ಬೀದರ್: ಆಟೋದಲ್ಲಿ ಪ್ರಯಾಣಿಸುವಾಗ ಮಹಿಳೆ ಕಳೆದುಕೊಂಡ 29 ಸಾವಿರ ಹಣವನ್ನು ಎಐ ಕ್ಯಾಮೆರಾ ಮೂಲಕ ಪತ್ತೆ ಹಚ್ಚುವಲ್ಲಿ ಬೀದರ್ ಪೊಲೀಸರು (Bidar Police) ಯಶಸ್ವಿಯಾಗಿದ್ದಾರೆ.
3 ದಿನಗಳ ಹಿಂದೆ ಡಿಹೆಚ್‌ಓ ಕಚೇರಿಯಲ್ಲಿ ಕೆಲಸ ಮಾಡುವ ಜ್ಯೋತಿ, ಮಂಗಲಪೇಟ್ ಬಳಿ ಹಣ ಕಳೆದುಕೊಂಡಿದ್ದರು. ಮನೆಯಿಂದ ಕಚೇರಿಗೆ ಬಂದು ಹಣ ಪರಿಶೀಲಿಸಿದಾಗ ಹಣದ ಬ್ಯಾಗ್ ಕಳೆದುಕೊಂಡಿದ್ದು ಗೊತ್ತಾಗಿ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆಟೋದಿಂದ ಬಿದ್ದಿದ್ದ ಹಣವನ್ನು ಬೈಕ್ ಸವಾರರು ಎತ್ತಿಕೊಂಡಿದ್ದ ದೃಶ್ಯ ಎಐ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ಪೊಲೀಸ್ ಡ್ರೆಸ್‌ನಲ್ಲಿ ಬಂದು ದರೋಡೆ – 20 ಲಕ್ಷ ನಗದು, ಅರ್ಧ ಕೆಜಿ ಚಿನ್ನಾಭರಣ ದೋಚಿ ಪರಾರಿ
29 ಸಾವಿರ ರೂ. ಹಣವನ್ನು ಬೀದರ್ ಪೊಲೀಸರು ಮಹಿಳೆಗೆ ಹಿಂದಿರುಗಿಸಿದ್ದಾರೆ.

