EXCLUSIVE: ರೆಡ್ಡಿ ಆಯ್ತು, ಈಗ ಮತ್ತೋರ್ವ ರಾಜಕಾರಣಿ ಕುಟುಂಬದ ಮೇಲೆ ಸಿಸಿಬಿ ಕಣ್ಣು

Public TV
2 Min Read

-ಸದ್ದು ಗದ್ದಲವಿಲ್ಲದೇ ನಡೆದಿದೆ ದಾಳಿ

ಬೆಂಗಳೂರು: ಉಪಚುನಾವಣೆ ಬಳಿಕ ಮಾಜಿ ಸಚಿವ ಜನಾರ್ದನ ರೆಡ್ಡಿ ಅಕ್ರಮ ಹಣ ವರ್ಗಾವಣೆ ಮತ್ತು ಡೀಲ್ ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಿಸಿಬಿ ರಾಜ್ಯದ ಪ್ರಭಾವಿ ಮುಖಂಡ, ಮಾಜಿ ಸಿಎಂ ಸಿದ್ದರಾಮಯ್ಯ ಕುಟುಂಬದ ಮೇಲೆ ಕಣ್ಣಿಟ್ಟಿದ್ದು ಈಗಾಗಲೇ ನೋಟಿಸ್ ಕೂಡ ಜಾರಿ ಮಾಡಿದೆ.

ಸಿದ್ದರಾಮಯ್ಯರ ಸೊಸೆ ಸ್ಮಿತಾ ರಾಕೇಶ್ ಪಾಲುದಾರಿಕೆಯ ಪಬ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸುವ ಚಿಂತನೆ ನಡೆಸಿದ್ದಾರೆ. ಲಿ ಮೆರಿಡಿಯನ್ ಹೋಟೆಲ್ ನಲ್ಲಿ ಸ್ಮಿತಾ ರಾಕೇಶ್ ‘ಶುಗರ್ ಫ್ಯಾಕ್ಟರಿ’ ಎಂಬ ಹೆಸರಿನ ಪಬ್ ನಡೆಸುತ್ತಿದ್ದಾರೆ. ಈ ಪಬ್ ನ್ನು ಕಿರುತೆರೆ ನಟ ರೋಹನ್ ಗೌಡ ಸಹಪಾಲುದಾರಿಕೆಯನ್ನು ಹೊಂದಿದ್ದಾರೆ. ಸ್ಮಿತಾ ರಾಕೇಶ್ ಒಡೆತನದ ಪಬ್ ಹಲವು ಅಬಕಾರಿ ಕಾಯ್ದೆಯನ್ನು ಉಲ್ಲಂಘನೆ ಮಾಡಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಅಬಕಾರಿ ನಿಯಮ ಉಲ್ಲಂಘಿಸಿ ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ಪಬ್ ತೆರೆದಿರೋದಕ್ಕೆ ಡಿಸಿಪಿ ಗಿರೀಶ್ ನೇತೃತ್ವದ ಟೀಂ ರೇಡ್ ಮಾಡಿ ಅಬಕಾರಿ ಅಧಿಕಾರಿಗಳಿಗೆ ಪಬ್ ಮುಚ್ಚಿಸಿ ಅಂತಾನೂ ಸೂಚನೆ ಕೊಟ್ಟಿದ್ದಾರಂತೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತಾನಾಡಿರುವ ಅಬಕಾರಿ ವೆಸ್ಟ್ ಡಿಸಿ ಶಿವನೇಗೌಡ, ನಾವು ನೋಟಿಸ್ ನೀಡಿದ್ದೇವೆ 10 ದಿನದೊಳಗೆ ಉತ್ತರ ಬಾರದೇ ಇದ್ದರೆ ಪಬ್‍ನ್ನು ಮುಚ್ಚುತ್ತೇವೆ ಅಂತಾ ಹೇಳಿದ್ದಾರೆ.

ಅನೇಕ ಪಬ್‍ಗಳು ಸಮಯ ಉಲ್ಲಂಘನೆ ಮಾಡಿ ತೆರೆದಿದ್ದರೂ ತಲೆಕೆಡಿಸಿಕೊಳ್ಳದ ಸಿಸಿಬಿ ಸಿದ್ದರಾಮಯ್ಯನವರ ಸೊಸೆಯ ಪಬ್ ಮೇಲೆ ದಾಳಿ ಮಾಡಿರುವ ಹಿಂದೆ ಪ್ರಭಾವಿಗಳು ಇದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಅಬಕಾರಿಯಲ್ಲಿ ಸಿಎಂ ಕುಮಾರಸ್ವಾಮಿ ಆದೇಶವಿಲ್ಲದೇ ಹುಲ್ಲು ಕಡ್ಡಿಯೂ ಅಲ್ಲಾಡಲ್ಲ, ಅಂತಹದರಲ್ಲಿ ಮಾಜಿ ಸಿಎಂ ಸೊಸೆಯ ಪಬ್‍ನ್ನು ಮುಚ್ಚಿಸುವ ಹಿಂದೆ ರಾಜಕೀಯ ಹುನ್ನಾರವಿರಬಹುದೇ ಅನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಸಿದ್ದರಾಮಯ್ಯನವರನ್ನು ಕಂಟ್ರೋಲ್ ಮಾಡೋದಕ್ಕೆ ಸಿಸಿಬಿಯನ್ನು ಬಳಸಿಕೊಳ್ಳಲಾಗಿದೆ ಅನ್ನೋ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ. ಸ್ಮಿತಾ ಸೇರಿದಂತೆ ಕಿರುತೆರೆ ನಟ ಬಿಗ್ ಬಾಸ್ ಖ್ಯಾತಿಯ ರೋಹನ್ ಗೌಡ ಕೂಡ ಈ ಶುಗರ್ ಫ್ಯಾಕ್ಟರಿಯ ಪಾಲುದಾರರಾಗಿದ್ದಾರೆ. ಒಂದು ವೇಳೆ ನೋಟಿಸ್‍ಗೆ ಸ್ಮಿತಾ ರಾಕೇಶ್ ಉತ್ತರ ನೀಡದೇ ಇದ್ದಲ್ಲಿ ಪಬ್ ಮುಚ್ಚಿಸುವ ಸಾಧ್ಯತೆಗಳಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *