ಮಗನ ಸಾವಿನಿಂದ ಮನನೊಂದು 500ಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಿದ್ರು!

Public TV
1 Min Read

ಮುಂಬೈ: ಮೂರು ವರ್ಷದ ಹಿಂದೆ ತನ್ನ 16 ವರ್ಷದ ಮಗ ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟಿರುವುದರಿಂದಾಗಿ ಆತನ ಸ್ಮರಣಾರ್ಥವಾಗಿ ಮುಂಬೈನ ವ್ಯಕ್ತಿಯೊಬ್ಬರು ಸುಮಾರು 556 ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ.

ಮುಂಬೈ ನಿವಾಸಿ ದಾದಾರಾವ್ ಬಿಲ್ಹೊರೆ ಮಗ ಪ್ರಕಾಶ್ 2015ರ ಜುಲೈ 28ರಂದು ಬೈಕ್ ಸಮೇತ ಆಳವಾದ ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟಿದ್ದನು. ಈ ಘಟನೆ ಮುಂಬೈನ ಜೋಗೇಶ್ವರಿ ವಿಖ್ರೋಲಿ ಲಿಂಕ್ ರೋಡ್(ಜೆವಿಎಲಾರ್)ನಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರಕಾಶ್ ತಂದೆ, ನನ್ನ ಮಗನಿಗಾದ ಸ್ಥಿತಿ ಯಾರಿಗೂ ಬರಬಾರದು. ಹೀಗಾಗಿ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದೆಂದು ಭಾನುವಾರ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ.

ನನ್ನ ಮಗನಂತೆ ಯಾರೂ ತಮ್ಮ ಜೀವ ಕಳೆದುಕೊಳ್ಳಬಾರದು. ಜನ ಇನ್ನು ಮುಂದೆ ಇಂತಹ ಸಮಸ್ಯೆಗಳನ್ನು ಎದುರಿಸಬಾರದು. ಹೀಗಾಗಿ ರಸ್ತೆ ಗುಂಡಿ ಮುಕ್ತ ಭಾರತವಾಗುವವರೆಗೆ ನಾನು ಈ ಕೆಲಸ ಮಾಡುತ್ತೇನೆ. ಹೆಚ್ಚು ಜನಸಂಖ್ಯೆ ಇರುವ ದೇಶ ನಮ್ಮದಾಗಿದೆ. ಹೀಗಾಗಿ ಇದರಲ್ಲಿ ಒಂದು ಲಕ್ಷ ಜನ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ರೆ, ನಮ್ಮದು ರಸ್ತೆ ಗುಂಡಿ ಮುಕ್ತ ದೇಶವಾಗುದ್ರಲ್ಲಿ ಯಾವುದೇ ಸಂಶಯವಿಲ್ಲ ಅಂತ ಬಿಲ್ಹೋರೆ ತಿಳಿಸಿದ್ದಾರೆ.

ಬಿಲ್ಹೊರೆಯವರು ಹೇಳಿದಂತೆ ಎಲ್ಲರೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಗಳನ್ನು ಮಾಡಿದ್ರೆ ದೇಶದಲ್ಲಿ ಈ ಸಮಸ್ಯೆಯಿಂದ ಆದಷ್ಟು ಬೇಗ ಮುಕ್ತರಾಗಬಹುದು ಅಂತ ಬ್ರಿಹನ್ ಮುಂಬೈ ಮುನ್ಸಿಪಲ್ ಕಾಪೋರೇಶನ್(ಬಿಎಂಸಿ) ತಿಳಿಸಿದೆ.

ಈ ಮಾನ್ಸೂನ್ ಸಮಯದಲ್ಲಿ ಇಡೀ ಮುಂಬೈನಲ್ಲಿ ಸುಮಾರು 6 ಮಂದಿ ರಸ್ತೆ ಗುಂಡಿಗೆ ಬಿದ್ದು ಜೀವ ಕಳೆದುಕೊಂಡಿದ್ದಾರೆ. ವರ್ಷದ ಮೊದಲು ರಾಜ್ಯದಲ್ಲಿ ರಸ್ತೆ ಗುಂಡಿಗಳ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆಯವರು ಪ್ರತಿಭಟನೆ ಕೂಡ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *