ಯುವಕರಿಗೆ ಸೇನೆಯಲ್ಲಿ ಹೊಸ ಅವಕಾಶ – ಅಗ್ನಿಪಥ್ ನೇಮಕಾತಿ ಯೋಜನೆ ಪ್ರಾರಂಭ

Public TV
2 Min Read

ನವದೆಹಲಿ: ಭಾರತೀಯ ಯುವಕರಿಗೆ ಶಸ್ತ್ರಾಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅಗ್ನಿಪಥ್ ಎಂಬ ಹೊಸ ಅಲ್ಪಾವಧಿಯ ನೇಮಕಾತಿ ಯೋಜನೆಯನ್ನು ಕೇಂದ್ರ ಪ್ರಾರಂಭಿಸಿದೆ.

ಅಗ್ನಿಪಥ್ ಎಂದು ಕರೆಯಲ್ಪಡುವ ಯೋಜನೆ 17.5 ರಿಂದ 21 ವರ್ಷ ವಯಸ್ಸಿನ ಯುವಕರು 4 ವರ್ಷಗಳ ಅವಧಿಗೆ 3 ಸೇವೆಗಳಲ್ಲಿ ಯಾವುದಾದರೂ ಒಂದರಲ್ಲಿ ಸೇರಿಕೊಳ್ಳಬಹುದು. ಈ ಯುವ ಯೋಧರನ್ನು ‘ಅಗ್ನಿವೀರ್’ ಎಂದು ಕರೆಯಲಾಗುತ್ತದೆ. ಈ ಹೊಸ ನೇಮಕಾತಿಯನ್ನು ಕೇಂದ್ರ ಮಂಗಳವಾರ ಅನಾವರಣ ಮಾಡಿದೆ.

ಅಗ್ನಿಪಥ್ ಯೋಜನೆಯನ್ನು ಈ ಹಿಂದೆ ‘ಟೂರ್ ಆಫ್ ಡ್ಯೂಟಿ’ ಎಂದು ಕರೆಯಲಾಗುತ್ತಿತ್ತು. ಇದನ್ನು ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಾರಂಭಿಸಿದ್ದರು. ಕಳೆದ 2 ವರ್ಷಗಳ ವ್ಯಾಪಕ ಚರ್ಚೆಗಳ ಬಳಿಕ ಇದೀಗ ಭದ್ರತಾ ಸಮಿತಿ ಅನುಮತಿ ನೀಡಿದ ಬಳಿಕ ನೇಮಕಾತಿಯನ್ನು ಘೋಷಿಸಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇದೊಂದು ದೊಡ್ಡ ಬದಲಾವಣೆ ತರಲಿದೆ. ರಾಷ್ಟ್ರದ ಯುವ ಜನರಿಗೆ ಅವಕಾಶಗಳನ್ನು ತೆರೆಯುತ್ತದೆ. ಅಗ್ನಿಪಥ್ ಯೋಜನೆ ಭಾರತದ ಭದ್ರತೆಯನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಂದು ಜಯಾ ಜೈಲಿಗೆ, ಇಂದು ಸಂಕಷ್ಟದಲ್ಲಿ ಸೋನಿಯಾ, ರಾಹುಲ್‌ – ಇದು ಸ್ವಾಮಿ ದೂರಿನ ಕರಾಮತ್ತು

ಅರ್ಹತೆ:
17.5 ರಿಂದ 21 ವರ್ಷದೊಳಗಿನ ವಯೋಮಿತಿಯಲ್ಲಿ ಸುಮಾರು 30,000-40,000 ರೂ. ವೇತನದಲ್ಲಿ ಸೈನಿಕರನ್ನು ನೇಮಿಸಿಕೊಳ್ಳಲಾಗುವುದು. ಯುವತಿಯರು ಕೂಡ ನೇಮಕಾತಿ ಯೋಜನೆಗೆ ಅರ್ಹರಾಗಿರುತ್ತಾರೆ.

ಅಗ್ನಿವೀರ್‌ಗಳು ಆಯಾ ವಿಭಾಗಕ್ಕೆ ಅನ್ವಯವಾಗುವಂತೆ ಸಶಸ್ತ್ರ ಪಡೆಗಳಲ್ಲಿ ದಾಖಲಾತಿಗಾಗಿ ನಿಗದಿಪಡಿಸಿದ ವೈದ್ಯಕೀಯ ಅರ್ಹತೆಯ ಷರತ್ತುಗಳನ್ನು ಪೂರೈಸಬೇಕು.

ಅಗ್ನಿಪಥ್ ಅಡಿಯಲ್ಲಿ ನೇಮಕಗೊಂಡ ಸೈನಿಕರನ್ನು 4 ವರ್ಷಗಳ ನಂತರ ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ. ಆದರೂ ಹೊಸ ವ್ಯವಸ್ಥೆಯ ಮತ್ತೊಂದು ಸುತ್ತಿನ ಸ್ಕ್ರೀನಿಂಗ್ ಬಳಿಕ ಅವರಲ್ಲಿ ಸುಮಾರು ಶೇ.25 ರಷ್ಟು ಸೈನಿಕರನ್ನು ಉಳಿಸಿಕೊಳ್ಳುವ ಅವಕಾಶವನ್ನು ಇರುತ್ತದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ ʼಸೂಪರ್‌ ಚೀಫ್‌ ಜಸ್ಟಿಸ್‌ʼನಂತೆ ವರ್ತಿಸುತ್ತಿದ್ದಾರೆ: ಓವೈಸಿ ಟೀಕೆ

ದಾಖಲಾತಿ:
ಅಗ್ನಿವೀರ್‌ಗಳನ್ನು ಮಾನ್ಯತೆ ಪಡೆದ ತಾಂತ್ರಿಕ ಸಸ್ಥೆಗಳಾದ ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟುಗಳಿಂದ ವಿಶೇಷ ರ‍್ಯಾಲಿ ಹಾಗೂ ಸಂದರ್ಶನಗಳ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.

ಸಂಭಾವನೆ ಮತ್ತು ಪ್ರಯೋಜನಗಳು:
ಅಗ್ನಿವೀರ್ ಸೇವೆಯಲ್ಲಿ ಉತ್ತಮ ಮಾಸಿಕ ಪ್ಯಾಕೇಜ್ ನೀಡಲಾಗುತ್ತದೆ. 4 ವರ್ಷಗಳ ನಿಶ್ಚಿತ ಅವಧಿ ಪೂರ್ಣಗೊಂಡ ಬಳಿಕ ಅಗ್ನಿವೀರ್‌ಗಳಿಗೆ ಒಂದು ಬಾರಿಯ ಸೇವಾ ನಿಧಿ ಪ್ಯಾಕೇಜ್ ಪಾವತಿಸಲಾಗುತ್ತದೆ ಎಂದು ಅಧಿಕೃತವಾಗಿ ಹೇಳಿಕೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *