ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?

Public TV
2 Min Read

ಮಿಳು ನಟ ಧನುಶ್ (Dhanush) ಹಾಗೂ ಸೀತಾ ರಾಮಂ ಬೆಡಗಿ ಮೃಣಾಲ್ ಠಾಕೂರ್ (Mrunal Thakur) ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. ಇದಕ್ಕೆ ಸಾಕ್ಷಿ ಇಬ್ಬರ ನಡುವಿನ ಭಾರೀ ಅನ್ಯೋನ್ಯತೆ.

ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ನಟಿಸದಿದ್ದರೂ ಈ ಮಟ್ಟಿಗೆ ಸ್ನೇಹ ಹೇಗೆ ಉಂಟಾಯಿತು ಎಂದು ಪ್ರಶ್ನೆ ಹುಟ್ಟುಹಾಕಿದೆ. ಮೃಣಾಲ್ ಕೈ ಹಿಡಿದಿರುವ ಧನುಶ್ ಫೋಟೋ ವೈರಲ್ ಆಗಿದೆ. ಅಷ್ಟಕ್ಕೂ ಇದು ನಡೆದಿದ್ದು ತೇರೆ ಇಷ್ಕ್ ಮೆ ಚಿತ್ರದ ಶೂಟಿಂಗ್ ರ‍್ಯಾಪ್ ಅಪ್ ಪಾರ್ಟಿಯಲ್ಲಿ ಎಂದು ಹೇಳಲಾಗುತ್ತಿದೆ.

ಈ ಚಿತ್ರಕ್ಕೂ ಮೃಣಾಲ್‌ಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಮೃಣಾಲ್ ಈ ಪಾರ್ಟಿಯಲ್ಲಿದ್ದರು ಎನ್ನಲಾಗುವ ಫೋಟೋ ವೈರಲ್‌ ಆಗಿದೆ. ಇಬ್ಬರ ನಡುವಿನ ಆಪ್ತತೆ ನೋಡುಗರಲ್ಲಿ ಪ್ರೇಮ ಸಂಬಂಧವನ್ನೇ ಕಲ್ಪಿಸುತ್ತಿದೆ.

ಈ ಹಿಂದೆ ಮೃಣಾಲ್ ಅಭಿನಯದ ಸನ್ ಆಫ್ ಸರ್ದಾರ್ 2 ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‌ನಲ್ಲಿ ಪಾಲ್ಗೊಳ್ಳಲು ಚೆನ್ನೈನಿಂದ ಮುಂಬೈಗೆ ಧನುಶ್‌ ಬಂದಿದ್ದರು. ಈ ಎರಡು ಘಟನೆಗಳು ಅನುಮಾನಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಇದನ್ನೂ ಓದಿ: `ಕೇರಂ, ಬ್ಯಾಡ್ಮಿಂಟನ್ ಆಡುವಾಗ ಸೆಕೆಂಡ್‍ನಲ್ಲಿ ಸೋಲಿಸುತ್ತಿದ್ದರು’- ಸುಮಲತಾ ನೆನಪು ಹಂಚಿಕೊಂಡಿದ್ದು ಯಾರ ಬಗ್ಗೆ?

ಇಬ್ಬರ ಮೊದಲ ಭೇಟಿ ಸೀತಾರಾಮಂ ಸಕ್ಸಸ್ ಇವೆಂಟ್‌ನಲ್ಲಿ ನಡೆದಿತ್ತು. ಅಲ್ಲಿಂದ ಸ್ನೇಹ ಶುರುವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅಂದಹಾಗೆ ಧನುಶ್ ಈಗಾಗಲೇ ರಜನಿಕಾಂತ್ ಪುತ್ರಿ ಐಶ್ವರ್ಯರನ್ನು (Aishwarya Rajinikanth) ವಿವಾಹವಾಗಿ ವಿಚ್ಛೇದನವನ್ನು (Divorce) ನೀಡಿದ್ದರು.

ಇಬ್ಬರು ಪರಸ್ಪರ ಬೇರೆಯಾಗುವು ಬಗ್ಗೆ ಧನುಶ್ 2022ರಲ್ಲೇ ಘೋಷಿಸಿದ್ದರು. ಇದೀಗ ಅಧಿಕೃತ ವಿಚ್ಛೇದನವೂ ಆಗಿದೆ. ವಿಚ್ಛೇದನಕ್ಕೆ ಅಸಲಿ ಕಾರಣ ತಿಳಿದುಬಂದಿರಲಿಲ್ಲ. ಇದೀಗ ಮೃಣಾಲ್ ಜೊತೆ ಧನುಶ್ ಇನ್ನಿಲ್ಲದ ಸ್ನೇಹ ಇನ್ನೇನೇನೋ ಗಾಸಿಪ್‌ಗೆ ದಾರಿಮಾಡಿಕೊಟ್ಟಿದೆ.

Share This Article