ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆಗೆ ತೆರಳಿದ್ದ ಪ್ರತಾಪ್ ಸಿಂಹಗೆ ಘೇರಾವ್

Public TV
1 Min Read

-ರಾಮಲಲ್ಲಾನ ವಿಗ್ರಹಕ್ಕೆ ಕಲ್ಲು ಸಿಕ್ಕ ಜಾಗದಲ್ಲಿ ಭೂಮಿಪೂಜೆ ಆಯೋಜನೆ
-ಸ್ಥಳದಿಂದ ವಾಪಸ್ ಆದ ಸಂಸದ
-ದಲಿತ ವಿರೋಧಿ ಎಂದು ಪ್ರತಾಪ್‌ ಸಿಂಹ ವಿರುದ್ಧ ಘೋಷಣೆ

ಮೈಸೂರು: ಅಯೋಧ್ಯೆ ರಾಮಲಲ್ಲಾನ ವಿಗ್ರಹ ಕೆತ್ತನೆಗೆ ಬಳಸಿರುವ ಶಿಲೆ ಸಿಕ್ಕ ಜಾಗದಲ್ಲಿ ರಾಮಮಂದಿರ (Ram Mandir) ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ತೆರಳಿದ್ದ ಸಂಸದ ಪ್ರತಾಪ್ ಸಿಂಹ (Pratap Simha) ಅವರಿಗೆ ದಲಿತ ಮುಖಂಡರು ಘೇರಾವ್ ಹಾಕಿದ ಘಟನೆ ನಡೆದಿದೆ.

ಮೈಸೂರಿನ (Mysuru) ಹಾರೋಹಳ್ಳಿಯಲ್ಲಿ ಬಾಲರಾಮನ ಮೂರ್ತಿಗೆ ಕಲ್ಲು ಸಿಕ್ಕಿತ್ತು. ಶಿಲೆ ಸಿಕ್ಕ ಸ್ಥಳದಲ್ಲೇ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದರು. ಅದರಂತೆ ಇಂದು (ಜ.22) ರಂದು ಭೂಮಿಪೂಜೆಯಲ್ಲಿ ಪಾಲ್ಗೊಳ್ಳಲು ಸಂಸದ ಪ್ರತಾಪ್ ಸಿಂಹ ತೆರಳಿದ್ದವು. ಸಂಸದನಿಗೆ ದಲಿತ ಮುಖಂಡರು ಘೇರಾವ್ ಹಾಕಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಅದ್ಧೂರಿ ರಾಮೋತ್ಸವ – ಅಭಯರಾಮನ ಅನಾವರಣ

ಸಂಸದ ಪ್ರತಾಪ್ ಸಿಂಹ ದಲಿತ ವಿರೋಧಿ ಎಂದು ಕೂಗಲಾಯಿತು. ಈ ವೇಳೆ ಬೇಸರದಿಂದ ಕಾರ್ಯಕ್ರಮದಿಂದ ಪ್ರತಾಪ್ ಸಿಂಹ ಹೊರಹೋದರು.

ಹಾರೋಹಳ್ಳಿ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ನಾನು ಈ ಕ್ಷಣಕ್ಕೂ ಮಹಿಷ ದಸರಾ ವಿರೋಧಿ. ಮಹಿಷಾ ದಸರಾ ವಿರೋಧ ಮಾಡಿದ್ದಕ್ಕೆ ಯಾರೋ ನಾಲ್ಕು ಜನ ಕಿಡಿಗೇಡಿಗಳು ಗಲಾಟೆ ಮಾಡಿದರು. ಕಾಂಗ್ರೆಸ್‌ನ ಪುಡಾರಿಗಳಿಂದ ಗಲಾಟೆ ನಡೆದಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಶಿವಮೊಗ್ಗ: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠೆ ಸಂಭ್ರಮದ ವೇಳೆ ಅಲ್ಲಾಹು ಅಕ್ಬರ್ ಎಂದು ಕೂಗಿದ ಮುಸ್ಲಿಂ ಮಹಿಳೆ

ಮತ್ತೆ ಯಾರೋ ನಾಲ್ಕು ಜನ ಮಹಿಷನ ಭಕ್ತರಿದ್ದಾರೆ. ಚಾಮುಂಡಿ ತಾಯಿಯ ಭಕ್ತರು ಕೋಟ್ಯಂತರ ಮಂದಿ ಇದ್ದಾರೆ. ನಾನು ಚಾಮುಂಡಿಯ ಭಕ್ತ. ನನ್ನನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್‌ನವರಿಂದ ಸೋಲಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಇಂತಹ ಗಲಾಟೆಗಳು ಮುಂದೇನೂ ನಡೆಯುತ್ತೆ. ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಹೇಳಿದರು.

Share This Article