ನವವಧು ಕಿಡ್ನಾಪ್ ಕೇಸ್‍ಗೆ ಟ್ವಿಸ್ಟ್- ಆ್ಯಸಿಡ್ ಬೆದರಿಕೆ, ಬಲವಂತದ ಮದುವೆ ಅಂತ ಯುವತಿ ಹೇಳಿಕೆ

Public TV
1 Min Read

ನೆಲಮಂಗಲ: ನವಜೋಡಿಯ ಕಿಡ್ನಾಪ್ ಕಹಾನಿಗೆ ಇದೀಗ ಯುವತಿಯೇ ಟ್ವಿಸ್ಟ್ ಕೊಟ್ಟಿದ್ದಾಳೆ.

ಹೌದು. ಮೇ 25ರಂದು ಜಲಜಾ ಮತ್ತು ಗಂಗಾಧರಯ್ಯ ಮದುವೆ ನಡೆದಿತ್ತು. ಆದರೆ ಮೇ 31ಕ್ಕೆ ತನ್ನ ಹೆಂಡ್ತಿ ಕಿಡ್ನಾಪ್ ಆಗಿದ್ದಾಳೆ ಅಂತಾ ಇದೇ ವರ ಕಣ್ಣೀರಿಟ್ಟಿದ್ರು. ತನ್ನ ಹೆಂಡ್ತಿಯನ್ನು ವಾಪಸ್ ಕೊಡುವಂತೆ ಬೇಡಿಕೊಂಡಿದ್ರು. ಆದರೆ ಈಗ ಈ ಕಿಡ್ನ್ಯಾಪ್ ಕೇಸ್‍ಗೆ ಟ್ವಿಸ್ಟ್ ಸಿಕ್ಕಿದೆ. ಯುವತಿ ಜಲಜಾ ತನ್ನ ಪತಿ ವಿರುದ್ಧವೇ ಆರೋಪಗಳ ಸುರಿಮಳೆಗೈದಿದ್ದಾರೆ.

ಈ ಮ್ಯಾರೇಜ್-ಕಿಡ್ನ್ಯಾಪ್ ಕಹಾನಿ ಈಗ ಠಾಣೆ ಮೆಟ್ಟಿಲೇರಿದೆ. ನೆಲಮಂಗಲ ಡಾಬಸ್ ಪೇಟೆ ಪೊಲೀಸರ ಮುಂದೆ ಜಲಜಾ ಲಿಖಿತ ಹೇಳಿಕೆ ನೀಡಿದ್ದಾರೆ. ನಾನು ಇಷ್ಟಪಟ್ಟು ಮದುವೆ ಆಗಿಲ್ಲ. ಇದು ಬಲವಂತದ ಮದುವೆ. ಆತ ನನ್ನ ಕುಟುಂಬದವರ ಮೇಲೆ ಆ್ಯಸಿಡ್ ಹಾಕ್ತೀನಿ ಅಂದ. ಆ ಬೆದರಿಕೆಗೆ ಗಂಗಾಧರಯ್ಯನ ಮದುವೆ ಆದೆ. ಅಪ್ಪ-ಅಮ್ಮ ಚೆನ್ನಾಗಿರಲಿ ಅಂತ ಅವನ ಜೊತೆಗೆ ಇದ್ದೆ. ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನಾನೇ ಅಪ್ಪ-ಅಣ್ಣನ ಜೊತೆ ಬಂದೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ 2 ಲಕ್ಷ ಉಕ್ರೇನ್ ಮಕ್ಕಳನ್ನು ಅಪಹರಿಸಿದೆ – ಝಲೆನ್ಸ್ಕಿ ಗಂಭೀರ ಆರೋಪ

ಇನ್ನು ಗಂಗಾಧರಯ್ಯ ಕೂಡ ಡಾಬಸ್‍ಪೇಟೆ ಪೊಲೀಸ್ ಠಾಣೆ ಮುಂದೆ ಕಣ್ಣೀರಿಡುತ್ತಾ ಬಂದಿದ್ದಾರೆ. ಆಕೆ ಇಷ್ಟಪಟ್ಟಿದ್ದಕ್ಕೆ ಮದುವೆಯಾದೆ. ನಾನು ಅವರ ಕುಟುಂಬಕ್ಕೆ ಯಾವುದೇ ಬೆದರಿಕೆ ಹಾಕಿಲ್ಲ. ನನಗೆ ಬೇರೆ ಯಾರ ಜೊತೆಗೆ ಸಂಬಂಧ ಇಲ್ಲ. ಇದ್ರೆ ಬಹಿರಂಗ ಪಡಿಸಲಿ ಅಂತಾ ಸವಾಲ್ ಹಾಕಿದ್ದಾರೆ. ಒಟ್ಟಾರೆ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದ್ದು ಪೋಷಕರು ತಲೆತಗ್ಗಿಸುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *