ಉದ್ಯೋಗಿಯೊಬ್ಬರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಕಂಪನಿಯ ಮುಖ್ಯಸ್ಥರಿಗೆ ಬರೆದಿರುವ ಮೂರು ಪದಗಳ ರಾಜೀನಾಮೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ರಾಜೀನಾಮೆ ಪತ್ರದ ಸ್ಕ್ರೀನ್ ಶಾಟ್‍ಗಳನ್ನು ತಮ್ಮ ಖಾತೆಗಳಲ್ಲಿ ಹಾಕಿಕೊಂಡು ಕಾಮೆಂಟ್ ಮಾಡುತ್ತಿದ್ದಾರೆ. ಈ ರಾಜೀನಾಮೆ ಪತ್ರದಲ್ಲಿ ಮೊದಲು ಡಿಯರ್ ಸರ್ ಎಂದು ಆರಂಭವಾಗಿ ನಂತರ ವಿಷಯ ರಾಜೀನಾಮೆ ಪತ್ರ ಬಾಯ್ ಬಾಯ್ ಸರ್ ನಿಮ್ಮ ವಿಶ್ವಾಸಿ ಎಂದು ಬರೆದುಕೊಂಡು ಸಹಿ ಹಾಕಿರುವುದು ಕಂಡು ಬಂದಿದೆ. ಇದನ್ನೂ ಓದಿ: ದಂತ ವೈದ್ಯರ ಎಡವಟ್ಟು – ಚಿಕಿತ್ಸೆ ಪಡೆದ ನಟಿಯ ಮುಖ ಸಂಪೂರ್ಣ ಚೇಂಚ್
Tata Bye Bye
खतमBest #Resignation letter I have ever found.
???? pic.twitter.com/1eVlbfs2Zj— CHANKYA_NITI ????( parody) (@Chankya_Nit) June 17, 2022
ಇದೀಗ ನೆಟ್ಟಿಗರು ಮೂರು ಪದಗಳಲ್ಲಿ ರಾಜೀನಾಮೆ ಪತ್ರ ನೋಡಿ ಖುಷಿ ಪಡುತ್ತಿದ್ದಾರೆ. ಕೆಲವರು ಬಾಯ್ ಬಾಯ್ ಸರ್ ಕೇವಲ ಮೂರು ಪದಗಳ ಮೂಲಕ ರಾಜೀನಾಮೆ ಸಲ್ಲಿಸಬಹುದು ಎಂಬುದನ್ನು ಕಲಿತಂತಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲ ಉದ್ಯೋಗಿಗಳು ತಾವು ಈ ಹಿಂದೆ ಈ ರೀತಿ ಹಲವು ಕಾರ್ಯಗಳನ್ನು ಮಾಡಿದ್ದೇವೆ ಎಂದು ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರು ತೊರೆದ ಪುನೀತ್ ರಾಜ್ ಕುಮಾರ್ ಗನ್ ಮ್ಯಾನ್ ಚಲಪತಿ