ಮುಂದೆ ತಮಿಳು ನಾಯಕನಿಗೆ ಪ್ರಧಾನಿ ಪಟ್ಟ: ಅಮಿತ್‌ ಶಾ

Public TV
1 Min Read

ಚೆನ್ನೈ: ಮುಂದಿನ ದಿನಗಳಲ್ಲಿ ತಮಿಳುನಾಡಿನ ನಾಯಕರೊಬ್ಬರನ್ನು ದೇಶದ ಪ್ರಧಾನಿಯನ್ನಾಗಿ (Tamil PM) ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿಕೆ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

ತಮಿಳುನಾಡು ಪ್ರವಾಸ ಕೈಗೊಂಡಿರುವ ಅಮಿತ್‌ ಶಾ ಭಾನುವಾರ ರಾಜ್ಯ ಬಿಜೆಪಿಯ ಹಿರಿಯ ನಾಯಕರ ಜೊತೆ ಆಪ್ತ ಸಮಾಲೋಚನಾ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಭಾಗಿಯಾದ ಹಿರಿಯ ನಾಯಕರು ಅಮಿತ್‌ ಶಾ ಅವರ ಹೇಳಿಕೆಯ ಬಗ್ಗೆ ಮಾತನಾಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

ಮುಂಬರುವ ದಿನಗಳಲ್ಲಿ ತಮಿಳುನಾಡಿನ ವ್ಯಕ್ತಿ ಈ ದೇಶದ ಪ್ರಧಾನಿಯಾಗಲಿದ್ದಾರೆ ಎನ್ನುವ ರೀತಿಯ ಮಾತುಗಳನ್ನು ಆಡಿದ್ದಾರೆ. ಆದರೆ ಈ ಕುರಿತು ಅಮಿತ್‌ ಶಾ ಹೆಚ್ಚಿನ ವಿವರ ನೀಡಲಿಲ್ಲ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ವೀಡಿಯೋ ಮಾಡದಂತೆ ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆಗೆ ಯತ್ನಿಸಿದ ಪುಂಡ

ಈ ಹಿಂದೆ ತಮಿಳರಿಗೆ ಪ್ರಧಾನಿಯಾಗುವ ಅವಕಾಶ ಎರಡು ಬಾರಿ ಸಿಕ್ಕಿತ್ತು. ಆದರೆ ಡಿಎಂಕೆಯಿಂದಾಗಿ (DMK) ಈ ಅವಕಾಶ ಕೈತಪ್ಪಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕನಿಷ್ಠ 20 ಸ್ಥಾನ ಗೆಲ್ಲಲು ಪ್ರಯತ್ನಿಸಬೇಕು ಎಂದು ಕರೆ ನೀಡಿದ್ದಾರೆ.


ವೆಲ್ಲೂರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ (Congress) ಮತ್ತು ಡಿಎಂಕೆಯನ್ನು ಟೀಕಿಸಿದ ಅಮಿತ್‌ ಶಾ ಆ ಪಕ್ಷಗಳನ್ನು 2ಜಿ, 3ಜಿ, 4ಜಿ ಪಕ್ಷಗಳು ಎಂದು ವ್ಯಂಗ್ಯವಾಡಿದ್ದಾರೆ.

ನಾನು 2ಜಿ ಬಗ್ಗೆ ಮಾತನಾಡುವುದಿಲ್ಲ. 2ಜಿ ಅಂದರೆ ಎರಡು ತಲೆಮಾರು, 3ಜಿ ಅಂದರೆ ಮೂರು ತಲೆಮಾರು, 4ಜಿ ಅಂದರೆ ನಾಲ್ಕು ತಲೆಮಾರು ಎಂದು ಹೇಳಿ ಕುಟುಕಿದರು.

Share This Article