50ನೇ ದಿನಕ್ಕೆ ಕಾಲಿಟ್ಟ ಏಮ್ಸ್ ಹೋರಾಟ – ರಕ್ತದಲ್ಲಿ ಸಹಿ ಸಂಗ್ರಹಿಸಿ ಸಿಎಂಗೆ ಮನವಿ

Public TV
1 Min Read

ರಾಯಚೂರು: ಏಮ್ಸ್‌ಗಾಗಿ ಜಿಲ್ಲೆಯಲ್ಲಿ ನಡೆದಿರುವ ಅನಿರ್ಧಿಷ್ಟಾವಧಿ ಹೋರಾಟ ಶುಕ್ರವಾರ 50ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಹೋರಾಟಕ್ಕೆ ಇದುವರೆಗೂ ಸ್ಪಂದಿಸದ ಹಿನ್ನೆಲೆ ಹೋರಾಟಗಾರರು ರಕ್ತದಲ್ಲಿ ಸಹಿ ಮಾಡುವ ಬೃಹತ್ ಆಂದೋಲನಕ್ಕೆ ಮುಂದಾಗಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸುಮಾರು 5,000 ಜನರಿಂದ ರಕ್ತದ ಸಹಿ ಸಂಗ್ರಹಿಸಲಾಗುತ್ತಿದೆ. ವಿದ್ಯಾರ್ಥಿಗಳು, ವೃದ್ಧರು, ಹೋರಾಟಗಾರರು, ಸ್ಥಳೀಯರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆ. 90ರ ಇಳಿ ವಯಸ್ಸಿನ ವೃದ್ಧರೊಬ್ಬರ ಮೂಲಕ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ರಕ್ತದ ಸಹಿಗಳನ್ನು ಸಿಎಂಗೆ ಕಳುಹಿಸುವ ಮೂಲಕ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: IIMB ಯಿಂದ ‘ಹಾಸ್ಪಿಟಲ್ ಮ್ಯಾನೇಜ್‍ಮೆಂಟ್’ ಕೋರ್ಸ್ ಆರಂಭ – ಡಾ.ಕೆ.ಸುಧಾಕರ್ ಕನಸು ಸಾಕಾರ

ರಾಯಚೂರಿನಿಂದ ಐಐಟಿ ಕಸಿದುಕೊಳ್ಳಲಾಗಿದೆ. ಸದ್ಯ ಏಮ್ಸ್ ಆದರೂ ರಾಯಚೂರಿಗೆ ನೀಡಲಿ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಬೊಮ್ಮಾಯಿ ಹುಬ್ಬಳ್ಳಿ-ಧಾರವಾಡಕ್ಕೆ ಮಾತ್ರ ಸಿಎಂ ಅಲ್ಲ, ಸಮಗ್ರ ಕರ್ನಾಟಕಕ್ಕೆ ಸಿಎಂ. ಹೀಗಾಗಿ ಏಮ್ಸ್ ರಾಯಚೂರಿಗೆ ನೀಡುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕನ್ಹಯ್ಯಲಾಲ್ ಹತ್ಯೆ ಖಂಡಸಿ ಪ್ರತಿಭಟನೆ – ಮೂವರು ಕಾರ್ಯಕರ್ತರ ಪ್ಯಾಂಟ್‍ಗೆ ತಗುಲಿದ ಬೆಂಕಿ

Live Tv

Share This Article
Leave a Comment

Leave a Reply

Your email address will not be published. Required fields are marked *