ಪೌರತ್ವ ವಿರೋಧಿ ನಾಟಕದಲ್ಲಿ ಮೋದಿಗೆ ಅವಮಾನ- ಸಂಸ್ಥೆ ಕ್ಷಮೆ

Public TV
1 Min Read

ಬೀದರ್: ಜಿಲ್ಲೆಯ ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಾಷೀಕೋತ್ಸವದಲ್ಲಿ ಪೌರತ್ವ ವಿರೋಧಿ ಮಕ್ಕಳಿಂದ ನಾಟಕ ಮಾಡಿಸಿ ಪ್ರಧಾನಿ ಮೋದಿಗೆ ನಿಂದನೆ ಮಾಡಲಾಗಿತ್ತು.

ಈ ಬಗ್ಗೆ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದಿಂದ ಠಾಣೆಯಲ್ಲಿ ಕೂಡ ದೂರು ದಾಖಲಾಗಿತ್ತು. ಹೀಗಾಗಿ ಸಂಸ್ಥೆ ಕಾರ್ಯದರ್ಶಿ ಎಸ್.ಎಚ್ ಖಾದ್ರಿ ಪತ್ರಿಕಾ ಪ್ರಕಟಣೆ ಮೂಲಕ ಕ್ಷಮೆ ಕೋರಿದ್ದಾರೆ.

ದೇಶದ ಪ್ರಧಾನಿಗೆ ಬಗ್ಗೆ ಗೌರವ, ಅಭಿಮಾನ, ಹೆಮ್ಮೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ವಾಷೀಕೋತ್ಸವದಲ್ಲಿ ಕೆಲ ಪಾಲಕರು ಸ್ವತಃ ತಮ್ಮ ಮಕ್ಕಳನ್ನು ನಾಟಕದ ಸಂಭಾಷಣೆ ಸಿದ್ಧಪಡಿಸಿದ್ದರು. ಅದರಂತೆ ಮಕ್ಕಳು ಆ ದಿನ ಸಂಭಾಷಣೆ ಮಾಡಿದ್ದರಿಂದ ಈ ಪ್ರಮಾದ ಜರುಗಿದೆ. ಆಕಸ್ಮಿಕವಾಗಿ ನಡೆದ ಈ ಪ್ರಮಾದವನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿದ್ದು ಅಗತ್ಯ ಕ್ರಮ ಜರುಗಿಸಲಿದೆ ಎಂದಿದ್ದಾರೆ.

ಜಾತಿ, ಮತಗಳ ಭೇದ ಇಲ್ಲದೆ ಎಲ್ಲಾ ಸಮುದಾಯಗಳಿಗೆ ಸೇರಿದ ಮಕ್ಕಳ ಸಹೋದರತ್ವ ಭಾವನೆಯಿಂದ ಅಭ್ಯಾಸ ಮಾಡುತ್ತಿದ್ದಾರೆ. ಕೋಮು ಸೌಹಾರ್ದತೆಯ ವಾತಾವರಣವನ್ನು ಸಮಾಜದಲ್ಲಿ ಮೂಡಿಸುವಂತ ಸಾಕಷ್ಟು ಕಾರ್ಯಕ್ರಮ ಸಂಸ್ಥೆ 30 ವರ್ಷಗಳಿಂದ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *