ಕರಾಳ ರಾತ್ರಿಯ ನಂತರ ದಯಾಳ್ ತೆರೆದ ಪುಟ!

Public TV
1 Min Read

ಯಾಳ್ ಪದ್ಮನಾಭನ್ ಈಗಾಗಲೇ ಆ ಕರಾಳ ರಾತ್ರಿ ಚಿತ್ರದ ಮೂಲಕ ಗೆದ್ದಿದ್ದಾರೆ. ಅವರು ಬಿಗ್ ಬಾಸ್ ಮನೆಯಿಂದ ಕಳೆದ ವರ್ಷ ಹೊರ ಬಂದೇಟಿಗೆ ಏಕ ಕಾಲದಲ್ಲಿಯೇ ಆ ಕರಾಳ ರಾತ್ರಿ ಮತ್ತು ಪುಟ 109 ಎಂಬೆರಡು ಚಿತ್ರಗಳನ್ನು ಆರಂಭಿಸಿದ್ದರು. ಇದೀಗ ಪುಟ 109 ಈ ವಾರ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.

ಈ ಹಿಂದೆ ಕರಾಳ ರಾತ್ರಿಯಲ್ಲಿ ಬೇರೆಯದ್ದೇ ಜಗತ್ತನ್ನು ತೋರಿಸುವಲ್ಲಿ ದಯಾಳ್ ಯಶ ಕಂಡಿದ್ದರು. ಇದೀಗ ಒಂದು ರೋಚಕ ಸಸ್ಪೆನ್ಸ್ ಕಥಾನಕವನ್ನು ಮತ್ತೆ ಜೆಕೆ ಹಾಗೂ ನವೀನ್ ಕೃಷ್ಣ ಜೊತೆಗೂಡಿ ಹೇಳ ಹೊರಟಿದ್ದಾರೆ. ಪ್ರೇಕ್ಷಕರಿಗೆ ಒಂದಷ್ಟು ಅಚ್ಚರಿಗಳನ್ನೂ ಹೊತ್ತು ತಂದಿದ್ದಾರೆ.

ಪೊಲೀಸ್ ತನಿಖೆಯ ಬಗ್ಗೆ ಜನಸಾಮಾನ್ಯರಲ್ಲೊಂದು ಕುತೂಹಲವಿದೆ. ಆದರೆ ಅದನ್ನು ನೇರವಾಗಿ ಕಣ್ತುಂಬಿಕೊಳ್ಳೋ ಅವಕಾಶ ಸಿಗೋದಿಲ್ಲ. ಅಂಥಾದ್ದೊಂದು ಕೊಲೆ, ಸುಪಾರಿಯ ಸುತ್ತ ನಡೆಯೋ ಪೊಲೀಸ್ ತನಿಖೆಯನ್ನು ಕಣ್ಣಿಗೆ ಕಟ್ಟುವಂತೆ, ಪ್ರತಿ ಕ್ಷಣವೂ ಸೀಟಿನ ತುದಿಗೆ ತಂದು ಕೂರಿಸೋ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರಂತೆ ದಯಾಳ್.

ದಯಾಳ್ ಪದ್ಮನಾಭನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಅವರ ಛಾಯಾಗ್ರಹಣವಿದೆ. ಗಣೇಶ್ ನಾರಾಯಣ್ ಸಂಗೀತ ನಿರ್ದೇಶನ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಸಂಕಲನವಿರುವ ಈ ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಜೆ ಕೆ, ನವೀನ್ ಕೃಷ್ಣ, ವೈಷ್ಣವಿ ಚಂದ್ರನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅನುಪಮ ಗೌಡ ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *