Exclusive : ಗಗನಸಖಿ ಬ್ಯೂಟಿಗೆ ಕಾನೂನನ್ನು ತೂರಿ ರಾಜ್ಯ ಸರ್ಕಾರದಿಂದ ಪ್ರಮುಖ ಹುದ್ದೆ ಕರುಣೆ!

Public TV
1 Min Read

ಪವಿತ್ರ ಕಡ್ತಲ
ಬೆಂಗಳೂರು: ಮಾಜಿ ಗಗನಸಖಿಯೊಬ್ಬರಿಗೆ ರಾಜ್ಯ ಸರ್ಕಾರ ಎರಡೆರಡು ಹುದ್ದೆ ಕರುಣಿಸಿರುವುದು ಈಗ ವಿವಾದಕ್ಕೀಡಾಗಿದೆ. ಚಾಮರಾಜನಗರ ವನ್ಯಜೀವಿ ಮಂಡಳಿಯ ಸದಸ್ಯೆ ಹಾಗೂ ಕೆಪಿಸಿಸಿ ಐಟಿ ಸೆಲ್‍ನ ಜಂಟಿ ಕಾರ್ಯದರ್ಶಿಯನ್ನಾಗಿ ಪ್ರೇರಣಾ ಎಂಬುವವರನ್ನು ನೇಮಕ ಮಾಡಿರುವುದು ರಾಜ್ಯಪಾಲರ ಅಂಗಳ ತಲುಪಿದೆ.

ಗಗನಸಖಿಯಾಗಿದ್ದ ಪ್ರೇರಣಾಗೆ ಚಾಮರಾಜನಗರ ವನ್ಯಜೀವಿ ಮಂಡಳಿಯಲ್ಲಿ ಸದಸ್ಯೆ ಸ್ಥಾನ ಸಿಕ್ಕಿದೆ. ವಿಚಿತ್ರ ಅಂದ್ರೆ ಸ್ಥಳೀಯರಿಗೆ ಈ ಹುದ್ದೆ ನೀಡಬೇಕು. ಆದರೆ ಬೆಂಗಳೂರಿನಲ್ಲಿರೋ ಉಡುಪಿ ಮೂಲದ ಪ್ರೇರಣಾಗೆ ಈ ಹುದ್ದೆ ನೀಡಿ, ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದನ್ನೂ ಓದಿ: ಜಾರ್ಜ್ ಮಗನ ಮೇಲೆ ಸಿಎಂಗೆ ಫುಲ್ ಲವ್ – ಕಾಡಲ್ಲಿ ಸ್ವಂತ ವಾಹನದಲ್ಲಿ ಸವಾರಿಗೆ ಪರ್ಮಿಷನ್

ಇದರ ಜೊತೆಗೇ ಕಾಂಗ್ರೆಸ್‍ನ ಐಟಿ ಸೆಲ್‍ನಲ್ಲಿ ಜಂಟಿ ಕಾರ್ಯದರ್ಶಿಯ ಹುದ್ದೆಯೂ ಈಕೆಗೆ ಒಲಿದಿದೆ. ಕೆಪಿಸಿಸಿ ಐಟಿ ಸೆಲ್ ಜಂಟಿ ಕಾರ್ಯದರ್ಶಿ ಹುದ್ದೆಗೆ ಖುದ್ದು ಪರಮೇಶ್ವರ್ ಅವರೇ ಶಿಫಾರಸು ಮಾಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

ಪ್ರೇರಣಾ ಹುದ್ದೆ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಎನ್ನುವವರು ರಾಜ್ಯಪಾಲರಿಗೂ ಪತ್ರ ನೀಡಿದ್ದಾರೆ. ಅರ್ಹತೆ ಇಲ್ಲದೆ ಇದ್ದರೂ ಈಕೆಗೆ ಹುದ್ದೆ ನೀಡಲಾಗಿದೆ. ಈಕೆಯ ಹಿಂದೆ ದೊಡ್ಡ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ ಅಂತಾ ದೂರು ನೀಡಲಾಗಿದೆ.

ಈ ದೂರಿನ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಪ್ರೇರಣಾ ನನಗೆ ಕಾಡಿನ ಬಗ್ಗೆ ಅರಿವಿದೆ, ಕೆಲ ಸಹಿಸಲು ಸಾಧ್ಯವಾಗದವರು ಇದನ್ನೆಲ್ಲ ಮಾಡಿದ್ದಾರೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!

https://youtu.be/E9bimxuRhbU

https://youtu.be/lZGSEDhV8kM

Share This Article
Leave a Comment

Leave a Reply

Your email address will not be published. Required fields are marked *