ರಾಕಿ-ಅಕ್ಷತಾ ನಡುವೆ ಜ್ವಾಲಾಮುಖಿ ಸ್ಫೋಟ

Public TV
2 Min Read

-ಹೋಗಲೋ ನಿನ್ನನ್ನ ಯಾರ್ ಮಾತಾಡಾಸ್ತಾರೆ: ಅಕ್ಷತಾ
-ಅಯ್ಯೋ ಇದೇನಾಯ್ತು? ಇತರೆ ಸ್ಪರ್ಧಿಗಳೆಲ್ಲಾ ಕನ್ಫ್ಯೂಸ್

ಬೆಂಗಳೂರು: ಬಿಗ್ ಬಾಸ್ 6ನೇ ಆವೃತ್ತಿಯ ಪ್ರೇಮ ಜೋಡಿಗಳೆಂದು ಗುರುತಿಸಿಕೊಂಡಿರುವ ಅಕ್ಷತಾ ಮತ್ತು ರಾಕೇಶ್ ನಡುವೆ ಮಹಾಯುದ್ಧವೇ ನಡೆದಿದೆ. ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಅಕ್ಷತಾ ಮತ್ತು ರಾಕೇಶ್ ನಡುವೆ ದೊಡ್ಡ ಜಗಳವೇ ನಡೆದಿದೆ.

ಈ ವಾರದ ಕ್ಯಾಪ್ಟನ್ ಆಗಿ ರಾಕೇಶ್ ಆಯ್ಕೆಯಾಗಿದ್ದರು. ನಾಮಿನೇಷನ್ ವೇಳೆ ಬಿಗ್‍ಬಾಸ್ ರಾಕೇಶ್ ಗೆ ವಿಶೇಷ ಅಧಿಕಾರ ನೀಡಿತ್ತು. ಅಕ್ಷತಾರನ್ನು ಉಳಿಸದೇ ಮುರುಳಿ ಅವರನ್ನು ರಾಕೇಶ್ ಸೇವ್ ಮಾಡಿದ್ದರು. ಇದರಿಂದ ಸಹಜವಾಗಿಯೇ ಅಕ್ಷತಾ ಜೋರಾಗಿ ಕೂಗಿ ಕಣ್ಣೀರು ಹಾಕಿದ್ದರು. ಕಳೆದ ಎರಡು ದಿನಗಳಿಂದ ಆರಂಭದ ದಿನಗಳಿಂದಲೂ ಅಕ್ಷತಾ ಅಡುಗೆ ಮನೆಯಲ್ಲಿ ಕೆಲಸ ಮಾಡ್ತಿದ್ದಾಳೆ. ಹಾಗಾಗಿ ಬೇರೆಯವರು ಅಡುಗೆ ಮಾಡಿ ಎಂದು ರಾಕೇಶ್ ಆದೇಶಿಸಿದ್ದರು. ಈ ವೇಳೆ ರಾಕೇಶ್, ಇದು ನನ್ನ ನಿರ್ಣಯ ಅಲ್ಲ, ಮನೆಯ ಇತರೆ ಸದಸ್ಯರ ಮನವಿಯ ಮೇರೆಗೆ ಅಡುಗೆ ಬೇರೆಯವರ ಮಾಡಲಿ ಎಂದು ಹೇಳ್ತಿದ್ದೇನೆ ಎಂದರು.

ಇಷ್ಟಕ್ಕೆ ಸುಮ್ಮನಾಗದ ಅಕ್ಷತಾ ಎಲ್ಲರ ಬಳಿಯೂ ಹೋಗಿ, ನಾನು ಅಡುಗೆ ಯಾರು ಮಾಡಬಾರದೆಂದು ಎಂದು ಪ್ರಶ್ನೆ ಮಾಡಿದರು. ಈ ವೇಳೆ ಎಲ್ಲರೂ ನಾವು ಹೇಳಿಲ್ಲ, ನಿಮ್ಮ ಅಡುಗೆಯೇ ನಮಗಿಷ್ಟ ಅಂತಾ ಉತ್ತರ ನೀಡಿದ್ದಾರೆ. ಎಲ್ಲರ ಬಳಿ ಸ್ಪಷ್ಟನೆ ಪಡೆದುಕೊಂಡ ಅಕ್ಷತಾ, ನಾನು ಅಡುಗೆ ಮಾಡಬಾರದೆಂದು ಹೇಳಿದ್ಯಾರು ಎಂದು ರಾಕೇಶ್ ನನ್ನು ಪ್ರಶ್ನಿಸಿದರು. ನಾನು ಹೆಸರು ಹೇಳಲ್ಲ ಎಂದು ರಾಕೇಶ್ ವಾದಿಸಿದರು.

ಹೀಗೆ ಇಬ್ಬರ ಮಾತುಕತೆ ಕೆಲ ಸಮಯ ನಡೆಯಿತು. ಕೊನೆಗೆ ನೀವು ನನ್ನನ್ನು ಬಿಟ್ಟುಬಿಡಿ. ನಿಮ್ಮಿಂದ ಹೊರಗಡೆ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ಅನುಮಾನ ಬರುತ್ತಿದೆ. ಈಗಾಗಲೇ ನಮ್ಮಿಬ್ಬರ ಸಂಬಂಧದ ಬಗ್ಗೆ ನಿಮ್ಮ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ನನ್ನೊಂದಿಗೆ ಪದೇ ಪದೇ ಮಾತನಾಡಬೇಡಿ ಎಂದು ರಾಕೇಶ್ ಮನವಿ ಮಾಡಿಕೊಂಡರು.

ರಾಕೇಶ್ ಮನವಿಗೆ ಪ್ರತಿಕ್ರಿಯಿಸಿದ ಅಕ್ಷತಾ, ನನಗೆ ನಿಮ್ಮಿಂದ ಪರ್ಸನಲ್ ಡ್ಯಾಮೇಜ್ ಆಗ್ತಿದೆಯೇ ಹೊರತು ನಿಮಗೆ ಅಲ್ಲ. ಮೊದಲಿನಿಂದಲೂ ಬಿಗ್ ಬಾಸ್ ಮನೆಯ ಹೊರಗೆ ಒಳ್ಳೆಯ ಫ್ರೆಂಡ್ಸ್ ಎಂದು ಹೇಳಿದ್ದೇನೆ. ಕೂಡಲೇ ರಾಕೇಶ್ ನಾವಿಬ್ಬರು ಫ್ರೆಂಡ್ಸ್ ಅಲ್ಲ ಎಂದು ಜೋರಾಗಿ ಹೇಳಿದರು. ಕೋಪಗೊಂಡ ಅಕ್ಷತಾ, ಹೋಗಲೋ ನಿನ್ನನ್ನು ಯಾರ್ ಮಾತಾಡಾಸ್ತಾರೆ ಎಂದು ಗಾರ್ಡನ್ ಏರಿಯಾದಿಂದ ಮನೆಯೊಳಗೆ ಹೋದ್ರು.

ಮನೆಯಲ್ಲಿದ್ದ ಇತರೆ ಸದಸ್ಯರು ಮೂಕವಿಸ್ಮಿತರಾಗಿ ಎಲ್ಲವನ್ನು ನೋಡಿ ಒಂದು ಕ್ಷಣ ಶಾಕ್ ಆದಂತೆ ತಬ್ಬಿಬಾದರು. ಅದ್ರೆ ಯಾವ ಸದಸ್ಯರು ಇಬ್ಬರನ್ನು ರಾಜಿ ಮಾಡಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಮುರುಳಿ ಅವರನ್ನು ಸೇವ್ ಮಾಡಿದಾಗಲೂ ಇಬ್ಬರು ಇದೇ ರೀತಿ ಜಗಳ ಮಾಡಿಕೊಂಡು ದಿನವಿಡೀ ಕಿಡಿಕಾರಿ, ಮನೆಯ ಲೈಟ್ ಆಫ್ ಆಗ್ತಿದ್ದಂತೆ ಅಕ್ಷತಾ ಮತ್ತು ರಾಕೇಶ್ ತಮ್ಮ ಮಾತುಗಳನ್ನು ಆರಂಭಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *