ಪಿಜಿ ಮಾಲೀಕನ ಕಾಟ ತಾಳಲಾರದೆ ಗಗನಸಖಿ ನೇಣಿಗೆ ಶರಣು

Public TV
2 Min Read

– ಗಗನಸಖಿಯ ಮೊಬೈಲ್ ಹ್ಯಾಕ್ ಮಾಡಿದ್ದ ಮಾಲೀಕ

ಚಂಡೀಗಢ: ಪಿಜಿ ಮಾಲೀಕನ ಕಾಟ ತಾಳಲಾರದೆ ಗಗನಸಖಿ ನೇಣಿಗೆ ಶರಣಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಗುರುಗ್ರಾಮದ ಡಿಎಲ್‍ಎಫ್ ಪೇಸ್-3ಯ ಪಿಜಿಯಲ್ಲಿ ಸ್ಪೈಸ್ ಜೆಟ್ ವಿಮಾನ ಸಂಸ್ಥೆಯ ಗಗನಸಖಿ ನೇಣಿಗೆ ಶರಣಾಗಿದ್ದು, ಪಿಜಿ ಮಾಲೀಕ ಅಮರಿಂದರ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಸಂತ್ರಸ್ತೆಯನ್ನು ಮಿಸ್ತು ಸರ್ಕಾರ್ ಎಂದು ಗುರುತಿಸಲಾಗಿದೆ. ಸರ್ಕಾರ್ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದು, ತಂದೆಯನ್ನು ಹವ್ಲು ಚಂದ್ರ ಸರ್ಕಾರ್ ಎಂದು ಗುರುತಿಸಲಾಗಿದೆ.

ಪ್ರಕರಣದ ಕುರಿತು ಹವ್ಲು ಚಂದ್ರ ಸರ್ಕಾರ್ ಪ್ರತಿಕ್ರಿಯಿಸಿ, ಮಿಸ್ತುಳಿಗೆ ಪಿಜಿ ಮಾಲೀಕ ಕಿರುಕುಳ ನೀಡಿದ್ದಾನೆ. ಅಮರಿಂದರ್ ಸಿಂಗ್ ನನ್ನ ಮಗಳ ಪೋನ್‍ನನ್ನು ಹ್ಯಾಕ್ ಮಾಡಿದ್ದ. ಡಿಸೆಂಬರ್ 17ರ ರಾತ್ರಿ ನನ್ನ ಮಗಳು ಕರೆ ಮಾಡಿದ್ದಳು, ಆಗ ಸಿಂಗ್ ನನಗೆ ಕಿರುಕುಳ ನೀಡುತ್ತಿದ್ದಾನೆ, ಅವಮಾನ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಳು ಎಂದು ತಿಳಿಸಿದ್ದಾರೆ.

ಸಿಂಗ್ ವರ್ತನೆಯಿಂದಗಿ ಮಿಸ್ತು ಬೇಸತ್ತಿದ್ದಳು. ಅಲ್ಲದೆ ಮರಳಿ ಮನೆಗೆ ತೆರಳಲು ನಿರ್ಧರಿಸಿದ್ದಳು. ಈ ಕುರಿತು ಡಿ.17 ರಂದು ತಂದೆ ಹೌವ್ಲು ಚಂದ್ರ ಸರ್ಕಾರ್ ಕರೆ ಮಾಡಿದಾಗ ಮನೆಗೆ ಬರುವಂತೆ ತಿಳಿಸಿದ್ದರು. ಆದರೆ ಮಿಸ್ತು ತಂದೆಯ ಕರೆಯನ್ನು ಕಟ್ ಮಾಡಿದ್ದಳು. ಕೆಲವೇ ಗಂಟೆಗಳ ನಂತರ ಪಿಜಿ ಮಾಲೀಕ ಸಿಂಗ್ ಹೌವ್ಲು ಚಂದ್ರ ಸರ್ಕಾರ್ ಅವರಿಗೆ ಕರೆ ಮಾಡಿ, ನಿಮ್ಮ ಮಗಳು ಏನೋ ಮಾಡುವ ಧಾವಂತದಲ್ಲಿದ್ದಾಳೆ ಎಂದು ತಿಳಿಸಿದ್ದ.

ನಂತರ ಬುಧವಾರ ಬೆಳಗ್ಗೆ ಹೌವ್ಲು ಚಂದ್ರ ಸರ್ಕಾರ್ ಅವರು ತಮ್ಮ ಮಗಳು ಸಾವನ್ನಪ್ಪಿರುವ ಕುರಿತು ತಿಳಿಸಿದ್ದಾರೆ. ಪಿಜಿ ಕೆಲಸಗಾರರು ಘಟನೆ ಕುರಿತು ಹೌವ್ಲು ಚಂದ್ರ ಸರ್ಕಾರ್ ಅವರಿಗೆ ಕರೆ ಮಾಡಿ ವಿವರಿಸಿದ್ದಾರೆ. ಮಿಸ್ತು ಒಳಗಿನಿಂದ ತನ್ನ ರೂಂ ಲಾಕ್ ಮಾಡಿಕೊಂಡು ಫ್ಯಾನ್‍ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.

ಮಿಸ್ತು ತಂದೆ ಹೌವ್ಲು ಚಂದ್ರ ಸರ್ಕಾರ್ ಹೇಳಿಕೆ ಆಧರಿಸಿ ಪಿಜಿ ಮಾಲೀಕ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 306(ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಗನಸಖಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆ ನಂತರ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *