ಕಾಶ್ಮೀರದಲ್ಲಿ ನೆಲಬಾಂಬ್ ಸ್ಫೋಟ – ಅಗ್ನಿವೀರ್ ಹುತಾತ್ಮ, ಇಬ್ಬರು ಸೈನಿಕರಿಗೆ ಗಾಯ

Public TV
1 Min Read

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಜಿಲ್ಲೆಯ ನಿಯಂತ್ರಣ ರೇಖೆಯ ಬಳಿ ನೆಲಬಾಂಬ್ ಸ್ಫೋಟಗೊಂಡು ಓರ್ವ ಅಗ್ನಿವೀರ್‌ (Agniveer) ಸಾವನ್ನಪ್ಪಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ಕೃಷ್ಣ ಘಾಟಿಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ, ಸ್ಫೋಟ ಸಂಭವಿಸಿದೆ. ಪರಿಣಾಮ ಅಗ್ನಿವೀರ್‌ ಲಲಿತ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತು ಸ್ಥಿರವಾಗಿದ್ದಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ರದ್ದು, ಒಪಿಎಸ್ ಜಾರಿ: ನಾಸಿರ್ ಹುಸೇನ್

ಕರ್ತವ್ಯದಲ್ಲಿದ್ದಾಗ ಪ್ರಾಣ ತ್ಯಾಗ ಮಾಡಿದ 7 ಜೆಎಟಿ ರೆಜಿಮೆಂಟ್‌ನ ಅಗ್ನಿವೀರ್ ಲಲಿತ್ ಕುಮಾರ್ ಅವರಿಗೆ ಜಿಒಸಿ ವೈಟ್ ನೈಟ್ ಕಾರ್ಪ್ಸ್ ಮತ್ತು ಎಲ್ಲಾ ಶ್ರೇಣಿಗಳು ಗೌರವ ಸಲ್ಲಿಸುತ್ತವೆ. ದುಃಖದ ಈ ಸಮಯದಲ್ಲಿ ನಾವು ಮೃತರ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ವೈಟ್ ನೈಟ್ ಕಾರ್ಪ್ಸ್ ಎಕ್ಸ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಅಗ್ನಿವೀರರಿಗೆ ಪೊಲೀಸ್, ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡಲು ಉತ್ತರಾಖಂಡ ಸರ್ಕಾರ ನಿರ್ಧಾರ: ಸಿಎಂ ಧಾಮಿ

Share This Article