ನಿಮ್ಮ ನಡುವೆ ನಡೆಯೋದನ್ನು ಹೊರಗೆ ತರಬೇಡಿ: ಸಿಎಂ, ಡಿಸಿಎಂಗೆ ಎಐಸಿಸಿ ಅಧ್ಯಕ್ಷರ ಸಲಹೆ

By
1 Min Read

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಒಳಗೊಳಗೆ ನಡೆಯುತ್ತಿರುವ ಕಿತ್ತಾಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಂ-ಡಿಸಿಎಂಗೆ ಮೆಲುದನಿಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಚುಚ್ಚುಮಾತು, ಬುದ್ಧಿಮಾತು, ಕಿವಿಮಾತುಗಳ ಮೂಲಕ ರಾಜ್ಯ ನಾಯಕರ ಕಿವಿ ಹಿಂಡಿದ್ದಾರೆ.

ಕಿತ್ತಾಡಬೇಡಿ, ಸಮಸ್ಯೆ ತರಬೇಡಿ, ಒಗ್ಗಟ್ಟಿನಿಂದ ಇರಿ ಎಂದು ಕಾರ್ಯಕರ್ತರ ಎದುರೇ ಪಾಠ ಮಾಡಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ತಲೆ ಹಾಕಲ್ಲ. ನೀವು ಬುದ್ದಿವಂತರು ಇದ್ದೀರಿ ಎನ್ನುತ್ತಲೇ ರಾಜ್ಯ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ತಾವೇಕೆ ರಾಜ್ಯದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ ಎಂಬುದನ್ನು ತಿಳಿ ಹೇಳಿದ್ದಾರೆ. ಒಗ್ಗಟ್ಟಿನ ಮಂತ್ರ ಬೋಧಿಸಿದ್ದಾರೆ. ಬೆಲ್ಲ ಇರುವ ತನಕ ಇರುವೆ ಇರ್ತಾವೆ ಎನ್ನುವ ಮೂಲಕ, ಕಿವಿ ಕಚ್ಚುವರರ ಬಗ್ಗೆ ಎಚ್ಚರ ಇರಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮಾತುಗಳು ಪಕ್ಷದ ಒಳ-ಹೊರಗೆ ಚರ್ಚೆಗೆ ಗ್ರಾಸವಾಗಿವೆ.

Share This Article