ದುನಿಯಾ ವಿಜಿಗೆ ಇನ್ನೂ 2 ದಿನ ಜೈಲು!

Public TV
3 Min Read

ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ದುನಿಯಾ ವಿಜಯ್ ಅವರು ಇನ್ನೂ 2 ದಿನಗಳ ಕಾಲ ಜೈಲಿನಲ್ಲೇ ಇರಲಿದ್ದಾರೆ.

ಜೈಲಿನಲ್ಲಿರುವ ವಿಜಯ್ ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಜಾಮೀನಿಗಾಗಿ ವಿಜಿ ಸೆಷನ್ಸ್ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಅಕ್ಟೋಬರ್ 1ಕ್ಕೆ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.

ವಿಜಿ ಪರ ವಕೀಲರ ವಾದವೇನು?:
ಐಪಿಸಿ ಸೆಕ್ಷನ್ ಕಲಂ 326 ಹೊರತುಪಡಿಸಿ ಉಳಿದ ಪ್ರಕರಣಗಳು ಜಾಮೀನಿಗೆ ಅರ್ಹವಾದದ್ದಾಗಿದೆ. ಇಲ್ಲಿ ಉದ್ದೇಶಪೂರ್ವಕವಾಗಿ ಐಪಿಸಿ ಸೆಕ್ಷನ್ 326 ಸೆಕ್ಷನ್ ಸೇರಿಸಲಾಗಿದೆ. ಆದ್ರೆ ದೂರಿನಲ್ಲಾಗಲಿ, ಎಫ್‍ಐಆರ್ ನಲ್ಲಾಗಲಿ ಮಾರಕಾಸ್ತ್ರದ ಬಗ್ಗೆ ಪ್ರಸ್ತಾಪವಿಲ್ಲ. ಕೈನಿಂದ ಹಲ್ಲೆ ಎಂದು ಮಾತ್ರ ಆರೋಪಿಸಲಾಗಿತ್ತು. ಈ ಬಗ್ಗೆ ನೀಡಿದ ಮೊದಲ ಹೇಳಿಕೆಯಲ್ಲೂ ಇದರ ಪ್ರಸ್ತಾಪವಿಲ್ಲ. ನಾಲ್ಕು ಗಂಟೆಗಳ ಅವಧಿಯಲ್ಲಿ 2 ನೇ ಹೇಳಿಕೆ ಪಡೆದು ಸೆಕ್ಷನ್ 326 ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಮಾರುತಿ ಗೌಡ ಆರೋಗ್ಯ ಸುಧಾರಿಸಿದೆ. ನಿನ್ನೆ ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಆಗಿದ್ದಾರೆ. ಇದೊಂದು ಸಾಮಾನ್ಯ ಪ್ರಕರಣವಾಗಿದೆ. ಹೀಗಾಗಿ ವಿಜಿಗೆ ಜಾಮೀನು ನೀಡಿ ಅಂತ ದುನಿಯಾ ವಿಜಿ ಪರ ವಕೀಲ ಆರ್. ಶ್ರೀನಿವಾಸ್ ವಾದ ಮಾಡಿದ್ದಾರೆ.


ಸರ್ಕಾರಿ ವಕೀಲರ ವಾದವೇನು?:
ದುನಿಯಾ ವಿಜಿ ಮನುಷ್ಯನೇ ಅಲ್ಲ. ಈತ ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ವಿಜಿಗೆ ಜಾಮೀನು ನೀಡಬೇಡಿ ಅಂತ ಸರ್ಕಾರಿ ಪರ ವಕೀಲರು ಪ್ರತಿವಾದ ಮಾಡಿದ್ದಾರೆ.

ಹೀಗಾಗಿ ಎರಡೂ ತಂಡಗಳ ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಅದೇಶವನ್ನು ಅಕ್ಟೋಬರ್ 1ಕ್ಕೆ ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ದುನಿಯಾ ವಿಜಿ ಅವರು ಇನ್ನೂ 2 ದಿನಗಳ ಕಾಲ ಜೈಲಿನಲ್ಲಿರಲಿದ್ದಾರೆ.

ಜಾಮೀನು ನೀಡದಂತೆ ಹೈಗ್ರೌಂಡ್ಸ್ ಪೊಲೀಸರು ಕೂಡ ಆಕ್ಷೇಪಣೆ ಸಲ್ಲಿಸಿದ್ದರು. ಈ ಆಕ್ಷೇಪಣೆಗಳೇನು?:
* ಆರೋಪಿಗಳು ಗಾಂಜಾ ಸೇವಿಸಿದ್ದಾರೆ ಎಂಬ ಮಾಹಿತಿ ಇದೆ
* ರಕ್ತ ಮಾದರಿ ಕೊಡಲಾಗ್ತಾ ಇದೆ, ಈಗಲೇ ಜಾಮೀನು ಮಂಜೂರು ಮಾಡಬೇಡಿ.
* ಆರೋಪಿ ಪದೇ ಪದೇ ಇದೇ ರೀತಿಯ ಗಲಾಟೆ ಮಾಡ್ತಾನೆ
* ಇದೇ ರೀತಿಯ ಗಲಾಟೆಯನ್ನು ಮಾಡಿ ಮೂರು ಬಾರಿ ಸ್ಟೇಷನ್ ಬೇಲ್ ಪಡೆದಿದ್ದಾರೆ
* ಈ ಬಾರಿಯೂ ಜಾಮೀನು ಸಿಕ್ಕಿದ್ದರೆ ಕಾನೂನು ಮೇಲಿನ ಭಯ ಹೋಗುತ್ತೆ
* ಪ್ರಭಾವಿ ವ್ಯಕ್ತಿ ಆಗಿರೋದ್ರಿಂದ ಸಾಕ್ಷಿ ನಾಶ ಮಾಡ್ತಾನೆ
* ಪೊಲೀಸ್ ಠಾಣೆಯ ಮುಂದೆಯೇ ದೊಡ್ಡ ಗಲಾಟೆ ಮಾಡಿದ್ದಾನೆ.

ಮಾರುತಿ ಗೌಡ ಡಿಸ್ಚಾರ್ಜ್:
ದುನಿಯಾ ವಿಜಿಗೆ ಜಾಮೀನು ಸಿಗುವ ಸಾಧ್ಯತೆಗಳಿವೆ. ಯಾಕಂದ್ರೆ ಹಲ್ಲೆಗಳೊಳಗಾಗಿದ್ದ ಮಾರುತಿ ಗೌಡ ಶುಕ್ರವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಟ ದುನಿಯಾ ವಿಜಿ ಹಲ್ಲೆಯಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಮಾರುತಿ ಗೌಡ ದಾಖಲಾಗಿದ್ದರು. ಆರು ದಿನಗಳ ಬಳಿಕ ನಿನ್ನೆ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ. ಮಾರುತಿ ಗೌಡ ತುಟಿಗೆ ಗಾಯವಾಗಿ, ಕಣ್ಣು ಮತ್ತು ಮುಖ ಊತ ಬಂದಿತ್ತು. ಹೀಗಾಗಿ ಆರು ದಿನಗಳ ಕಾಲ ಚಿಕಿತ್ಸೆ ನೀಡಿ ತುಟಿಗೆ ಹದಿನೈದು ಹೊಲಿಗೆ ಹಾಕಲಾಗಿತ್ತು. ಸದ್ಯಕ್ಕೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

ಏನಿದು ಪ್ರಕರಣ?:
ಕಳೆದ ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಸ್ಪರ್ಧೆ ನೋಡಲು ದುನಿಯಾ ವಿಜಿ ತಮ್ಮ ತಂಡದೊಂದಿಗೆ ಬಂದಿದ್ದರು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿ ಗೌಡರ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=YjxBslBdbNU

Share This Article
Leave a Comment

Leave a Reply

Your email address will not be published. Required fields are marked *