ಗೋಬಿ, ಕಬಾಬ್ ಬಳಿಕ ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ

Public TV
1 Min Read

ಬೆಂಗಳೂರು: ಗೋಬಿ, ಕಬಾಬ್ ಬಳಿಕ ಪಾನಿಪುರಿಯಲ್ಲಿ (Panipuri) ಕ್ಯಾನ್ಸರ್‌ಕಾರಕ (Cancer) ಅಂಶಗಳು ಪತ್ತೆಯಾಗಿದೆ. ಬೆಂಗಳೂರಿನ 49 ಪ್ರದೇಶಗಳಿಂದ ಸಂಗ್ರಹಿಸಿದ ಪಾನಿಪುರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಇರೋದು ಪತ್ತೆಯಾಗಿದೆ.

ವಿದ್ಯಾರ್ಥಿಗಳು, ಯುವತಿಯರು ಪಾನಿಪುರಿ ಅಂದರೆ ಬಾಯಿ ಬಾಯಿ ಬಿಡುತ್ತಾರೆ. ಪಾನಿಪುರಿ ತಿನ್ನೋಕೆ ಸಾಲು ಗಟ್ಟಿ ನಿಲ್ಲುತ್ತಾರೆ. ಅಂತಹ ಪಾನಿಪುರಿ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್. ಪಾನಿಪುರಿಗೆ ಬಳಸುವ ಸಾಸ್ ಮತ್ತು ಮೀಟಾ ಖಾರದ ಪುಡಿಯಲ್ಲಿ ಕ್ಯಾನ್ಸರ್‌ಕಾರಕ ಇರೋದು ಪತ್ತೆಯಾಗಿದೆ. ಜೊತೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (Department of Food Safety and Quality) ಬೆಂಗಳೂರು ಸೇರಿದಂತೆ ರಾಜ್ಯದ 79 ಕಡೆ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಹಾನಿಕಾರಕ ಅಂಶ ಇರೋದು ಪತ್ತೆಯಾಗಿದೆ. ಇನ್ನು ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್‌ಕಾರಕವಿರುವ ಸಾಸ್, ಮೀಟಾ ಖಾರದ ಪುಡಿ ಬಳಸುತ್ತಿರೋದು ವರದಿಯಾಗಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ನಾಳೆಯಿಂದ ಭಾರಿ ವಾಹನಗಳ ಸಂಚಾರ ನಿಷೇಧ

ಆಹಾರ ಮತ್ತು ಸುರಕ್ಷತಾ ಇಲಾಖೆ ಟೆಸ್ಟ್‌ನಲ್ಲಿ ಸನ್‌ಸೆಟ್ ಯಲ್ಲೋ 1, ಸನ್‌ಸೆಟ್ ಯಲ್ಲೋ 2 ಜೊತೆಗೆ ಬ್ರಿಲಿಯಂಟ್ ಬ್ರೂ ಮತ್ತು ಕಾರ್ಮೋಸಿಯಸ್ ರಾಸಾಯನಿಕ ಅಂಶ ಬೆರಕೆ ಆಗಿರೋದು ಪತ್ತೆಯಾಗಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗಲಿದೆ. ಹಾಗಾಗಿ ಕ್ಯಾನ್ಸರ್‌ಕಾರಕ ಆಗಿರೋ ಕಲಬೆರಕೆ ಬೆರೆಸಬಾರದು ಎನ್ನುತ್ತಿದ್ದಾರೆ. ಈ ವಾರದಲ್ಲಿ ಪಾನಿಪುರಿಗೆ ಹಾಕೋ ಸಾಸ್ ಮತ್ತು ಮಿಟಾ ಬ್ಯಾನ್ ಮಾಡೋಕೆ ನಿರ್ಧರಿಸಿದ್ದು, ಅಧಿಕೃತ ಘೋಷಣೆ ಮಾಡಲಿದ್ದಾರೆ. ಇದನ್ನೂ ಓದಿ: ಜುಲೈ 3 ರಿಂದ ಜಿಯೋದಿಂದ ಹೊಸ ಅನ್‌ಲಿಮಿಟೆಡ್ ಪ್ಲಾನ್‌

ಒಟ್ಟಾರೆ ಕಾಟನ್ ಕ್ಯಾಂಡಿ, ಗೋಬಿ, ಕಬಾಬ್ ಬಳಿಕ ಪಾನಿಪುರಿ ತಯಾರಿಕೆಯಲ್ಲಿ ಬಳಸುವ ಸಾಸ್‌ನಲ್ಲೂ ಹಾನಿಕಾರಕ ಇರೋದು ಪತ್ತೆಯಾಗಿದೆ. ಈ ವಾರದಲ್ಲಿ ಹಾನಿಕಾರಕ ರಾಸಾಯನಿಕ ಅಂಶಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಕೊಡಗಿನಲ್ಲಿ ಭಾರೀ ಮಳೆ- ದುಬಾರೆ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿಷೇಧ

Share This Article