ಸಿಗರೇಟ್ ಸೇದುತ್ತಾ ವಿಲನ್ ಲುಕ್‌ನಲ್ಲಿ ಫೋಟೋ ಶೂಟ್ – ಮತ್ತೆ ರಜತ್‌ ವಿವಾದ

1 Min Read

ಮೈಸೂರು: ಸಾರ್ವಜನಿಕವಾಗಿ ಮಚ್ಚು ಹಿಡಿದು ರಿಲ್ಸ್ ಮಾಡಿ ಜೈಲಿಗೆ ಹೋಗಿ ಬಂದಿದ್ದ ಬಿಗ್ ಬಾಸ್‌ ಸ್ಪರ್ಧಿ ರಜತ್‌ (Rajat) ಈಗ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ.

ಮೈಸೂರಿನ (Mysuru) ಪಾರಂಪರಿಕ ಕಟ್ಟಡವಾದ ಹಳೇ ಜಿಲ್ಲಾಧಿಕಾರಿ ಕಚೇರಿ (Old DC Office) ಬಳಿ ಸಿಗರೇಟ್ ಸೇದುತ್ತಾ ಫೋಟೋಶೂಟ್ (Photo Shoot) ಮಾಡಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

 

View this post on Instagram

 

A post shared by Rajath kishan G (@bujjjjii)

ವಿಲನ್‌ ಲುಕ್‌ನಲ್ಲಿ ಸಿಗರೇಟ್ ಸೇದುತ್ತಾ ಕಾರಿನಿಂದ ಇಳಿಯುವ ಫೋಟೋ ಶೂಟ್ ವಿಡಿಯೋವನ್ನು ಇನ್‌ಸ್ಟಾದಲ್ಲಿ ಅಪ್ಲೋಡ್‌ ಮಾಡಲಾಗಿದೆ. ಇದನ್ನೂ ಓದಿ: Viral | 71 ವರ್ಷದ ʻಮಿಸ್ಟರ್ ಬೀನ್ʼ ಜೊತೆ 32 ರ ಮಿಯಾ ಖಲೀಫಾ ಡೇಟಿಂಗ್‌?

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು ನಿಷೇಧವಾಗಿದ್ದರೂ ರೀಲ್ಸ್ ಮಾಡಿ ಫೋಟೋ ಶೂಟ್ ಮಾಡಿಸಿದ್ದಕ್ಕೆ ನೆಟ್ಟಿಗರು ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಮಚ್ಚು ಹಿಡಿದು ಫೋಟೊಶೂಟ್ ಮಾಡಿಸಿಕೊಂಡು ರಜತ್‌ ಜೈಲಿಗೆ ಹೋಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
Share This Article