‘ಇರುವುದೆಲ್ಲವ ಬಿಟ್ಟು’ – ಮದುವೆ ನಂತರ ಮೇಘನಾ ರಾಜ್‍ಗೆ ಸಿಕ್ಕ ಮೊದಲ ಮೋಹಕ ಪಾತ್ರ!

Public TV
1 Min Read

ಬೆಂಗಳೂರು: ಮದುವೆಯಾದ ನಂತರ ಹೆಚ್ಚಿನ ನಟಿಯರು ಸಂಸಾರದ ಸಡಗರಗಳಲ್ಲಿ ಕಳೆದು ಹೋಗೋದೇ ಹೆಚ್ಚು. ಚಿರಂಜೀವಿಯವರನ್ನು ಮದುವೆಯಾದ ಮೇಘನಾ ಕೂಡಾ ಅದೇ ಸಾಲಿಗೆ ಸೇರುತ್ತಾರಾ ಅಂತೊಂದು ಆತಂಕ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಆದರೆ ಕಾಂತ ಕನ್ನಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರ ಆ ಆತಂಕವನ್ನು ದೂರಾಗಿಸಿದೆ!

ಮೇಘನಾ ರಾಜ್ ಇರುವುದೆಲ್ಲವ ಬಿಟ್ಟು ಚಿತ್ರದ ಮೂಲಕ ಪಕ್ಕಾ ಹಾಟ್ ಲುಕ್ಕಿನೊಂದಿಗೆ ಮರಳಿ ಬಂದಿದ್ದಾರೆ. ಈ ಚಿತ್ರವೇ ಅವರ ಪಾಲಿನ ಸೆಕೆಂಡ್ ಇನ್ನಿಂಗ್ಸನ್ನು ಭರ್ಜರಿಯಾಗಿಸೋ ಲಕ್ಷಣಗಳೂ ಕಾಣಿಸುತ್ತಿವೆ. ಇರುವುದೆಲ್ಲವ ಬಿಟ್ಟು ಚಿತ್ರದ ಪ್ರತೀ ಪಾತ್ರಗಳನ್ನೂ ನಿರ್ದೇಶಕ ಕಾಂತ ಕನ್ನಲಿ ವಿಶಿಷ್ಟವಾಗಿಯೇ ರೂಪಿಸಿದ್ದಾರೆ. ಅದರಲ್ಲೊಂದು ಮುಖ್ಯ ಪಾತ್ರವನ್ನು ಮೇಘನಾ ನಿರ್ವಹಿಸಿದ್ದಾರೆ.

ಈ ಚಿತ್ರದಲ್ಲಿ ಮೇಘನಾ ಐಟಿ ಉದ್ಯೋಗಿಯಾಗಿ ನಟಿಸಿದ್ದಾರೆ. ಅವರದ್ದಿಲ್ಲಿ ಪಕ್ಕಾ ಬೋಲ್ಡ್ ಪಾತ್ರ. ಇದರ ಕೆಲ ಫೋಟೋಗಳು ಜಾಹೀರಾಗಿ ಅಭಿಮಾನಿಗಳನ್ನು ಮುದಗೊಳಿಸಿವೆ. ಈವರೆಗೂ ಥರ ಥರದ ಪಾತ್ರಗಳಲ್ಲಿ ನಟಿಸಿದ್ದರೂ ಮೇಘನಾ ಅವರು ಈ ಥರದ ಹಾಟ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಇದೇ ಮೊದಲು. ತಿಲಕ್‍ಗೆ ಜೋಡಿಯಾಗಿ ನಟಿಸಿರೋ ಮೇಘನಾ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲು ಹೊರಟ ಯುವ ಮನಸುಗಳ ಸಂಕೇತದಂಥಾ ಪಾತ್ರ ನಿರ್ವಹಿಸಿದ್ದಾರೆ.

ಬೋಲ್ಡ್ ನೆಸ್ ಮಾತ್ರವಲ್ಲದೇ ಭಾವುಕವಾಗಿಯೂ ಕಾಡುವಂತಿರುವ ಈ ಪಾತ್ರವನ್ನು ಮೇಘನಾ ಬಹಳಷ್ಟು ಇಷ್ಟಪಟ್ಟು ಒಪ್ಪಿಕೊಂಡಿದ್ದರಂತೆ. ಬಿಡುಗಡೆಗೂ ಮುಂಚೆಯೇ ಅದರ ಬಗ್ಗೆ ಬರುತ್ತಿರೋ ಸಕಾರಾತ್ಮಕ ಅಭಿಪ್ರಾಯಗಳು ಮೇಘನಾರಲ್ಲಿ ಥ್ರಿಲ್ ಮೂಡಿಸಿವೆ. ಸದ್ಯ ಈ ಚಿತ್ರ ಇದೇ ತಿಂಗಳು 21ರಂದು ಬಿಡುಗಡೆಯಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *