್ದೆವು. ವಿಧಿಯಾಟದಲ್ಲಿ ನಾವು ಡಾ.ಪ್ರತೀಕ್ ಹಾಗೂ ಕುಟುಂಬವನ್ನು ಕಳೆದುಕೊಂಡಿದ್ದೇವೆ ಎಂದು ಪ್ರತೀಕ್ ಜೊತೆ ವ್ಯಾಸಂಗ ಮಾಡಿದ್ದ ಸಹಪಾಠಿಗಳು ಕಣ್ಣೀರಿಟ್ಟಿದ್ದಾರೆ.

Share This Article