ಲೋಕಸಭಾ ಚುನಾವಣೆ ನಂತ್ರ, ಡಿಕೆಶಿ ಜೈಲಿಗೆ ಹೋಗೋದು ಗ್ಯಾರಂಟಿ: ಶ್ರೀರಾಮುಲು

Public TV
1 Min Read

ಬಳ್ಳಾರಿ: ಲೋಕಸಭಾ ಉಪಚುನಾವಣೆಯ ಬಳಿಕ ವೈದ್ಯಕೀಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುವುದು ಖಚಿತ ಎಂದು ಬಿ.ಶ್ರೀರಾಮುಲು ಹೇಳಿದ್ದಾರೆ.

ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಉಪಚುನಾವಣೆಯ ನಂತರ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ ಜೈಲಿಗೆ ಹೋಗೋದು ಪಕ್ಕಾ. ನವೆಂಬರ್ 6ರ ನಂತರ ಅವರಿಗೆ ಜೈಲೇ ಗತಿ. ಡಿಕೆಶಿ ಮುಂದೆ ಇಲ್ಲಿರುತ್ತಾರೋ ಅಥವಾ ಜೈಲಿನಲ್ಲಿ ಇರುತ್ತಾರೋ ಅಂತಾ ಅವರ ಭವಿಷ್ಯ ಅವರಿಗೆ ಗೊತ್ತಿಲ್ಲ. ಅಂತವರು ಬಳ್ಳಾರಿ ಭವಿಷ್ಯ ನಿರ್ಧಾರ ಮಾಡುತ್ತಾರಾ? ನೀವು ಕನಕಪುರದಿಂದ ಬಂದು ಬಳ್ಳಾರಿ ಭವಿಷ್ಯ ಹೇಳ್ತೀರಾ ಎಂದು ವಾಗ್ದಾಳಿ ನಡೆಸಿದರು.

ನವೆಂಬರ್ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ಈ ಸರ್ಕಾರ ನವೆಂಬರ್ ನಲ್ಲಿ ಪತನಗೊಳ್ಳುತ್ತದೆ. ನಮ್ಮ ತಪ್ಪಿನಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಹಿನ್ನಡೆಯಾಗಿದೆ. ಹಣ ಬಲ ತೋಲ್ಬಲವಲ್ಲ ಸರ್ಕಾರವೇ ಬರಲಿ, ಲೋಕಸಭಾ ಉಪಚುನಾವಣೆಯಲ್ಲಿ ಗೆಲ್ಲೋದು ಮಾತ್ರ ಜೆ.ಶಾಂತಾ. ಹಿಂದೆ ನಾವು ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದರೇ ಸೋಲುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಡಿಕೆಶಿಯವರು ಹೋರಾಟದಿಂದ ಬಂದವರಲ್ಲ. ಬಡವರ ಪರ ಒಂದು ದಿನ ಸಹ ಹೋರಾಟ ಮಾಡಿಲ್ಲ. ಹಣ ಬಿಟ್ಟರೇ ಅವರ ಬಳಿ ಏನು ಇಲ್ಲ. ಈ ಬಾರಿಯ ಲೋಕಸಭಾ ಉಪಚುನಾವಣೆಯಲ್ಲಿ ಹಣ ಗೆಲ್ಲುವುದೋ ಅಥವಾ ಜನ ಗೆಲ್ಲುತ್ತಾರೋ ಎಂದು ಸವಾಲು ಹಾಕುತ್ತೇನೆ. ಅಲ್ಲದೇ ನವೆಂಬರ್ 6ಕ್ಕೆ ಶಾಂತಾರವರು ದೆಹಲಿಗೆ ಹೋದರೆ, ಡಿಕೆಶಿ ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *