ಹೆಂಡತಿ ಬಾರದಿದ್ದಕ್ಕೆ ಅಪ್ರಾಪ್ತ ನಾದಿನಿಯೊಂದಿಗೆ ಪರಾರಿಯಾಗಿದ್ದ 4 ಮಕ್ಕಳ ತಂದೆ

Public TV
1 Min Read

ಪಾಟ್ನಾ: ತವರು ಮನೆಯಿಂದ ಪತ್ನಿಯನ್ನು ಕರೆದುಕೊಂಡು ಬರಲು ಹೋಗಿದ್ದ ವ್ಯಕ್ತಿಯೊಬ್ಬ, ತನ್ನ ಹೆಂಡತಿ ಮನೆಗೆ ಬರಲು ನಿರಾಕರಿಸಿದ ನಂತರ ವ್ಯಕ್ತಿ ತನ್ನ ನಾದಿನಿಯೊಂದಿಗೆ ಪರಾರಿಯಾಗಿರುವ ಘಟನೆ ಬಿಹಾರದ ಛಪ್ರಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

Child Marriage Bride

ಕೃಷ್ಣರಾಮ್ ಎಂಬ ವ್ಯಕ್ತಿ ತನ್ನ ಹೆಂಡತಿ ಸಂಕಾಂತಿ ದೇವಿಯನ್ನು ಮರಳಿ ಕರೆತರಲು ಅತ್ತೆಯ ಮನೆಗೆ ಹೋಗಿದ್ದಾಗ, ಆಕೆ ಅವನೊಂದಿಗೆ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೃಷ್ಣರಾಮ್ ತನ್ನ ಅಪ್ರಾಪ್ತ ನಾದಿನಿಯನ್ನು ಪುಸಲಾಯಿಸಿ, ಸುಳ್ಳು ಭರವಸೆ ನೀಡಿ ಆಕೆಯೊಂದಿಗೆ ಓಡಿ ಹೋಗಿದ್ದಾನೆ. ಇದನ್ನೂ ಓದಿ: ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಪುರುಷರನ್ನು ಕರೆತರುವೆ: ರೇಪ್‌ಗೂ ಮುನ್ನ ರಷ್ಯಾ ಸೈನಿಕನ ಮಾತು

Child Marriage Bride

ಪೋಷಕರಿಗೆ ಕಾದಿತ್ತು ಶಾಕ್: ತನ್ನ ಮಗಳನ್ನು ಅಪಹರಿಸಿದ್ದಕ್ಕಾಗಿ ಹುಡುಗಿಯ ತಂದೆ ತಕ್ಷಣವೇ ಕೃಷ್ಣರಾಮ್ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ, ವಿಷಯ ಮಹಿಳಾ ಸಹಾಯವಾಣಿಗೆ ತಲುಪಿದಾಗ, ಅಪ್ರಾಪ್ತ ಹುಡುಗಿ ಸ್ವಂತ ಕುಟುಂಬದ ವಿರುದ್ಧವೇ ಬಾಲ್ಯ ವಿವಾಹದ ಆರೋಪ ಮಾಡಿರುವುದು ಕಂಡುಬಂದಿದೆ. ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ ನಂತರವೇ ಸತ್ಯಾಂಶ ತಿಳಿದು ಬಂದಿದೆ. ಅಲ್ಲದೆ, ರಾಮ್ ಅಪ್ರಾಪ್ತ ಹುಡುಗಿಯನ್ನು ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಕರೆದೊಯ್ದು ಅಲ್ಲಿ ಕುಟುಂಬದ ವಿರುದ್ಧವೇ ಸುಳ್ಳು ದೂರು ದಾಖಲಿಸುವಂತೆ ಮಾಡಿದ್ದಾನೆ ಎನ್ನುವುದೂ ಗೊತ್ತಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ವಿವಾಹ ಸಮಾರಂಭದಲ್ಲಿ ಹಾವಿನೊಂದಿಗೇ ನೃತ್ಯ – ಮುಂದೇನಾಯ್ತು ಗೊತ್ತಾ?

CRIME 2

ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ರಾಮ್ ನನ್ನು ಬಂಧಿಸಿದ್ದಾರೆ. ಆರೋಪಿ ರಾಮ್‌ಗೆ ಕಳೆದ 12 ವರ್ಷಗಳಿಂದ ಸಂಕಾಂತಿ ದೇವಿ ಅವರೊಂದಿಗೆ ಸಂಸಾರ ನಡೆಸುತ್ತಿದ್ದ. ಈತನಿಗೆ 4 ಮಕ್ಕಳಿದ್ದಾರೆ. ಈತನಿಂದ ತೊಂದರೆಗೀಡಾದ ದೇವಿ ಮತ್ತೆ ತನ್ನ ತಂದೆ ತಾಯಿಯ ಮನೆಗೆ ಹೋಗಿದ್ದಳು ಎನ್ನಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *