ಜಗತ್ತಿಗೆ ಭಿಕ್ಷುಕರ ರಫ್ತಿನಲ್ಲಿ ಪಾಕಿಸ್ತಾನವೇ ಫಸ್ಟ್ – ಜೇಬುಗಳ್ಳರ ಸಂಖ್ಯೆಯಲ್ಲೂ ಪಾಕಿಸ್ತಾನಿಯರೇ ಹೆಚ್ಚು

Public TV
1 Min Read

ಇಸ್ಲಾಮಾಬಾದ್: ಜಗತ್ತಿನ ಹಲವು ದೇಶಗಳಿಗೆ ಭಿಕ್ಷುಕರನ್ನು ರಫ್ತು ಮಾಡುವ ವಿಚಾರದಲ್ಲಿ ಪಾಕಿಸ್ತಾನ (Pakistan) ಮುಂದಿದೆ. ವಿದೇಶಗಳಲ್ಲಿ ಬಂಧನಕ್ಕೊಳಗಾದ ಭಿಕ್ಷುಕರ ಪೈಕಿ 90% ಮಂದಿ ಪಾಕಿಸ್ತಾನಿಯರೇ ಆಗಿದ್ದಾರೆ.

ಪ್ರಾರ್ಥನಾ ಸ್ಥಳಗಳಲ್ಲಿ ಜೇಬುಗಳ್ಳತನ ಮಾಡುವವರಲ್ಲಿ ಅತ್ಯಧಿಕ ಮಂದಿ ಪಾಕಿಸ್ತಾನಿಗಳಾಗಿದ್ದಾರೆ. ಈ ವಿಚಾರವನ್ನು ಖುದ್ದು ಪಾಕ್ ಸರ್ಕಾರ ಒಪ್ಪಿಕೊಂಡಿದೆ. ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿಯರ ಸಂಬಂಧ ಪಾಕಿಸ್ತಾನದ ಸಂಸದೀಯ ಸಮಿತಿ ಚರ್ಚೆ ನಡೆಸಿದೆ. ಈ ವೇಳೆ, ಪಾಕಿಸ್ತಾನದಿಂದ ಭಾರಿ ಸಂಖ್ಯೆಯ ಭಿಕ್ಷುಕರು ವಿದೇಶಗಳಿಗೆ ತೆರಳ್ತಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಲೂಚಿಸ್ತಾನದ ಮಸೀದಿ ಬಳಿ ಭಾರೀ ಸ್ಫೋಟ – 52 ಜನ ದುರ್ಮರಣ

ವಿದೇಶಗಳಲ್ಲಿ ಅರೆಸ್ಟ್ ಆಗಿರುವ ಭಿಕ್ಷುಕರ ಪೈಕಿ 90% ರಷ್ಟು ನಮ್ಮ ದೇಶದವರೇ ಆಗಿದ್ದಾರೆ. ಇವರಲ್ಲಿ ಹೆಚ್ಚು ಮಂದಿ ಸೌದಿ ಅರೇಬಿಯಾ, ಇರಾನ್, ಇರಾಕ್‌ಗೆ ತೆರಳಲು ಯಾತ್ರೆ ವೀಸಾ ಬಳಸಿಕೊಂಡಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ಜೇಬುಗಳ್ಳತನ ಮಾಡುತ್ತಿರುವವರ ಪೈಕಿ ಹೆಚ್ಚಿನವರು ಪಾಕಿಸ್ತಾನಿಯರು ಇದ್ದಾರೆ ಎಂದು ತಿಳಿಸಿದ್ದಾರೆ.

ಪಾಕ್ ಜೇಬುಗಳ್ಳರು ಇದೀಗ ಜಪಾನ್ ದೇಶದತ್ತ ಚಿತ್ತ ಹರಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಜುಲ್ಫಿಕರ್ ಹೈದರ್ ವಿವರಿಸಿದ್ದಾರೆ. ಮೆಕ್ಕಾದ ಗ್ರ‍್ಯಾಂಡ್ ಮಸೀದಿಯೊಳಗೆ ಜೇಬುಗಳ್ಳತನ ಮಾಡಿ ಬಂಧನಕ್ಕೊಳಗಾದವರಲ್ಲಿ ಹೆಚ್ಚಿನವರು ಪಾಕಿಸ್ತಾನಿಯರೇ ಇದ್ದಾರೆ. ಇದನ್ನೂ ಓದಿ: ಟಿವಿ ಸ್ಟುಡಿಯೋದಲ್ಲೇ ಹೊಡೆದಾಡಿಕೊಂಡ ರಾಜಕಾರಣಿಗಳು

ಪಾಕಿಸ್ತಾನದಲ್ಲಿ ಹಣದುಬ್ಬರ, ಗಗನಕ್ಕೇರುತ್ತಿರುವ ಆಹಾರ ಮತ್ತು ಇಂಧನ ಬೆಲೆಗಳಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಪಾಕಿಸ್ತಾನದಿಂದ ಭಿಕ್ಷುಕರು (Pak Beggars) ಹೆಚ್ಚಿನ ಸಂಖ್ಯೆಯಲ್ಲಿ ಪಶ್ಚಿಮ ಏಷ್ಯಾದ ದೇಶಗಳಿಗೆ ಹೋಗುತ್ತಿದ್ದಾರೆ. ಸಾಗರೋತ್ತರ ಪಾಕಿಸ್ತಾನಿಗಳ ಸ್ಥಾಯಿ ಸಮಿತಿ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್