ಖರ್ಗೆ ಭೇಟಿ ನನ್ನಲ್ಲಿ ಹೊಸ ಹುರುಪು, ಚೈತನ್ಯ ಮೂಡಿಸುತ್ತಿದೆ: ನಿಖಿಲ್

Public TV
2 Min Read

ಬೆಂಗಳೂರು: ನಮ್ಮ ರಾಜಕೀಯ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆಯವರ ಆಶೀರ್ವಾದ ಪಡೆದುಕೊಂಡೆ. ಈ ಎಲ್ಲ ಹಿರಿಯರು, ದೊಡ್ಡ ದೊಡ್ಡ ನಾಯಕರ ಭೇಟಿ ನನ್ನಲ್ಲಿ ಹೊಸ ಹುರುಪು, ಚೈತನ್ಯ ಮೂಡಿಸುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಬಗ್ಗೆ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

ಹಿರಿಯ ಕಾಂಗ್ರೆಸ್ಸಿಗರು, ರಾಜಕಾರಣದಲ್ಲಿ 4-5 ದಶಕಗಳ ದಶಕಗಳನ್ನು ಕಳೆದಿರುವ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡುವ ಅವಕಾಶ ಸೋಮವಾರ ಸಿಕ್ಕಿತು. ಆ ಸಮಯದಲ್ಲಿ ಅವರ ಪುತ್ರ, ಸಮಾಜ ಕಲ್ಯಾಣ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನೂ ಕೂಡ ಭೇಟಿ ಮಾಡಿದೆ. ಬಹಳ ಖುಷಿಯಿಂದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ನನ್ನನ್ನು ಆಶೀರ್ವಾದಿಸಿ ಮುನ್ನಡೆಸುವ ದಾರಿ ತೋರಿಸಿದರು. ಹಿರಿಯರು, ದೊಡ್ಡ ದೊಡ್ಡ ನಾಯಕರ ಭೇಟಿ ನನ್ನಲ್ಲಿ ಹೊಸ ಹುರುಪು, ಚೈತನ್ಯ ಮೂಡಿಸುತ್ತಿದೆ ಎಂದು ನಿಖಿಲ್ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ನಮ್ಮ ರಾಜಕೀಯ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಆಶೀರ್ವಾದ ಪಡೆದುಕೊಂಡೆ. ಹಿರಿಯ ಕಾಂಗ್ರೆಸ್ಸಿಗರು, ರಾಜಕಾರಣದಲ್ಲಿ 4-5 ದಶಕಗಳ ದಶಕಗಳನ್ನು ಕಳೆದಿರುವ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡುವ ಅವಕಾಶ ನಿನ್ನೆ ಸಿಕ್ಕಿತು. ಆ ಸಮಯದಲ್ಲಿ ಅವರ ಪುತ್ರ, ಸಮಾಜ ಕಲ್ಯಾಣ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆಯವರನ್ನೂ ಕೂಡ ಭೇಟಿ ಮಾಡಿದೆ.

ಬಹಳ ಖುಷಿಯಿಂದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ನನ್ನನ್ನು ಆಶೀರ್ವದಿಸಿ, ಮುನ್ನಡೆಯುವ ದಾರಿ ತೋರಿಸಿದರು. ಅವರ ಅನುಭವದ ಮಾತುಗಳು ರಾಜಕೀಯ ಕ್ಷೇತ್ರದ ಅನೇಕ ಮುಖಗಳನ್ನು ಪರಿಚಯಿಸಿತು ಎಂದರೆ ತಪ್ಪಾಗಲಾರದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ನಿರ್ಣಯಕ್ಕೆ ಪೂರಕವಾಗಿ, ಜನರು ಒಪ್ಪುವಂತೆ ನಮ್ಮ ನಡೆ, ನುಡಿ, ಬದ್ಧತೆಗಳು ಇರಬೇಕು ಎಂದು ಕಿವಿಮಾತು ಹೇಳಿದರು.

ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆಯವರು ಕೂಡ ಧೈರ್ಯದಿಂದ ಮುಂದುವರಿಯುವಂತೆ ಹುರಿದುಂಬಿಸಿದರು. ಈ ಎಲ್ಲ ಹಿರಿಯರ, ದೊಡ್ಡ ದೊಡ್ಡ ನಾಯಕರ ಭೇಟಿ ನನ್ನಲ್ಲಿ ಹೊಸ ಹುರುಪು, ಚೈತನ್ಯ ಮೂಡಿಸುತ್ತಿದೆ. ಚುನಾವಣೆಯ ಸೋಲು-ಗೆಲುವುಗಳಿಂದ ಭಿನ್ನವಾಗಿ ಜನಸೇವೆಯ ಮೂಲ ಉದ್ದೇಶಗಳನ್ನು, ಕಾರ್ಯಕರ್ತರ ಜೊತೆಗೆ ಒಟ್ಟಾಗಿ ದುಡಿದು ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ನನಗೆ ಪ್ರೇರಣೆ ನೀಡಿದೆ ಎಂದು ಬರೆದು ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಇರುವ ಫೋಟೋ ಹಾಕಿ ನಿಖಿಲ್ ಗೌಡ ಪೋಸ್ಟ್ ಮಾಡಿದ್ದಾರೆ.

https://www.facebook.com/iamNikhilGowda/posts/2019476221491895

Share This Article
Leave a Comment

Leave a Reply

Your email address will not be published. Required fields are marked *