ಕಾಂಗ್ರೆಸ್ ಅಗ್ನಿಪಥವನ್ನು ರಾಜಕೀಯಮಯ ಮಾಡುತ್ತಿದೆ: ಬಿ.ಸಿ.ಪಾಟೀಲ್

Public TV
1 Min Read

ಹಾವೇರಿ: ಕೊರೊನಾ ಇದ್ದರೂ ಈಗ ಸರ್ಕಾರ ಎಲ್ಲೂ ಕೂಡ ಕಾರ್ಯಕ್ರಮಗಳನ್ನು ನಿಷೇಧ ಮಾಡಿಲ್ಲ. ಕಾರ್ಯಕ್ರಮಗಳು ನಡೆಯುತ್ತಿವೆ. ಕಾಂಗ್ರೆಸ್‍ನವರು ಬಿಜೆಪಿ ಕಾರ್ಯಕ್ರಮಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾರದವರು. ಹೀಗಾಗಿ ಪ್ರತಿದಿನಾ ಏನಾದರೂ ಹೇಳಿತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಕಾಲೇಜುಗಳನ್ನು ಬಂದ್ ಮಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿರುವ ಹೇಳಿಕೆ ತಿರಗೇಟು ನೀಡಿದ್ದಾರೆ. ಆ ರಸ್ತೆಗಳಲ್ಲಿ ಸಂಪೂರ್ಣ ಸಂಚಾರ ಬಂದ್ ಮಾಡಿರುತ್ತೇವೆ. ಸಂಚಾರ ಬಂದ್ ಇದ್ದಾಗ ಯಾರೂ ಓಡಾಡಲು ಆಗುವುದಿಲ್ಲ. ಕಾಲೇಜು ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ. ಮುಂಜಾಗ್ರತಾ ಕ್ರಮವಾಗಿ ಆ ವ್ಯವಸ್ಥೆ ಮಾಡಿದ್ದಾರೆ. ಯಡಿಯೂರಪ್ಪ ಜೊತೆ ಮಾತ್ರ ಹೆಚ್ಚು ಮಾತನಾಡಿದ ಮೋದಿ

ಸಿದ್ದರಾಮಯ್ಯನವರು ಬೆಳಗ್ಗೆಯಿಂದ ಸಂಜೆವರೆಗೆ ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಅಂತಾ ಏನೋ ಹೇಳಿಕೊಂಡು ಹೋಗುತ್ತಾರೆ. ಅವಕ್ಕೆಲ್ಲ ಉತ್ತರ ಕೊಡಬೇಕಾ? ಅಗ್ನಿಪಥವನ್ನು ರಾಜಕೀಯಮಯ ಮಾಡಲಾಗುತ್ತಿದೆ. ಯುವಕರಿಗೆ ನಾಲ್ಕು ವರ್ಷದ ನಂತರ ಇಪ್ಪತ್ತು ಮೂರು ಲಕ್ಷ ರೂಪಾಯಿ ಸಿಗುತ್ತದೆ. ಯುವಶಕ್ತಿಯನ್ನು ದೇಶದ ರಕ್ಷಣೆಗಾಗಿ ಬಳಸಿಕೊಂಡರೆ ತಪ್ಪೇನು? ಇದು ಉತ್ತಮವಾದ ಕೆಲಸ. ಇದನ್ನು ಸಹಿಸಲಾರದೇ ಕಾಂಗ್ರೆಸ್‍ನವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.

ದೇಶ ಕಾಯಬೇಕು, ದೇಶ ರಕ್ಷಣೆ ಮಾಡಬೇಕು. ಮಿಲಿಟರಿಗೆ ಸೇರಬೇಕು ಎನ್ನುವುದು ಯುವಕರ ಉದ್ದೇಶ. ದೇಶ ಕಾಯಬೇಕು ಎಂದು ಹೇಳುವವರು ಯಾರಾದರೂ ಬಸ್ಸಿಗೆ, ಟ್ರೈನ್ ಗೆ ಬೆಂಕಿ ಹಚ್ಚುತ್ತಾರಾ? ಇದೆಲ್ಲ ದುರುದ್ದೇಶದಿಂದ ಕಾಂಗ್ರೆಸ್ ಪಿತೂರಿಯಿಂದ ಈ ಕೆಲಸ ನಡೆಯುತ್ತಿದೆ. ನಾವು ರಿಯಾಯಿತಿ ದರದಲ್ಲಿ ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಕೊಡುತ್ತಿದ್ದೇವೆ. ಪ್ರಮಾಣೀಕೃತವಲ್ಲದ ಬಿತ್ತನೆ ಬೀಜಗಳಿಗೆ ಗ್ಯಾರಂಟಿ ಇರುವುದಿಲ್ಲ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ರೈತರು ಪ್ರಮಾಣೀಕೃತ ಬಿತ್ತನೆ ಬೀಜವನ್ನು ಬಳಕೆ ಮಾಡಬೇಕು ಎಂದು ಹೇಳಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *